ಕೊಳ್ಳೇಗಾಲ: ರೇಣುಕಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ರೇಣುಕಾಚಾರ್ಯರ ಪಂಚಲೋಹ ಪುತ್ಥಳಿಯ ಬೆಳ್ಳಿ ರಥಯಾತ್ರೆ ಮೆರವಣಿಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ನಗರದ ನಡೆದ ಮೆರವಣಿಗೆಗೆ ಅಜ್ಜೀಪುರ ಮಠದ ನಂದೀಶ ಶಿವಚಾರ್ಯ ಸ್ವಾಮೀಜಿ, ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮರಳೆಗವಿ ಮಠ ಮುಮ್ಮಡಿ ಶಿವರುದ್ರಸ್ವಾಮೀಜಿ, ಪೂರಿಗಾಲಿ, ಕುಂದೂರು, ಮುಡುಕುತೋರೆ, ತಲಕಾಡು, ದನಗೂರು, ಚಿಕ್ಕಿಂದುವಾಡಿ, ಕೆಸ್ತೂರು, ಚಿಲಕವಾಡಿ, ಕೊಳ್ಳೇಗಾಲ ಭಿಕ್ಷುದ ಮಠದ ಶಿವಪ್ಪ ಸ್ವಾಮೀಜಿ, ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.

ಬಳಿಕ ವಿವಿಧ ಕಲಾತಂಡದೊಂದಿಗೆ ನಗರದ ಬಸವೇಶ್ವರ ನಗರ ಬಡಾವಣೆಯ ಗಣಪತಿ ದೇವಸ್ಥಾನದಿಂದ ಹೊರಟು ಶ್ರೀನಿವಾಸ ಟಾಕೀಸ್ ರಸ್ತೆ, ಗುರುಕಾರ್ ವೃತ್ತ, ಡಾ.ರಾಜಕುಮಾರ ರಸ್ತೆ, ಮಸೀದಿ ವೃತ್ತ, ಕನ್ನಿಕಾ ಪರಮೇಶ್ವರಿ ರಸ್ತೆ, ಆಟದ ಮೈದಾನ ವೃತ್ತ, ಕಾವೇರಿ ರಸ್ತೆ, ನಾರಾಯಣಸ್ವಾಮಿ ದೇವಸ್ಥಾನ ರಸ್ತೆ, ಈಶ್ವರ ದೇವಸ್ಥಾನ, ಚಿನ್ನಬೆಳ್ಳಿ ರಸ್ತೆ, ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆ ಮೂಲಕ ಮೆರವಣಿಗೆ ತೆರಳಿ ರಾಜರಾಜೇಶ್ವರಿ ಕಲ್ಯಾಣ ಮಂಟಪ ತಲುಪಿತು.

ಈ ವೇಳೆ ಮಂಗಳವಾದ್ಯ, ವೀರಗಾಸೆ, ಮಹಿಳಾ ವೀರಗಾಸೆ, ಕಂಬ ಕುಣಿತ, ಚಂಡಿ ಸಿಂಗಾರಿ ಮೇಳ ಹಾಗೂ ನಂದಿಕಂಬಗಳನ್ನು ಹೊತ್ತು ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಆರ್.ನರೇಂದ್ರ, ಪರಿಮಳಾ ನಾಗಪ್ಪ, ಎಸ್.ಬಾಲರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಶಿವಕುಮಾರ್, ಎಸ್.ದತ್ತೇಶ್ ಕುಮಾರ್, ಉದ್ಯಮಿ ನಿಶಾಂತ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-37-1941279769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.