ಕೊಳ್ಳೇಗಾಲ: ಇಲ್ಲಿನ ನಗರಸಭೆಯ ಪೌರಾಯುಕ್ತರಾಗಿದ್ದ ರುದ್ರಮ್ಮ ಶರಣಯ್ಯ ಅವರನ್ನು ಬೆಂಗಳೂರಿನ ಪೌರಾಡಳಿತ ನಿರ್ದೇಶಕರ ಕಚೇರಿ ಸಹಾಯಕ ನಿದೇಶಕರು(ಆಡಳಿತ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ರುದ್ರಮ್ಮಶರಣಯ್ಯ 4 ತಿಂಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದರು. ಅವರು ಕೆಲಸ ನಿರ್ವಹಿಸುವ ಅವಧಿಯಲ್ಲಿ ಖಾತೆದಾರರಿಗೆ ಇ–ಸ್ವತ್ತು ಮತ್ತು ಖಾತೆ ನವೀಕರಣ, ಟ್ರೇಡ್ ಲೈಸೆನ್ಸ್ ಸಕಾಲದಲ್ಲಿ ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಚೇರಿ ಮುಂದೆ ಪ್ರತಿಭಟನೆ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಕೊಳ್ಳೇಗಾಲದಿಂದ ಚಾಮರಾಜನಗರದವರೆಗೂ ಪಾದಯಾತ್ರೆ ಸಹ ಮಾಡಲಾಗಿತ್ತು. ಪ್ರತಿದಿನ ಪೌರಾಯುಕ್ತರ ಕಚೇರಿಯಲ್ಲಿ ರುದ್ರಮ್ಮಶರಣಯ್ಯ ಅವರ ಜೊತೆ ಸಾರ್ವಜನಿಕರು ಒಂದಲ್ಲಾ ಒಂದು ಕಾರಣಕ್ಕೆ ವಾಗ್ವಾದ ನಡೆಸುತ್ತಿದ್ದರು.

ರುದ್ರಮ್ಮಶರಣಯ್ಯ ಅವರು ಶುಕ್ರವಾರ ಒಂದು ದಿನದ ರಜೆ ಹಾಕಿದ್ದಾಗ ಪ್ರಭಾರ ಪೌರಾಯುಕ್ತಾರಾಗಿ ಪರಿಸರ ವಿಭಾಗದ ಎಇಇ ಪ್ರಸನ್ನ ಅವರನ್ನು ನೇಮಿಸಲಾಗಿತ್ತು. ರುದ್ರಮ್ಮ ವರ್ಗಾವಣೆ ಆಗಿದ್ದು ಎಇಇ ನಟರಾಜು ಅವರನ್ನು ಪ್ರಭಾರ ಪೌರಾಯುಕ್ತರಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರು ಈ ಹಿಂದೆ ಪ್ರಭಾರ ಪೌರಾಯುಕ್ತರಾಗಿ ಕೆಲಸ ಮಾಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-37-1047753756

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.