ಕೊಳ್ಳೇಗಾಲ: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಸತ್ತೇಗಾಲ ಬಳಿ ಜಲಾವೃತವಾಗಿದೆ.

ಗ್ರಾಮದ ರಾಷ್ಟ್ರೀಯ ಹೆದ್ದಾರಿ 984ರ ಅಭಿವೃದ್ಧಿ ಮಾಡುವಾಗ ರಸ್ತೆಯನ್ನು ಎತ್ತರ ಮಾಡಿರುವುದರಿಂದ ಕೆಳಭಾಗದಲ್ಲಿನ ಉಗನಿಯಾ ಗ್ರಾಮಕ್ಕೆ ಹೋಗುವ ರಸ್ತೆ ಮಳೆ ನೀರಿನಿಂದ ತುಂಬಿಕೊಂಡ ಕಾರಣ ರೈತರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಉಂಟಾಯಿತು.

ಸುಮಾರು 3 ವರ್ಷಗಳ ಹಿಂದೆ ರಸ್ತೆಯನ್ನು ಎತ್ತರಿಸಿ ರಸ್ತೆ ಅಭಿವೃದ್ಧಿ ಮಾಡುವಾಗ ಸತ್ತೇಗಾಲದಿಂದ ಉಗನಿಯಾ ಗ್ರಾಮಕ್ಕೆ ತೆರಲುವ ರಸ್ತೆಯು ಕೆಳಭಾಗವಾಗಿದ್ದು ಮಳೆ ನೀರು ಬಂದ ಸಂದರ್ಭದಲ್ಲಿ ರಸ್ತೆಯೆಲ್ಲಾ ಸುಮಾರು 4ರಿಂದ 5 ಅಡಿಗಳ ವರೆಗೆ ನೀರು ನಿಂತು ಕೆರೆಯಂತಾಗುತ್ತಿದೆ ಇದರಿಂದ ರೈತರಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.

ಈ ಭಾಗದಲ್ಲಿ ರೈತರ ಜಮೀನುಗಳಿದ್ದು, ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಲು ಕೃಷಿ ಸಲಕರಣೆಗಳನ್ನು ಗೊಬ್ಬರ ಮತ್ತು ಔಷಧಗಳನ್ನು ಕೊಂಡೊಯ್ಯಲು ಹಾಗೂ ಈ ರಸ್ತೆ ಮೂಲಕ ಉಗನಿಯಾ, ಪಾಳ್ಯ, ದೊಡ್ಡಿಂದುವಾಡಿ ಗ್ರಾಮದ ಮಾರ್ಗವಾಗಿ ಮಲೈ ಮಹದೇಶ್ವರ ಬೆಟ್ಟಕ್ಕೆ ವಾಹನಗಳಲ್ಲಿ ಪಾದಚಾರಿಗಳು ಈ ರಸ್ತೆಯಲ್ಲಿ ತೆರಳು ತುಂಬಾ ತೊಂದರೆ ಉಂಟಾಗುತ್ತಿದೆ.

‘ರಸ್ತೆ ಮಾಡುವಾಗ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ತುಂಬಾ ತೊಂದರೆಯಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಸತ್ತೇಗಾಲ ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ಸತ್ಯಾದ್ರಿ ಯುವಕರ ಸಂಘದ ಅಧ್ಯಕ್ಷ ಅವಿನಾಶ್ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-37-938984714

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.