ಕೊಳ್ಳೇಗಾಲ: ರೀಲರ್ಸ್ಗಳ ಅನುಕೂಲ ಕ್ಕಾಗಿ ಹಾಗೂ ಕೊಳ್ಳೇಗಾಲದ ರೇಷ್ಮೆ ಬ್ರಾಂಡ್ಗಾಗಿ ಸಿಲ್ಕ್ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದಲ್ಲಿ ಸ್ಥಗಿತಗೊಂಡಿರುವ ರೇಷ್ಮೆ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದರು.ರೇಷ್ಮೆ ಕೃಷಿಗೆ ಕೊಳ್ಳೇಗಾಲ ಬಹಳ ಹೆಸರು ಮಾಡಿದೆ. ಸಿಲ್ಕ್ ಪಾರ್ಕ್ ಆಗಬೇಕು. ಪಾರ್ಕ್ ನಿರ್ಮಾಣ ಘೋಷಣೆಯಿಂದ ಮತ್ತಷ್ಟು ಬಲಬಂದಂತಾಗಿದೆ. ರೇಷ್ಮೆ ಬೆಳೆಗಾರರಿಗೂ ಹಾಗೂ ಮಾರಾಟಗಾರರಿಗೂ ಅನುಕೂಲವಾಗುವ ಎಲ್ಲಾ ಸೌಲಭ್ಯಗಳಿರುವ ಪಾರ್ಕ್ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ಇದರಿಂದ ಕೊಳ್ಳೇಗಾಲ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.

ರೇಷ್ಮೆ ಕೃಷಿ, ನೂಲು ತೆಗೆಯುವುದು, ನೇಯ್ಗೆ ಮತ್ತು ವಸ್ತ್ರ ಉತ್ಪಾದನೆ ಪ್ರಕ್ರಿಯೆ ಹಾಗೂ ಮೌಲ್ಯವರ್ಧನೆಗೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶದಿಂದ ಸರ್ಕಾರ ಈ ಯೋಜನೆ ರೂಪಿಸಿದೆ. ಸಿಲ್ಕ್ ಪಾರ್ಕ್ ಗಳಲ್ಲಿ ರೇಷ್ಮೆ ನೂರು ತಯಾರಿಕೆ ಟೆಸ್ಟಿಂಗ್ ಗುಣಮಟ್ಟ ಪರೀಕ್ಷೆ ಪ್ಯಾಕಿಂಗ್ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒಂದೇ ಸ್ಥಳಗಳಲ್ಲಿ ಒದಗಿಸಲಾಗುತ್ತದೆ. ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೀಲರ್ಸ್ ಗಳಿಗೆ ಅನುಕೂಲವಾಗುತ್ತದೆ ಗುಣಮಟ್ಟ ಸುಧಾರಿಸುತ್ತದೆ ಮತ್ತು ಸೂಕ್ತ ಮಾರುಕಟ್ಟೆಯು ದೊರೆಯುತ್ತದೆ ವಿಶೇಷವಾಗಿ ಮಹಿಳಾ ಮತ್ತು ಗ್ರಾಮೀಣ ಉದ್ಯೋಗಗಳಿಗೆ ಈ ಯೋಜನೆಯಿಂದ ಹೆಚ್ಚು ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ರೀಲರ್ಸ್ ಸಮಸ್ಯೆಗಳು ದಿನದ ದಿನಕ್ಕೆ ಹೆಚ್ಚಾಗುತ್ತಿದೆ.ಒಂದೇ ಕಡೆ ಎಲ್ಲವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದಲ್ಲಿ 13 ಎಕರೆಯಷ್ಟು ಸ್ಥಗಿತಗೊಂಡಿರುವ ರೇಷ್ಮೆ ನೂಲು ಬಿಚ್ಚುವ ಕಾರ್ಖಾನೆಗೆ ಮರು ಜೀವ ಬಂದಂತಾಗಿದೆ. ಅನೇಕರು ಉದ್ಯೋಗವನ್ನು ಕಲ್ಪಿಸಿಕೊಳ್ಳಬಹುದು. ಜಿಲ್ಲಾ ಉಸ್ತುವಾರಿಗಳಾದ ಕೆ.ವೆಂಕಟೇಶ್ ಹಾಗೂ ಸಚಿವ ಮಹದೇವಪ್ಪ ಅವರ ಸಹಕಾರದಿಂದ ಸಿಲ್ಕ್ ಪಾರ್ಕ್ ನಿರ್ಮಾಣವಾಗುತ್ತಿದೆ ಎಂದರು.

14 ಕಟ್ಟಡಗಳನ್ನು ನವೀಕರಣ ಮಾಡಿ ಮತ್ತಷ್ಟು ಕಟ್ಟಡಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಬೇಕು ಎಂದರು.

ಹೆಚ್ಚುವರಿ ನಿರ್ದೇಶಕ ವೈ.ಟಿ ತಿಮಯ್ಯ, ಜಂಟಿ ನಿರ್ದೇಶಕಿ ಪ್ರತಿಭಾ, ರಾಚಪ್ಪ, ಪುಟ್ಟಸ್ವಾಮಿ, ಕೇಂದ್ರೀಯ ರೇಷ್ಮೆ ವಿಜ್ಞಾನಿ ರವಿಕುಮಾರ್, ಮಹದೇವಯ್ಯ, ಡಾ.ಶ್ರೀನಿವಾಸ್,ಮಾರುಕಟ್ಟೆ ಉಪ ನಿರ್ದೇಶಕ ರಾಚಪ್ಪಾಜಿ, ರೇಷ್ಮೆ ಸಹಾಯಕ ನಿರ್ದೇಶಕ ಎನ್.ಪುಟ್ಟಮಾದಯ್ಯ , ರಿಲರ್ಸ್ ಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-37-103536063

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.