ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಇನ್ನೂ ಚೇತರಿಸಿಲ್ಲ ಅನ್ನ ಕೊಡುವವರ ಬದುಕು

ಶೇ 70ರಷ್ಟು ವಹಿವಾಟು ಕುಂಠಿತ, ಬಾಡಿಗೆ ನೀಡುವುದಕ್ಕೂ ಹೆಣಗಾಟ
Last Updated 27 ಮೇ 2020, 19:45 IST
ಅಕ್ಷರ ಗಾತ್ರ

ಯಳಂದೂರು: ಹಸಿದವರ ಪಾಲಿನ ಅನ್ನಪೂರ್ಣೆಯಾಗಿದ್ದ ಹೋಟೆಲ್ ಉದ್ಯಮ ಲಾಕ್‌ಡೌನ್‌ನಿಂದಾಗಿನಲುಗಿದೆ. ಲಾಕ್‌ಡೌನ್‌ ಸಡಿಲಿಕೆ ನಂತರ ಅರ್ಧ ಭಾಗಿಲು ತೆಗೆದು ಆಹಾರ ನೀಡುವಂತಾಗಿದೆ. ವ್ಯಾಪಾರ ಇನ್ನೂ ಚೇತರಿಸಿಕೊಂಡಿಲ್ಲ.ಹೀಗಾಗಿ,ಕ್ಯಾಂಟೀನ್‌, ದರ್ಶಿನಿ, ಟೀ ಅಂಗಡಿಗಳ ಮಾಲೀಕರು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.ಬಾಡಿಗೆ ಕಟ್ಟಲು ಆಗದೆ ಶಾಶ್ವತವಾಗಿ ಬಾಗಿಲು ಮುಚ್ಚುವ ಸ್ಥಿತಿ ತಲುಪಿದ್ದಾರೆ.

ಪಟ್ಟಣದ ಹೋಟಲ್‌ಗಳಲ್ಲಿ ಸದಾ ಗ್ರಾಹಕರು ತುಂಬಿರುತ್ತಿದ್ದರು. ಹಲವವರಿಗೆ ಹರಟೆಹೊಡೆಯವ ತಾಣವೂ ಆಗಿತ್ತು. ಇಂತಹ ಕಡೆಗಳಲ್ಲಿ ಕುಳಿತುಕೊಳ್ಳಲು ಈಗ ಸ್ಥಳಇಲ್ಲವಾಗಿದೆ. ಇರುವ ಟೇಬಲ್‌, ಕುರ್ಚಿಗಳು ಮೂಲೆ ಸೇರಿವೆ. ಅರ್ಧ ಬಾಗಿಲಿನಲ್ಲಿ ನಿಂತಮಾಲೀಕರು, ಒಂದಿಬ್ಬರು ಸಪ್ಲಾಯರ್‌ಗಳು ಮಾತ್ರ ಕಾಣಸಿಗುತ್ತಾರೆ. ಆಗೀಗ ಒಂದಿಬ್ಬರುಗ್ರಾಹಕರು ಪಾರ್ಸೆಲ್ ಕೊಳ್ಳಲು ಬರುವುದಿದೆ.

ಪಟ್ಟಣದಲ್ಲಿ 10 ಹೋಟೆಲ್‌ಗಳಿವೆ. ಸಣ್ಣ ಹೋಟೆಲ್‌ಗಳು, ದರ್ಶಿನಿಗಳು ಸೇರಿಸಿದರೆ ಈಸಂಖ್ಯೆ 50 ಮುಟ್ಟುತ್ತದೆ. ಮಾಲೀಕರು ಮತ್ತು ಸರ್ವರ್‌ಗಳು, ಕ್ಲೀನರ್‌ಗಳು ಸೇರಿ300ಕ್ಕೂ ಹೆಚ್ಚು ಜನರು ಹೋಟೆಲ್‌ ಉದ್ಯಮ ನಂಬಿಕೊಂಡಿದ್ದಾರೆ. ಕೋವಿಡ್‌–19 ಆವರಿಸುತ್ತಿದ್ದಂತೆ ಹೋಟೆಲ್‌ಗಳಿಗೆ ಗ್ರಾಹಕರು ಬರುವುದು ನಿಂತಿತು. ಲಾಕ್‌ಡೌನ್‌ ನಂತರ ಬಂದ್‌ ಆಯಿತು. ಈಗ ತೀರಅನಿವಾರ್ಯ ಇದ್ದವರು ಮಾತ್ರ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಾರೆ.

‘ಲಾಕ್‌ಡೌನ್‌ಗೂ ಮೊದಲ ದೈನಂದಿನ ವಹಿವಾಟಿಗೆ ಹೋಲಿಸಿದರೆ ಈಗ ಶೇ 25 ವಹಿವಾಟುನಡೆಯುತ್ತಿದೆ. ಭಾನುವಾರ ಆದಾಯ ಶೂನ್ಯ. ಪ್ರತಿ ದಿನ ಮಧ್ಯಾಹ್ನ 100 ಊಟ ಖಾಲಿಆಗುತ್ತಿದ್ದ ಹೋಟೆಲ್‌ನಲ್ಲಿ ಈಗ 10 ಊಟವೂ‌ ಹೋಗುವುದಿಲ್ಲ. ಸಂಜೆತಿಂಡಿ, ಟೀ ಹೆಚ್ಚು ಖಾಲಿಯಾಗುತ್ತಿತ್ತು. ಈಗ ಹತ್ತಾರು ಜನರು ಬಂದರೆ ಹೆಚ್ಚು.ದಿನಕ್ಕೆ ₹1,000 ಆದಾಯವೂ ಇರುವುದಿಲ್ಲ’ ಎಂದು ಫ್ರೆಂಡ್ಸ್‌ ಹೋಟೆಲ್‌ಮಾಲೀಕ ಬಾಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘15 ಕೆಲಸಗಾರರಲ್ಲಿ ಬರುವಲ್ಲಿ ಈಗ ಮೂರು ಜನರು ಮಾತ್ರ ಬರುತ್ತಿದ್ದಾರೆ. ಅವರ ಬದುಕಿಗೆ ಕಷ್ಟ ಇಲ್ಲದಂತೆ ಸಂಬಳನೀಡುವುದು ಅನಿವಾರ್ಯ. ಉಳಿದವರ ಜೀವನ ಬೀದಿಗೆ ಬಂದಿದೆ. ಹೋಟೆಲ್ ಕಾರ್ಮಿಕರು ತೀರಆರ್ಥಿಕ ನಷ್ಟ ಅನುಭವಿಸುತ್ತಾರೆ. ಈ ಉದ್ಯಮ ಮೇಲೇಳಲು ವರ್ಷಕಾಲ ಬೇಕಾಗಬಹುದು.ಸಾಮಾನ್ಯ ದಿನಗಳಲ್ಲಿ 15ಕ್ಕೂ ಹೆಚ್ಚು ಬಗೆಯ ತಿನಿಸು ತಯಾರಿಸುತ್ತಿದ್ದ ನಾವು ಈಗಬೋಂಡಾ, ರೈಸ್‌ ಬಾತ್‌ಗೆ ಮಾತ್ರ ತಯಾರಿಸುತ್ತಿದ್ದೇವೆ’ ಎಂದು ಹೇಳಿದರು.

‘ತಿಂಡಿ ತಯಾರಿಸಿದರೂ ವ್ಯಾಪಾರ ಇಲ್ಲ’
‘ಕೆಲವು ದಿನಸಿ, ಸಾಮಗ್ರಿಗಳ ದರ ಹೆಚ್ಚಾಗಿದೆ. ಶೇ 70ರಷ್ಟು ವ್ಯಾಪಾರ ಕಡಿಮೆಯಾಗಿದೆ. ಪಾರ್ಸೆಲ್ವ್ಯವಸ್ಥೆ ಇದ್ದರೂ ಹೆಚ್ಚಿನ ವಹಿವಾಟು ಇಲ್ಲ. ಮನೆಯಲ್ಲಿ ಇರುವ ಬದಲು ಹೋಟೆಲ್‌ಗೆಬರುವಂತಾಗಿದೆ. ಲಾಭದ ನಿರೀಕ್ಷೆ ಇಲ್ಲದೆ ಉದ್ಯಮ ನಡೆಸಬೇಕಾಗಿದೆ ಎಂದು ಹಲವರುಹೇಳುತ್ತಾರೆ.ಹೋಟೆಲ್‌ ತೆರೆಯಲು ಅವಕಾಶ ಇದ್ದರೂ ಹೆಚ್ಚಿನ ಪ್ರಯೋಜನ ಇಲ್ಲ. ನಿತ್ಯ 500ಕ್ಕೂಹೆಚ್ಚಿನ ಗ್ರಾಹಕರು ಬರುತ್ತಿದ್ದ ಹೋಟೆಲ್‌ಗೆ ಈಗ 50 ಜನರು ಬಂದರೆ ಹೆಚ್ಚು. ಜಾಗದಬಾಡಿಗೆ ಕಟ್ಟಲು ಸಾಲ ಮಾಡಬೇಕಿದೆ. ಹೋಟೆಲ್‌ ತೆರೆಯಲು ಸಮಯದ ಮಿತಿ ಇರುವುದರಿಂದ ಹಲವು ಬಗೆಯ ತಿಂಡಿಗಳನ್ನೂ ತಯಾರಿಸುವಂತಿಲ್ಲ’ ಎಂದು ಮತ್ತೊಬ್ಬ ಮಾಲೀಕ ನಾಗಣ್ಣ ಅವರು ವಸ್ತುಸ್ಥಿತಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT