ಸೋಮವಾರ, ನವೆಂಬರ್ 30, 2020
20 °C

ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಕಬ್ಬಳ್ಳಿ ಗ್ರಾಮದ ಬಳಿ ಸ್ಥಾಪಿತವಾಗಿರುವ ಏಟ್ರಿಯಾ ಸೋಲಾರ್ ವಿದ್ಯುತ್ ಉತ್ಪಾದನಾ ಸಂಸ್ಥೆ ರೈತರಿಗೆ ವಂಚನೆ ಮಾಡುತ್ತಿದೆ ಆರೋಪಿಸಿದ ಹಲವರು ಭಾನುವಾರ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

‘ವಿದ್ಯುತ್ ಘಟಕ ಸ್ಥಾಪನೆ ಮಾಡುವ ಸಲುವಾಗಿ ರೈತರ ಭೂಮಿಯನ್ನು ಎಕರೆಗೆ ₹ 15 ಲಕ್ಷದಂತೆ  ತೀರ್ಮಾನ ಮಾಡಿದರು. ಬಳಿಕ ಟ್ಯಾಕ್ಸ್ ಸಮಸ್ಯೆ ಆಗುತ್ತದೆ ಎಂದು ₹ 3.6 ಲಕ್ಷಕ್ಕೆ ನೋಂದಣಿ ಮಾಡಿ ಉಳಿದ ಹಣವನ್ನು ಹೇಳಿದ ಮಾತಿನಂತೆ ಕೊಡುತ್ತೇನೆ ಎಂದು ಜಮೀನು ನೋಂದಣಿ ಆದ ಬಳಿಕ ಕಳೆದ ಮೂರು ವರ್ಷಗಳಿಂದ ಹಣ ನೀಡದೆ ಪರದಾಡಿಸುತ್ತಿದ್ದಾರೆ’ ಎಂದು ಜಮೀನು ನೀಡಿದ ರೈತರು ಆರೋಪಿಸಿದರು.

ಈ ಬಗ್ಗೆ ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಲ್ಲೇಶ, ನಟರಾಜು, ಸಂತೋಷ, ಗಿರಿ, ಮಹೇಶ, ಶಾಂತಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.