ಹನೂರು: ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಪ್ರವಾಸಿಗರಿಗೆ ಈಚೆಗೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.

ಲೊಕ್ಕನಹಳ್ಳಿ ಸಫರಿಗೆ ತೆರಳಿದ್ದ ಪ್ರವಾಸಿಗರಿಗೆ ಈಚೆಗೆ ದರ್ಶನ ನೀಡಿದ್ದು, ಪ್ರವಾಸಿಗರು ಖುಷಿ ಪಟ್ಟಿದ್ದಾರೆ. ಬೇಸಿಗೆಯಾಗಿರುವುದರಿಂದ ಆಹಾರ ನೀರು ಅರಸಿ ಅಲೆದಾಡುತ್ತಿರುವ ಚಿರತೆ ಹಾಗೂ ಇನ್ನಿತರ ವನ್ಯ ಪ್ರಾಣಿಗಳು ಈಚೆಗೆ ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ನೀಡುತ್ತಿವೆ.

2020ರಲ್ಲೂ ಕಾಣಿಸಿಕೊಂಡಿದ್ದ ಕಪ್ಪು ಚಿರತೆ:2020ರ ಡಿಸೆಂಬರ್ನಲ್ಲಿ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಅರಣ್ಯಾಧಿಕಾರಿಗಳು ಕ್ಯಾಮರಾ ಟ್ರಾಪ್ ನಡೆಸಿದ್ದರು. ಕ್ಯಾಮರಾ ಅಳವಡಿಸಿದ್ದ ಎರಡು ದಿನದಲ್ಲೇ ಕಪ್ಪು ಚಿರತೆ ಕ್ಯಾಮರದಲ್ಲಿ ಸೆರೆಯಾಗಿತ್ತು. ಇದೀಗ ಮತ್ತೆ ಸಫಾರಿಗರಿಗೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.

ಮೆಲೆನಿನ್ ಅಂಶ ಹೆಚ್ಚಾಗಿ ಇರುವ ಚಿರತೆ ಮೈ ಬಣ್ಣ ಸಾಮಾನ್ಯವಾಗಿ ಕಪ್ಪಾಗಿ ಇರುತ್ತದೆ. ಆದರೆ ಸಾಮಾನ್ಯ ಚಿರತೆ ಇರುವ ಪಟ್ಟೆಗಳೇ ಇರುತ್ತೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-37-1350955413

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.