ಯಳಂದೂರು: ಹೊನ್ನೂರು ಗ್ರಾಮ ದೇವತೆ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ಗುರುವಾರ ರಾತ್ರಿ ಮಡೆ ಉತ್ಸವ ಅದ್ದೂರಿಯಾಗಿ ಜರುಗಿತು. ಸಹಸ್ರಾರು ಮಹಿಳಾ ಭಕ್ತರ ಸಂಭ್ರಮದ ನಡುವೆ ಮಡೆ ಪೂಜೆಗೆ ಚಾಲನೆ ನೀಡಲಾಯಿತು.

ಹೊಸ ಮಡಿಕೆ ಹೊತ್ತ ಮಹಿಳೆಯರು ದೇವಾಲಯದ ಸುತ್ತಲೂ ಸೇರಿದ್ದರು. ಹೋಮ, ಹವನ, ವಿಶೇಷಪೂಜೆ ಸಲ್ಲಿಸಿ ತಂಪೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಳದ ಅಂಗಳದಲ್ಲಿ ಮೂರು ಕಲ್ಲಿನ ಒಲೆಯನ್ನು ಪೇರಿಸಿ, ಇದರ ಮೇಲೆ ಮಡಿಕೆ ಇಟ್ಟು ಪೂಜೆ ನೆರವೇರಿಸಿದರು. ಮಡಿಕೆಗೆ ವಿಭೂತಿ ಬಳಿದು ಹೂವು ಹಾಕಿ ಕರ್ಪೂರ ಬೆಳಗುತ್ತಿದ್ದಂತೆ ಒಲೆ ಹೊತ್ತಿ ಉರಿಯಿತು. ಹರಕೆ ಹೊತ್ತ ಭಕ್ತರು ಅಕ್ಕಿ, ಬೆಲ್ಲವನ್ನು ಅದರಲ್ಲಿ ತುಂಬಿ ನೈವೇದ್ಯ ತಯಾರಿಸಿದರು. ಚಾಮುಂಡಾಂಬೆಗೆ ಸಮರ್ಪಿಸುವ ಸಂಪ್ರದಾಯ ತಡರಾತ್ರಿ ತನಕ ನಡೆಯಿತು.

‘ಐದು ವರ್ಷಕ್ಕೆ ಒಮ್ಮೆ ನಡೆಯುವ ಹಬ್ಬದಲ್ಲಿ ದೇವಿಗೆ ಪ್ರಸಾದ ಮತ್ತು ತಂಬಿಟ್ಟು ತಯಾರಿಸಿ ತಂಪಿನ ಆರತಿಯನ್ನು ಬೆಳಗಲಾಗುತ್ತದೆ. ಈ ಹರಕೆಯನ್ನು ಪೂರೈಸಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ರಾತ್ರಿ ಒಂಭತ್ತರ ನಂತರ ಮಂಗಳವಾದ್ಯ ಸಮೇತ ಪ್ರಸಾದವನ್ನು ಹೊತ್ತು ದೇಗುಲದತ್ತ ಸಾಗುತ್ತಾರೆ. ತಡರಾತ್ರಿ ವರೆಗೆ ಜರುಗುವ ಪೂಜೆಯಲ್ಲಿ ದೇವಿಯನ್ನು ಸಂತುಷ್ಟಗೊಳಿಸಲು ನೇಮ ನಿಷ್ಠೆ, ವ್ರತದಲ್ಲಿ ಉಪವಾಸ ಇರುವವರು. ಹೂವು, ಹಾರ ಅರ್ಪಿಸಿ, ಧೂಪ, ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸುವ ವಾಡಿಕೆ ಇಲ್ಲಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಮಹೋತ್ಸವದಲ್ಲಿ ಮಳೆ ಬೆಳೆಗಾಗಿ ದೇವರಲ್ಲಿ ಮೊರೆ ಇಡಲಾಗುತ್ತದೆ. ಸಿಹಿ ಪೊಂಗಲ್ ಹಾಗೂ ತಂಬಿಟ್ಟಿನ ಆರತಿಯನ್ನು ತಯಾರಿಸಿ ಬೆಳಗುತ್ತಾರೆ. ನಸುಕಿನ ವರೆಗೂ ನಡೆಯುವ ಪೂಜಾ ಉತ್ಸವದಲ್ಲಿ ಸಾಂಸ್ಕೃತಿಕ ವೈವಿಧ್ಯ ಕಳೆಗಟ್ಟುತ್ತದೆ. ಸರ್ವಾಲಂಕೃತ ಚಾಮುಂಡಿಯನ್ನು ಸಾವಿರಾರು ಸುಮಂಗಲೆಯರು ನೋಡುವುದೇ ಮನಸ್ಸಿಗೆ ಆನಂದ ತುಂಬುತ್ತದೆ’ ಎಂದು ಗ್ರಾಮದ ಶಿವಮ್ಮ ಹೇಳುತ್ತಾರೆ.

ಗ್ರಾಮದ ಯಜಮಾನರು, ಮುಖಂಡರು ಹಾಗೂ ಹೊರ ಜಿಲ್ಲೆಗಳ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.