ಬುಧವಾರ, ಸೆಪ್ಟೆಂಬರ್ 22, 2021
28 °C

ಮಹದೇಶ್ವರ ಬೆಟ್ಟ: ₹15 ಕೋಟಿ ಆದಾಯ ಖೋತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಲಾಕ್‌ಡೌನ್‌ನಿಂದಾಗಿ, ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಹದೇಶ್ವರಸ್ವಾಮಿ ದೇವಾಲಯದ ಆದಾಯ ₹15 ಕೋಟಿಗಳಷ್ಟು ಖೋತಾ ಆಗಿದೆ. 

ಮಾರ್ಚ್‌ 20ರಿಂದ ದೇವಾಲಯ ಸಾರ್ವಜನಿಕರಿಗೆ ಬಂದ್‌ ಆಗಿದೆ. ರಾಜ್ಯದ ವಿವಿಧೆಡೆಯಿಂದ ಹಾಗೂ ನೆರೆಯ ರಾಜ್ಯಗಳಿಂದ ಪ್ರತಿದಿನ ಸಾವಿರಾರು ಭಕ್ತರು ಬೆಟ್ಟಕ್ಕೆ ನೀಡುತ್ತಾರೆ. ಬೇಸಿಗೆ ರಜೆಯಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚು. ಆದರೆ, ಎರಡು ತಿಂಗಳ ಅವಧಿಯಲ್ಲಿ ಭಕ್ತರಿಂದ ಬರುತ್ತಿದ್ದ ಆದಾಯ ನಿಂತುಹೋಗಿದೆ.

ಪ್ರತಿ ತಿಂಗಳು ದೇವಸ್ಥಾನದ ಹುಂಡಿಗಳಲ್ಲಿ ಸರಾಸರಿ ₹1.4 ಕೋಟಿಯಷ್ಟು ಸಂಗ್ರಹವಾಗುತ್ತಿತ್ತು. ಜೊತೆಗೆ ಚಿನ್ನದ ತೇರು ಸೇರಿದಂತೆ ವಿವಿಧ ಸೇವೆಗಳು, ಲಾಡು ಮಾರಾಟ, ಮುಡಿಸೇವೆ, ವಸತಿ ಗೃಹ ಸೇರಿದಂತೆ ವಿವಿಧ ಮೂಲಗಳಿಂದ ತಿಂಗಳಿಗೆ ₹6 ಕೋಟಿವರೆಗೂ ಆದಾಯ ಬರುತ್ತಿತ್ತು. ಈ ವರ್ಷ ಲಾಕ್‌ಡೌನ್‌ ಕಾರಣದಿಂದ ಯುಗಾದಿ ಜಾತ್ರೆಯೂ ನಡೆದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು