ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ₹ 2.21 ಕೋಟಿ ನಗದು ಸಂಗ್ರಹ

Last Updated 29 ಜನವರಿ 2021, 12:03 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮಹದೇಶ್ವರ ದೇವಾಲಯದಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣದಎಣಿಕೆ ಹಾಗೂ ಪರ್ಕಾವಣೆ ಕಾರ್ಯ ಗುರುವಾರ ನಡೆಯಿತು.

₹ 2.21 ಕೋಟಿ ನಗದು, 80 ಗ್ರಾಂ. ಚಿನ್ನ ಹಾಗೂ 2 ಕೆ.ಜಿ ಬೆಳ್ಳಿವಸ್ತುಗಳು ಸಂಗ್ರಹವಾಗಿವೆ.

ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ದೇವಾಲಯದಲ್ಲಿದ್ದ ಹುಂಡಿಗಳನ್ನು ಪರ್ಕಾವಣೆ ಮಾಡಲಾಯಿತು. ನಂತರ ಹುಂಡಿಯಲ್ಲಿದ್ದ ಹಣವನ್ನು ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣಕ್ಕೆ ಸಾಗಿಸಿ ಎಣಿಕೆ ಮಾಡಲಾಯಿತು.

ಒಂದು ತಿಂಗಳಿನಲ್ಲಿ ಒಟ್ಟು ₹ 2,21,59,810 ಸಂಗ್ರಹಗೊಂಡಿದ್ದು, ಕಳೆದ ಬಾರಿಗಿಂತ ₹ 29 ಲಕ್ಷ ಹೆಚ್ಚುವರಿಯಾಗಿ ಸಂಗ್ರಹವಾಗಿದೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜಪ್ಪ, ಭಾರತೀಯ ಸ್ಟೇಟ್ ಬ್ಯಾಂಕ್‌‌ ಶಾಖಾ ವ್ಯವಸ್ಥಾಪಕರು ಮತ್ತು ದೇವಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT