ಭಾನುವಾರ, ನವೆಂಬರ್ 1, 2020
20 °C
ಮಹದೇಶ್ವರ ಬೆಟ್ಟ ಎರಡೂವರೆ ತಿಂಗಳಲ್ಲಿ ಹುಂಡಿಗೆ ಬಿದ್ದಿದ್ದು ₹1.47 ಕೋಟಿ ಕಾಣಿಕೆ

ಮಹದೇಶ್ವರ ಬೆಟ್ಟ: ಮಾದಪ್ಪನ ಆದಾಯಕ್ಕೆ ಕೋವಿಡ್‌ ಹೊಡೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಕೋವಿಡ್‌–19 ಹಾವಳಿ ಇಲ್ಲಿನ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದ ಆದಾಯದ ಮೇಲೂ ತೀವ್ರ ಪರಿಣಾಮ ಬೀರಿದೆ. 

ಜೂನ್‌ 27ರಿಂದ ಸೆಪ್ಟೆಂಬರ್‌ 17ರವರೆಗಿನ, 82 ದಿನಗಳ ಅವಧಿಯಲ್ಲಿ ದೇವಾಲಯದ ಹುಂಡಿಗಳಲ್ಲಿ ₹1.47 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಲಾಕ್‌ಡೌನ್‌ಗಿಂತಲೂ ಮೊದಲು ಪ್ರತಿ ತಿಂಗಳು ₹1.5 ಕೋಟಿಯಷ್ಟು ಹಣ ಹುಂಡಿಗಳಲ್ಲಿ ಸಂಗ್ರಹವಾಗುತ್ತಿತ್ತು. 

ಜೂನ್‌ 26ರಂದು ನಡೆದ ಬಳಿಕ, ಶುಕ್ರವಾರ ಸಾಲೂರು ಮಠಾಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಬಸ್ ನಿಲ್ದಾಣದಲ್ಲಿರುವ ವಾಣೀಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. 

ನೋಟುಗಳ ರೂಪದಲ್ಲಿ ₹1,40,60,447 ಕಾಣಿಕೆ ಬಂದಿದ್ದರೆ, ನಾಣ್ಯದ ರೂಪದಲ್ಲಿ ₹6,53,901 ಸಂಗ್ರಹವಾಗಿದೆ. ಭಕ್ತರು 17 ಗ್ರಾಂ ಚಿನ್ನ, 985 ಗ್ರಾಂ ಬೆಳ್ಳಿ ವಸ್ತುಗಳನ್ನೂ ಹುಂಡಿಗಳಿಗೆ ಕಾಣಿಕೆ ಹಾಕಿದ್ದಾರೆ. 

ಸ್ಥಳದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ಸಿಬ್ಬಂದಿ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು