ಮಂಗಳವಾರ, ಜೂನ್ 22, 2021
27 °C

ಕೋವಿಡ್‌ನಿಂದ ಮೃತಪಟ್ಟ ತಾಯಿಯ ಶವಸಂಸ್ಕಾರದ ವೇಳೆ ಮಗ ಹೃದಯಾಘಾತದಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಕೋವಿಡ್‌ನಿಂದ ಮೃತಪಟ್ಟ ತಾಯಿಯ ಶವಸಂಸ್ಕಾರ ಮಾಡಲು ಹೋದ ಮಗನೂ ಹೃದಯಾ ಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.

ನಗರದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ ನಿವಾಸಿ ಸರೋಜಮ್ಮ (82) ಹಾಗೂ ಅವರ ಮಗ ಸುರೇಶ್ (60) ಮೃತಪಟ್ಟವರು.

ಶುಕ್ರವಾರ ಸರೋಜಮ್ಮ ಅವರಿಗೆ ಕೋವಿಡ್‌ ದೃಢಪಟ್ಟಿತ್ತು, ಮನೆಯಲ್ಲೇ ಅವರು ಐಸೋಲೇಷನ್ ಆಗಿದ್ದರು. ಶನಿವಾರ
ನಿಧನರಾದರು.

ಚಾಮರಾಜನಗರ ತಾಲ್ಲೂಕಿನ ಹುಳ್ಳಿನಂಜನಪುರ ಗ್ರಾಮದ ಜಮೀನಿನಲ್ಲಿ ಸರೋಜಮ್ಮ ಅವರ ಅಂತ್ಯಕ್ರಿಯೆ ಮಾಡುವಾಗ ಮಗ ಸುರೇಶ್ ಅವರು ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟರು.

ಸುರೇಶ್ ಶವವನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ನೆಗಿಟಿವ್ ವರದಿ ಬಂದಿದ್ದು, ಶವಸಂಸ್ಕಾರ ನಡೆಸಲಾಯಿತು.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಅತ್ತೆ ಸೋರೋಜಮ್ಮ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು