ಶುಕ್ರವಾರ, ನವೆಂಬರ್ 22, 2019
25 °C

ಮಲೆ ಮಹದೇಶ್ವರ ವನ್ಯಧಾಮ: ಕಾಡಾನೆಗೆ ವ್ಯಕ್ತಿ ಬಲಿ

Published:
Updated:

ಹನೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದಲ್ಲಿ ಗುರುವಾರ ಕಾಡಾನೆ ದಾಳಿಗೆ ತುತ್ತಾಗಿ ಕೀರನಹೊಲ ಗ್ರಾಮದ ಮಹಾದೇವ (45) ಎಂಬುವವರು ಮೃತಪಟ್ಟಿದ್ದಾರೆ.

ಮಹಾದೇವ ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ವನ್ಯಧಾಮದ ಒಳಗಡೆ ಇರುವ ಶನೇಶ್ವರ ದೇವಾಲಯಕ್ಕೆ ಸಂಜೆ 5.30ರ ಸುಮಾರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎರಕೆಯಂ ಹಳ್ಳದ ಬಳಿ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇಬ್ಬರು ಸ್ನೇಹಿತರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಾದೇವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಭೇಟಿ ನೀಡಿ ಪರಿಶೀಲಿಸಿದರು. ಮಹಾದೇವ ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಕೊಡುವ ಭರವಸೆಯನ್ನು ಅವರು ನೀಡಿದರು.

ಪ್ರತಿಕ್ರಿಯಿಸಿ (+)