ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಾರುಕಟ್ಟೆ ಧಾರಣೆ ಇಳಿಮುಖ

ಕೆಲ ತರಕಾರಿ, ಹಣ್ಣುಗಳ ಬೆಲೆ ಇಳಿಕೆ; ಮೊಟ್ಟೆ ಹೆಚ್ಚಳ, ಮಾಂಸ ಯಥಾಸ್ಥಿತಿ
Last Updated 14 ಅಕ್ಟೋಬರ್ 2019, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ವಾರಗಳಲ್ಲಿ ನವರಾತ್ರಿ ಹಬ್ಬದ ಪ್ರಭಾವಕ್ಕೆ ಸಿಲುಕಿದ್ದ ಮಾರುಕಟ್ಟೆ ಧಾರಣೆ ಈ ವಾರ ಇಳಿಮುಖವಾಗಿದೆ. ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿಗಳಿಗೆ ಬೇಡಿಕೆ ಕುಸಿದಿದೆ.

ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಬೆಲೆ ಗಣನೀಯವಾಗಿ ಇಳಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರ ಕೆಜಿ ₹55ರಷ್ಟಿದ್ದ ಬೆಲೆ ಸೋಮವಾರ ₹42 ಇತ್ತು. ₹13ನಷ್ಟು ಕಡಿಮೆಯಾಗಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಗಾತ್ರ ಹಾಗೂ ಗುಣಮಟ್ಟದ ಆಧಾರದಲ್ಲಿ ವ್ಯಾಪಾರಿಗಳು ದರ ನಿಗದಿ ಮಾಡುತ್ತಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹40ರಿಂದ ₹48ರವರೆಗೂ ದರವಿದೆ.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಚೆಂಡು ಹೂ ₹5, ಕನಕಾಂಬರ₹300, ಮಲ್ಲಿಗೆ₹20, ಕಾಕಡ₹140, ಮೊಳ್ಳೆ₹ 80, ಸುಗಂಧರಾಜ ಹೂ₹ 30 ಕಡಿಮೆಯಾಗಿದೆ. ಸುಗಂಧರಾಜ ಹಾರ (₹30–₹200), ಗುಲಾಬಿಗೆ (₹150–₹200) ಹಳೆ ದರವೇ ಮುಂದುವರಿದಿದೆ.

‘ನವರಾತ್ರಿ, ಆಯುಧ ಪೂಜೆ ಸಂದರ್ಭದಲ್ಲಿ ಎಲ್ಲ ಹೂವುಗಳ ಬೆಲೆ ಏರಿಕೆಯಾಗಿತ್ತು. ಈಗ ಸೋಮವಾರ, ಶುಕ್ರವಾರದ ಹಿಂದಿನ ದಿನಗಳಂದು ಮಾತ್ರ ಬೆಲೆಬೇಡಿಕೆಗೆ ತಕ್ಕಂತೆಹೆಚ್ಚಳವಾಗುತ್ತದೆ. ದೀಪಾವಳಿವರೆಗೂ ಹೂವುಗಳ ಬೆಲೆ ಏರಿಳಿತ ಇರಲಿದೆ. ಹಬ್ಬದ ಎರಡು ದಿನ ಮುಂಚಿತವಾಗಿ ಬೆಲೆ ಹೆಚ್ಚಳವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತರಕಾರಿ: ಹಾಪ್‌ಕಾಮ್ಸ್‌ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಕೆಲ ತರಕಾರಿಗಳ ಬೆಲೆಮಾತ್ರ ಏರಿಳಿತವಾಗಿದೆ. ಮರಗೆಣಸು, ಬೀಟ್‌ರೂಟ್‌₹10, ಶುಂಠಿ₹20 ಕಡಿಮೆಯಾಗಿದೆ. ಗೋರಿಕಾಯಿ₹1, ಆಲೂಗೆಡ್ಡೆ, ಬೂದುಕುಂಬಳಕಾಯಿ₹2, ದಪ್ಪ ಮೆಣಸಿನಕಾಯಿ₹10 ತುಟ್ಟಿಯಾಗಿದೆ.

‘ಬೇಡಿಕೆಗೆ ಅನುಗುಣವಾಗಿ ಕೆಲ ತರಕಾರಿಗಳ ಧಾರಣೆ ಹೆಚ್ಚಳವಾಗುತ್ತದೆ. ಎರಡುವಾರಗಳಿಂದ ಏರಿಕೆ ಕಾಣುತ್ತಿದ್ದ ಈರುಳ್ಳಿ ಈ ವಾರ ಕಡಿಮೆಯಾಗಿದೆ. ಶುಂಠಿ ತುಟ್ಟಿಯಾಗಿದೆ. ಹಬ್ಬದ ಸಂದರ್ಭದಲ್ಲಿ ತರಕಾರಿಗಳಿಗೆ ಕೊಂಚ ಬೇಡಿಕೆ ಇರಲಿದೆ. ಎಪಿಎಂಸಿ ಮಾರುಕಟ್ಟೆ ದರ ಆಧರಿಸಿ ನಾವು ಮಾರಾಟ ಮಾಡುತ್ತೇವೆ’ಎಂದುಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು.

ಮೊಟ್ಟೆ ಬೆಲೆ ಹೆಚ್ಚಳ: ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆ ಧಾರಣೆ ಈ ವಾರವೂ ಹೆಚ್ಚಳವಾಗಿದೆ. ಈ ವಾರ ₹7 ಏರಿಕೆಯಾಗಿದೆ.ಕಳೆದೆರಡು ವಾರದಲ್ಲಿ₹ 422 ಇದ್ದ ಬೆಲೆ ಈ ವಾರ₹ 429 ಆಗಿದೆ. ಮಾಂಸ, ಮೀನುಗಳ ಧಾರಣೆಯಲ್ಲಿ ಬದಲಾವಣೆ ಕಂಡುಬಂದಿಲ್ಲ.ಹಬ್ಬಗಳ ಬಳಿಕ ಎಲ್ಲ ದರ ಯಥಾಸ್ಥಿತಿ ಮುಂದುವರಿದಿದೆಎನ್ನುತ್ತಾರೆ ವ್ಯಾಪಾರಿಗಳು.

ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ
ನವರಾತ್ರಿ, ಆಯುಧ ಪೂಜೆ ಸಂದರ್ಭದಲ್ಲಿ ಕೆಲ ಹಣ್ಣುಗಳ ಬೆಲೆ ಏರಿಕೆ ಕಂಡಿತ್ತು. ಈ ವಾರಕೆಲವುಹಣ್ಣುಗಳ ಬೆಲೆ ಕಡಿಮೆಯಾದರೆ ಮತ್ತೆ ಕೆಲ ಹಣ್ಣುಗಳ ದರ ಹೆಚ್ಚಳವಾಗಿದೆ.

ಕಿತ್ತಳೆ ಹಣ್ಣು, ಏಲಕ್ಕಿ ಬಾಳೆ ₹ 10 ಅಗ್ಗವಾದರೆ, ದಾಳಿಂಬೆ, ಅನಾನಸು ₹10, ಸಪೋಟಾ₹20 ತುಟ್ಟಿಯಾಗಿದೆ.

‘ಹಬ್ಬದ ಸಂದರ್ಭದಲ್ಲಿ ಕೆಲ ಹಣ್ಣುಗಳನ್ನು ಪೂಜೆ ಇಡಲಾಗುತ್ತದೆ. ಹೀಗಾಗಿ, ಅಂತಹ ಹಣ್ಣುಗಳ ಬೆಲೆ ಹೆಚ್ಚಳವಾಗಿತ್ತು’ ಎನ್ನುತ್ತಾರೆ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT