ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಕೊಂಚ ಇಳಿಕೆ

ಹೆಚ್ಚಿದ ಶುಭಸಮಾರಂಭಗಳು: ಹೂವುಗಳಿಗೆ ಬಂತು ಬೇಡಿಕೆ
Last Updated 27 ಜನವರಿ 2020, 15:47 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ವಾರಗಳಿಂದ ಹೆಚ್ಚಳ ಕಂಡಿದ್ದ ತರಕಾರಿ ಧಾರಣೆ ಈ ವಾರ ಕೊಂಚ ಇಳಿಕೆ ಕಂಡಿದೆ. ಬೇಡಿಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣ.

ತೊಗರಿ ಮಾತ್ರ₹ 5 ಹೆಚ್ಚಳವಾಗಿದೆ. ಅವರೆ, ಬೀನ್ಸ್‌, ಮರಗೆಣಸು, ದಪ್ಪ ಮೆಣಸಿನಕಾಯಿ, ಹಸಿ ಬಟಾಣಿ ಬೆಲೆ ಕೆಜಿಗೆ ₹ 10, ಟೊಮೆಟೊ, ಕ್ಯಾರೆಟ್‌, ಚಪ್ಪರದ ಬದನೆಕಾಯಿ, ಹಸಿ ಮೆಣಸಿನಕಾಯಿ, ಬದನೆಕಾಯಿ₹ 5, ಶುಂಠಿ₹ 20, ಸೌತೆಕಾಯಿ, ಮೂಲಂಗಿ ₹ 2 ಕಡಿಮೆಯಾಗಿವೆ.

ಹಣ್ಣುಗಳ ಮಾರುಕಟ್ಟೆಯಲ್ಲಿ ಮೂಸಂಬಿ ಹಾಗೂ ದ್ರಾಕ್ಷಿ₹ 10 ಕಡಿಮೆಯಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

‘ಮಂಗಳವಾರದ ಬಳಿಕ ತರಕಾರಿ ದರ ಜಾಸ್ತಿಯಾಗುವ ನಿರೀಕ್ಷೆ ಇದೆ. ಈಗ ತಾನೆ ಮದುವೆ, ಗೃಹಪ್ರವೇಶಗಳು ಆರಂಭಗೊಂಡಿವೆ. ಎಪಿಎಂಸಿಗೆ ತರಕಾರಿಗಳು ಬರುವ ಪ್ರಮಾಣಕ್ಕೆ ಅನುಗುಣವಾಗಿ ವ್ಯಾಪಾರ ನಡೆಯುತ್ತದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳುತ್ತಾರೆ.

ಈ ವಾರ ಹೂವುಗಳ ಬೆಲೆಯಲ್ಲೂ ಏರಿಳಿತ ಕಂಡು ಬಂದಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸುಗಂಧರಾಜ₹ 80, ಕಾಕಡ ಕೆಜಿಗೆ ₹ 100 ಹೆಚ್ಚಳವಾಗಿದೆ. ಗುಲಾಬಿ (100ಕ್ಕೆ) ₹ 100 ಜಾಸ್ತಿಯಾಗಿದೆ. ಸೇವಂತಿಗೆ ಕೆಜಿಗೆ ₹ 10, ಸುಗಂಧರಾಜ ಹಾರ (1ಕ್ಕೆ) ₹ 50 ಹೆಚ್ಚಳವಾಗಿದೆ.

‘ಸಂಕ್ರಾಂತಿ ಬಳಿಕ ಶುಭ ಸಮಾರಂಭ, ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗಾಗಿ, ಹೂವುಗಳಿಗೆ ಬೇಡಿಕೆ ಇದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಟ್ಟೆ ಧಾರಣೆ ಇಳಿಕೆ:ಮಾಂಸ ಮಾರುಕಟ್ಟೆಯಲ್ಲಿ ಮೂರು ವಾರಗಳಿಂದ ಮೊಟ್ಟೆ ಧಾರಣೆ
ಇಳಿಕೆಕಾಣುತ್ತಿದೆ.

ಕಳೆದ ವಾರ₹ 425 ಇದ್ದ ಮೊಟ್ಟೆ ಬೆಲೆ (100ಕ್ಕೆ) ಈ ವಾರ₹ 400ರ ವರೆಗೆ ಇದೆ.ಚಿಕನ್‌, ಮಟನ್‌, ಮೀನುಗಳ ಬೆಲೆಯಥಾಸ್ಥಿತಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT