ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆ ಲಗ್ಗೆ, ಹೂವಿನ ಬೆಲೆ ಕೊಂಚ ಇಳಿಕೆ

ಕನಕಾಂಬರ ₹ 200, ಸುಗಂಧರಾಜ ₹ 60, ಸುಗಂಧರಾಜ ಹಾರ ₹ 100, ಕಾಕಡ ₹ 80
Last Updated 25 ಫೆಬ್ರುವರಿ 2020, 10:04 IST
ಅಕ್ಷರ ಗಾತ್ರ

ಚಾಮರಾಜನಗರ:ಹೂವುಗಳ ಧಾರಣೆ ಈ ವಾರ ಕೊಂಚ ಇಳಿಕೆ ಕಂಡಿದೆ. ಪಾನೀಯ ತಯಾರಿಕೆಯಹಣ್ಣುಗಳಿಗೆ ಬೇಡಿಕೆ ಶುರುವಾಗಿದೆ. ಕೆಲ ತರಕಾರಿಗಳ ಬೆಲೆ ಏರಿಳಿತವಾಗಿದೆ. ಮೊಟ್ಟೆ ದರ ಕಡಿಮೆಯಾಗಿದ್ದು ಮಾಂಸದ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ ಯಥಾಸ್ಥಿತಿ ಮುಂದುವರಿದಿದೆ.

ಕಳೆದ ವಾರ ಶಿವರಾತ್ರಿ ವೇಳೆ ಏರಿಕೆ ಕಂಡಿದ್ದ ಹೂವುಗಳ ಬೆಲೆಯಲ್ಲಿ ಈ ವಾರ ಕೊಂಚ ಇಳಿಕೆ ಕಂಡಿದೆ. ಮಲ್ಲಿಗೆ ಈ ವಾರ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಚೆಂಡು ಹೂವು, ಗುಲಾಬಿ, ಸೇವಂತಿ ಬಿಟ್ಟು ಉಳಿದೆಲ್ಲ ಹೂವುಗಳು ಅಗ್ಗವಾಗಿದೆ.ಕನಕಾಂಬರ₹200, ಸುಗಂಧರಾಜ₹60, ಸುಗಂಧರಾಜ ಹಾರ₹100, ಕಾಕಡ₹80 ಇಳಿಕೆಯಾಗಿದೆ.

‘ಕಳೆದೆರಡು ದಿನದಿಂದ ಮಲ್ಲಿಗೆ ಹೂವು ಮಾರುಕಟ್ಟೆಗೆ ಆವಕವಾಗುತ್ತಿದೆ. ಶಿವರಾತ್ರಿ ಹಾಗೂ ಜಾತ್ರಾ ಸಂದರ್ಭದಲ್ಲಿ ಹೂವುಗಳಿಗೆ ಬೇಡಿಕೆ ಇತ್ತು. ಈ ವಾರ ಅನೇಕ ಹೂವುಗಳು ಅಗ್ಗವಾಗಿದೆ. ಸೋಮವಾರ, ಶುಕ್ರವಾರದ ಹಿಂದಿನ ದಿನಗಳಂದುಬೇಡಿಕೆ ಇರಲಿದೆ. ಮುಂದಿನ ಯುಗಾದಿಗೆಬೆಲೆ ಏರಿಕೆಕೆಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ಹೇಳಿದರು.

ಕಳೆದ ವಾರ ದ್ರಾಕ್ಷಿ₹100 ಇತ್ತು ಈ ವಾರ₹20 ಹೆಚ್ಚಾಗಿದೆ. ಉಳಿದಂತೆ ಕಲ್ಲಂಗಡಿ, ಮೂಸಂಬಿ, ಕಿತ್ತಲೆ, ಸಪೋಟಾ ಹಣ್ಣುಗಳಿಗೆ ಬೇಡಿಕೆ ಇದೆ ಆದರೆ, ಬೆಲೆ ಏರಿಕೆಯಾಗಿಲ್ಲ. ಏಲಕ್ಕಿ ಬಾಳೆ, ಪಚ್ಚಬಾಳೆ₹5 ಹೆಚ್ಚಳವಾಗಿದೆ.

‘ಬೇಸಿಗೆ ಆರಂಭವಾಗದಿದ್ದರೂ ಬಿಸಿಲಿನ ತಾಪಕ್ಕೆಹಣ್ಣುಗಳಿಗೆ ಕೊಂಚ ಬೇಡಿಕೆ ಶುರುವಾಗಿದೆ. ದ್ರಾಕ್ಷಿ, ಕಲ್ಲಂಗಡಿ ಅಂತಹ ರಸಭರಿತ ಹಣ್ಣುಗಳು ಸೇರಿದಂತೆ ಪಾನೀಯ ತಯಾರಿಸುವ ಹಣ್ಣುಗಳನ್ನು ಜನರು ಹೆಚ್ಚು ಖರೀದಿಸುತ್ತಿದ್ದಾರೆ’ಎನ್ನುತ್ತಾರೆಹಣ್ಣುಗಳ ವ್ಯಾಪಾರಿಗಳು.

ತರಕಾರಿಗಳ ಪೈಕಿ ಆಲೂಗೆಡ್ಡೆ, ಹಸಿಮೆಣಸಿನಕಾಯಿ, ಹೀರೆಕಾಯಿ, ತೆಂಗಿನ ಕಾಯಿ ₹5,ಈರುಳ್ಳಿ₹10 ಏರಿಕೆಯಾಗಿದೆ. ಶುಂಠಿ₹10, ಬೆಳ್ಳುಳ್ಳಿ₹40 ಇಳಿಕೆಯಾಗಿದೆ. ಉಳಿದಂತೆ ಬಹುತೇಕ ತರಕಾರಿಗಳ ಬೆಲೆ ಈ ವಾರ ಏರಿಳಿತ ಕಂಡಿದೆ.

ಮಾಂಸ ಮಾರುಕಟ್ಟೆಯಲ್ಲಿಪ್ರತಿ ಮೂರು ದಿನಗಳಿಗೆ ಬದಲಾಗುವ ಮೊಟ್ಟೆಯಬೆಲೆ ಕಳೆದ ವಾರ₹ 425 ಇತ್ತು. ಈ ವಾರ₹375 ಆಗಿದೆ.₹50 ಕಡಿಮೆಯಾಗಿದೆ. ಉಳಿದಂತೆ ಎಲ್ಲ ಮಾಂಸಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT