ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಧಾರಣೆ ಕೊಂಚ ಇಳಿಕೆ

Last Updated 2 ಮಾರ್ಚ್ 2020, 15:28 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ವಾರಗಳಿಂದ ತರಕಾರಿ ಧಾರಣೆ ಕೊಂಚ ಇಳಿಕೆ ಕಾಣುತ್ತಿದೆ. ಬೇಡಿಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣ.

ಶುಂಠಿ₹10 ಹಾಗೂ ಬೀಟ್‌ರೂಟ್‌₹2ಮಾತ್ರಹೆಚ್ಚಳವಾಗಿದೆ.ಬೆಳ್ಳುಳ್ಳಿ ಕೆಜಿಗೆ ₹40, ಈರುಳ್ಳಿ, ಕ್ಯಾರೇಟ್‌, ಗೋರಿಕಾಯಿ, ಹಾಗಲಕಾಯಿ ಕೆಜಿಗೆ ₹10, ಟೊಮೆಟೊಕೆಜಿಗೆ ₹2, ಬದನೆಕಾಯಿ₹7, ಹೀರೆಕಾಯಿ, ಆಲೂಗೆಡ್ಡೆ₹5 ಕಡಿಮೆಯಾಗಿವೆ.

‘ಕಳೆದೆರಡು ವಾರದಿಂದ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಜನರು ಹೆಚ್ಚು ಖರೀದಿ ಮಾಡುತ್ತಿಲ್ಲ. ಅಲ್ಲದೆ, ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳು ಹೆಚ್ಚು ಬರುತ್ತಿವೆ. ಇದರಿಂದ ಬೆಲೆ ಕೂಡ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ಹೇಳಿದರು.

ಹಣ್ಣುಗಳ ಮಾರುಕಟ್ಟೆಯಲ್ಲೀಗ ಕೆಲ ಹಣ್ಣುಗಳಿಗೆ ಬೇಡಿಕೆ ಇದೆ. ಆದರೆ,ದ್ರಾಕ್ಷಿ₹30 ಹಾಗೂ ದಾಳಿಂಬೆ₹20ಏರಿಕೆ ಕಂಡಿದೆ. ಉಳಿದಂತೆ ದರ ಬದಲಾವಣೆ ಆಗಿಲ್ಲ. ಬಿಸಿಲ ಝಲಕ್ಕೆ ಜನರು ಕಲ್ಲಂಗಡಿ, ಮೂಸಂಬಿ ಹಾಗೂ ಕಿತ್ತಲೆ ಹೆಚ್ಚು ವ್ಯಾಪಾರ ಆಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕಳೆದ ವಾರಕ್ಕಿಂತ ಈ ವಾರ ಹೂವುಗಳ ಬೆಲೆಯಲ್ಲೂ ಏರಿಳಿತ ಕಂಡು ಬಂದಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರ₹200, ಸುಗಂಧರಾಜ₹20 ಕಡಿಮೆಯಾಗಿದೆ.ಮಲ್ಲಿಗೆ ₹20 ಹೆಚ್ಚಳವಾಗಿದೆ. ಉಳಿದಂತೆ ಎಲ್ಲ ಹೂವುಗಳ ದರ ಎರಡು ದಿನಗಳಿಂದ ಏರಿಳಿತ ಕಂಡುಬರುತ್ತಿದೆ.

‘ಹಬ್ಬ, ಜಾತ್ರೆಗಳ ಹಿಂದಿನ ದಿನಗಳಂದು ವ್ಯಾಪಾರ ಚುರುಕು ಪಡೆಯುತ್ತದೆ. ಸೋಮವಾರಹಾಗೂ ಶುಕ್ರವಾರದ ಹಿಂದಿನ ದಿನಗಳಂದು ಮಾತ್ರ ಹೂವುಗಳಿಗೆ ಬೇಡಿಕೆ ಇದೆ. ಯುಗಾದಿ ಹಬ್ಬದ ವರೆಗೂ ನಿರೀಕ್ಷೆಯಲ್ಲಿದ್ದೇವೆ. ಅಲ್ಲದೆ, ಇಂದಿನಿಂದ (ಮಾರ್ಚ್‌ 2) ಮಳೆ ಶುರುವಾಗಿದೆ.ಎಲ್ಲ ಬಗೆಯ ಹೂವುಗಳ ದರಹೇಗಿರಲಿದೆ ಎಂದು ಕಾದು ನೋಡಬೇಕಿದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಮಹೇಶ್‌ ಹೇಳುತ್ತಾರೆ.

ಮೊಟ್ಟೆ ಧಾರಣೆ ಯಥಾಸ್ಥಿತಿ:ಮಾಂಸ ಮಾರುಕಟ್ಟೆಯಲ್ಲಿ ಪ್ರತಿ ಮೂರು ದಿನಗಳಿಗೊಮ್ಮೆ ಬದಲಾಗುತ್ತಿದ್ದ ಮೊಟ್ಟೆ ದರ ಈ ವಾರ ಕಳೆದ ವಾರದ ದರವೇ(₹375) ಇದೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.ಚಿಕನ್‌₹10 ಕಡಿಮೆಯಾಗಿದೆ. ಉಳಿದಂತೆ ಮಟನ್‌, ಎಲ್ಲ ಬಗೆಯ ಮೀನುಗಳ ಬೆಲೆಯಥಾಸ್ಥಿತಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT