ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಡಿಯಲ್ಲಿ ದಾಂಪತ್ಯ ಜೀವನಕ್ಕೆ‌ ಕಾಲಿಟ್ಟ ಜೋಡಿ

Last Updated 5 ಏಪ್ರಿಲ್ 2020, 18:11 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ‌ ದಿಗ್ಬಂಧನದ ಕಾರಣದಿಂದಾಗಿ ಕರ್ನಾಟಕದ ವಧು ಹಾಗೂ ತಮಿಳುನಾಡಿನ ವರ ತಾಲ್ಲೂಕಿನ ಗಡಿಭಾಗ ಪುಣಜನೂರಿನ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಸರಳವಾಗಿ ವಿವಾಹವಾದರು.

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ರಾಯನಕೊಪ್ಪಲು ಹೋಬಳಿಯ ವೈ.ಎನ್.ಪುರದ ಉಷಾ ಹಾಗೂ ತಮಿಳುನಾಡು ಕೊಯಮತ್ತೂರು ಎತ್ತಪ್ಪನಗರದ ಅರವಿಂದ್ ವಿವಾಹವನ್ನು ಏಪ್ರಿಲ್ 5ರಂದು ಧರ್ಮಸ್ಥಳದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು.

ದಿಗ್ಬಂಧನದಿಂದ ರಾಜ್ಯಗಳ ಗಡಿ ಬಂದ್ ಆಗಿದ್ದರಿಂದ ವರನಿಗೆ ಕರ್ನಾಟಕಕ್ಕೆ ಬರಲು ಸಾಧ್ಯವಾಗಿಲ್ಲ. ವಧು ತಮಿಳುನಾಡಿಗೆ‌ ಹೊರಟಿದ್ದರೂ ಬಾಣಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಡೆಯಲಾಗಿತ್ತು.

ವಿಷಯ ತಿಳಿದ ನಮೋ ಬ್ರಿಗೇಡ್ ಪದಾಧಿಕಾರಿಗಳು, ಅಧಿಕಾರಿಗಳ ಮನವೊಲಿಸಿ ಇಬ್ಬರೂ ಗಡಿ ಪ್ರದೇಶಕ್ಕೆ‌ ಬರುವಂತೆ ಮಾಡಲು ಯಶಸ್ವಿಯಾದರು. ವಧು ಉಷಾ ಅವರು ತಮ್ಮ ಊರಿನಿಂದ ಪುಣಜನೂರಿಗೆ ಬಂದರೆ, ವರ ಕೊಯಮತ್ತೂರಿನಿಂದ ಬಂದಿದ್ದರು.

ಗಣಪತಿ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ‌ ಕಾಲಿರಿಸಿದರು. ನಂತರ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಗಾದ ದಂಪತಿಗೆ ತಮಿಳುನಾಡಿಗೆ ತೆರಳಲು ಅವಕಾಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT