ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ನೆಗೆಟಿವ್‌ ವರದಿ ತಂದವರನ್ನು ಜೈಲಿಗಟ್ಟಿ:ಸಚಿವ ಸೋಮಶೇಖರ್‌ ಸೂಚನೆ

Last Updated 21 ಆಗಸ್ಟ್ 2021, 9:46 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೇರಳದಿಂದ ಬರುವವರುನಕಲಿ ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ ತೋರಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲು ಮಾಡಿ ಜೈಲುಗಟ್ಟಿ ಎಂದು ಕೋವಿಡ್‌ ನಿರ್ವಹಣೆಯಚಾಮರಾಜನಗರ ಜಿಲ್ಲಾ ಉಸ್ತುವರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶನಿವಾರ ತಾಲ್ಲೂಕಿನ ಗಡಿ ಭಾಗ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು,ರಾಜ್ಯಕ್ಕೆ ಬರುವವರು ನಕಲಿ ನೆಗೆಟಿವ್‌ ವರದಿ ತಂದರೆ ಅವರ ಮಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಿ ಅಲ್ಲದೇ, ಅಲ್ಲಿನ ಜಿಲ್ಲಾಧಿಕಾರಿ ಅವರಿಗೆ ಮಾಹಿತಿಯನ್ನೂ ನೀಡಿ’ ಎಂದರು.

ಕೆಲವು ಪ್ರಯಾಣಿಕರು ನಕಲಿ ಆರ್‌ಪಿಸಿಆರ್‌ ವರದಿಗಳನ್ನು ತರುತ್ತಿರುವ ಬಗ್ಗೆ ಕೇರಳದ ವಯನಾಡಿನ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯುವಂತೆ ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರಿಗೆ ಸಚಿವರು ಸೂಚಿಸಿದರು.

‘ತುರ್ತು ಸಂದರ್ಭಗಳಲ್ಲಿ ಮಾತ್ರ ಗಡಿ ದಾಟಲು ಅವಕಾಶ ನೀಡಿ. ಉಳಿದಂತೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬೇಡಿ’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಮೈಸೂರು ಮೇಯರ್‌ ಯಾರು? ಒಂದೆರಡು ದಿನದಲ್ಲಿ ತಿಳಿಯಲಿದೆ

ಮೈಸೂರು ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್‌ ಅವರು, ‘ಜೆಡಿಎಸ್‌ ಮುಖಂಡ ಹಾಗೂ ಶಾಸಕ ಸಾ.ರಾ.ಮಹೇಶ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಮೇಯರ್‌ ಸ್ಥಾನ ನಮಗೆ ಬಿಟ್ಟುಕೊಡುವಂತೆ ಕೇಳಿದ್ದೇನೆ.ಅವರು ಜೆಡಿಎಸ್‌ಗೆ ಬಿಟ್ಟು ಕೊಡುವಂತೆ ಕೇಳಿದ್ದಾರೆ’ ಎಂದರು.

‘ನಾನು ಮೂರು ಷರತ್ತು ಹಾಕಿದ್ದೇನೆ. ಅವರು ಕೂಡ ಷರತ್ತು ಹಾಕಿದ್ದಾರೆ. ಸಾ.ರಾ.ಮಹೇಶ್‌ ಅವರು ಜೆಎಡಿಎಸ್‌ನ ದೇವೇಗೌಡ, ಕುಮಾರಸ್ವಾಮಿ ಹಾಗೂ ಇತರರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವಿಚಾರವಾಗಿ ಪಕ್ಷದ ಶಾಸಕ ನಾಗೇಂದ್ರ, ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಮೈಸೂರು ನಗರ ಘಟಕದ ಅಧ್ಯಕ್ಷ ಅವರು ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಲಿದ್ದಾರೆ. ಭಾನುವಾರ ಸಂಜೆ ಅಥವಾ ಸೋಮವಾರ ಬೆಳಿಗ್ಗೆ ಮೇಯರ್‌ ಯಾರು ಎಂದು ತಿಳಿಯಲಿದೆ’ ಎಂದರು.

ಒಂದೆರಡು ದಿನಗಳಲ್ಲಿ ಅಂತಿಮ: ಸಚಿವ ಆನಂದ ಸಿಂಗ್‌ ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ ಭಾನುವಾರ ಅಥವಾ ಸೋಮವಾರ ಎಲ್ಲವೂ ಅಂತಿಮ ಆಗುತ್ತದೆ. ಸಮಸ್ಯೆ ಬಗೆ ಹರಿಯುತ್ತದೆ. ಮುಖ್ಯಮಂತ್ರಿ ಅವರು ಆನಂದ ಸಿಂಗ್‌ ಅವರನ್ನು ಕರೆಸಿ ಮಾತನಾಡಲಿದ್ದಾರೆ. ಏನೆಲ್ಲ ಹೇಳಬೇಕೋ ಅದನ್ನೆಲ್ಲ ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT