ಮಹದೇಶ್ವರ ಬೆಟ್ಟ: ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಪವಾಡ ಪುರುಷ ನೆಲೆಯಾದ ಮಲೆ ಮಹದೇಶ್ವರ ಸನ್ನಿಧಿಯಲ್ಲಿ ಏ.16ರಿಂದ 19ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿವೆ.

ಯುಗಾದಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದೆಲ್ಲೆಡೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರಲಿದ್ದು, ಅವರಿಗೆ ದಾಸೋಹ, ದರ್ಶನ, ವಾಸ್ತವ್ಯಕ್ಕೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ಸಾವಿರಾರು ಭಕ್ತರು ಧಾವಿಸುತ್ತಿದ್ದು ರಂಗಮಂದಿರದ ಆವರಣ, ದೇಗುಲದ ಪ್ರಾಂಗಣ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಬಿಡಾರ ಹೂಡಿದ್ದಾರೆ. ಬೇಸಗೆಯ ಹಿನ್ನಲೆಯಲ್ಲಿ ಭಕ್ತರಿಗೆ ಬಿಸಿಲನ ಝಳ ತಟ್ಟದಂತೆ ಕೆಲವು ಕಡೆಗಳಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ ಅಲ್ಲಲ್ಲಿ ಭಕ್ತರು ಬೀಡುಬಿಟ್ಟಿದ್ದು ಯುಗಾದಿ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

16ರಿಂದ 4 ದಿನಗಳ ಕಾಲ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದ್ದು ನಿತ್ಯವೂ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ. 16ರಂದು ಯುಗಾದಿ ಜಾತ್ರೆಗೆ ಚಾಲನೆ ದೊರೆಯಲಿದ್ದು ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಜರುಗಲಿದೆ.

ಕೊನೆಯ ದಿನವಾದ 19ರಂದು ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜಾ ಪುರಸ್ಕಾರಗಳು ನೆರವೇರಲಿದ್ದು ಅಂದು ಚಂದ್ರಮಾನ ಯುಗಾದಿಯ ಪ್ರಯುಕ್ತ ಬೆಳಿಗ್ಗೆ 9.45 ರಿಂದ 11ಗಂಟೆಯವರೆಗಿನ ಶುಭ ಮುಹೂರ್ತದಲ್ಲಿ ಮಾದೇಶ್ವರ ಸ್ವಾಮಿಯ ಮಹಾ ರಥೋತ್ಸವ ಜರುಗಲಿದ್ದು ವೈಭವದ ತೆರೆ ಬೀಳಲಿದೆ.

ರಥ ನಿರ್ಮಾಣಕ್ಕೆ ಚಾಲನೆ: ಯುಗಾದಿ ಜಾತ್ರಾ ಮಹೋತ್ಸವಕ್ಕೆ ಪ್ರತಿವರ್ಷ ರಥ ಕಟ್ಟುವುದು ಸಂಪ್ರದಾಯ. ಅದರಂತೆ ಸಾಲೂರು ಮಠಾಧೀಶರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ರಥಕಟ್ಟುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಸುಂದರವಾದ ತೇರನ್ನು ನಿರ್ಮಾಣ ಮಾಡಿದ ಬಳಿಕ ಬಣ್ಣ ಬಣ್ಣದ ಬಾವುಟ, ಬಟ್ಟೆಗಳಿಂದ ಅಲಂಕಾರ ಮಾಡಲಾಗುತ್ತದೆ. ಹಬ್ಬದ ಹೊತ್ತಿಗೆ ತೇರು ಸರ್ವಾಲಂಕೃತವಾಗಿ ಸಿಂಗಾರಗೊಳ್ಳಲಿದೆ.

ವಿದ್ಯುತ್ ದೀಪಾಲಂಕಾರ: ಕ್ಷೇತ್ರದಲ್ಲಿ ನಡೆಯುವ ಪ್ರಮುಖ ವಾರ್ಷಿಕ ಉತ್ಸವಗಳಲ್ಲಿ ಯುಗಾದಿ ಜಾತ್ರಾ ಮಹೋತ್ಸವವೂ ಒಂದಾಗಿರುವುದರಿಂದ ಮಾದಪ್ಪನ ಕ್ಷೇತ್ರ ಸಿಂಗಾರಗೊಳ್ಳುತ್ತದೆ. ದೇಗುಲ, ಆವರಣ, ರಸ್ತೆ, ಪ್ರಮುಖ ವೃತ್ತಗಳು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಳ್ಳಲಿವೆ. ಈಗಾಗಲೇ ಕ್ಷೇತ್ರವನ್ನು ಸಿಂಗರಿಸುವ ಕಾರ್ಯ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.