ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಮಳೆಗೆ 45ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಶೀಘ್ರ ಪರಿಹಾರಕ್ಕಾಗಿ ಸಂತ್ರಸ್ತರ ಒತ್ತಾಯ
Last Updated 19 ನವೆಂಬರ್ 2021, 2:18 IST
ಅಕ್ಷರ ಗಾತ್ರ

ಹನೂರು: ನಿರಂತರ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಬೆಳೆ ಹಾಗೂ ಆಸ್ತಿಪಾಸ್ತಿಗೆ ಹೆಚ್ಚು ಹಾನಿಯಾಗಿದೆ.

ಕೃಷಿ ಇಲಾಖೆ ನಡೆಸಿರುವ ಪ್ರಾಥಮಿಕ ಅಂದಾಜಿನ ಪ್ರಕಾರ ತಾಲ್ಲೂಕಿನಲ್ಲಿ 1,100 ಹೆಕ್ಟೇರ್‌ ರಾಗಿ ಸೇರಿದಂತೆ 1,131 ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಂಭವಿಸಿದೆ. ಕಂದಾಯ ಇಲಾಖೆ ನೀಡಿರುವ ಮಾಹಿತಿಯಂತೆ 45ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ ತಿಂಗಳಲ್ಲಿ ಇದುವರೆಗೆ 19.62 ಸೆಂ.ಮೀ. ಮಳೆಯಾಗಿದೆ. ವಾಡಿಕೆಯಲ್ಲಿ 5.8 ಸೆಂ.ಮೀ. ಮಳೆಯಾಗಬೇಕು. ಗ್ರಾಮೀಣ ಭಾಗದಲ್ಲಿ ಬಹುತೇಕ ಮನೆಗಳನ್ನು ಮಣ್ಣಿನಿಂದ ನಿರ್ಮಿಸಲಾಗಿದ್ದು, ನಿರಂತರ ಮಳೆಯಿಂದ ತೇವಾಂಶ ಹೆಚ್ಚಿ ಗೋಡೆಗಳು ಕುಸಿಯುತ್ತಿವೆ. ಇದುವರೆಗೂ ಜೀವ ಹಾನಿ ಸಂಭವಿಸದಿದ್ದರೂ, ಜನರು ಆತಂಕದಲ್ಲೇ ದಿನ ದೂಡುವಂತಾಗಿದೆ.

ರಾಮಾಪುರಹೋಬಳಿಯಕಾಂಚಳ್ಳಿ ಗ್ರಾಮದ ನಲ್ಲೇಗೌಡ,ಪದ್ಮ,ಮುತ್ತಮ್ಮ, ಮಾದೇಗೌಡಎಂಬುವರ ಮನೆಯಗೋಡೆಗಳು ಕುಸಿದಿವೆ. ಪೂಜಾರಿಭೋವಿದೊಡ್ಡಿಯಯಾರಶಾನಿಎಂಬುವರಮನೆಗೋಡೆಸಹ ಕುಸಿದಿದೆ. ಮಹದೇಶ್ವರಬೆಟ್ಟಗ್ರಾಮ ಪಂಚಾಯಿತಿವ್ಯಾಪ್ತಿಯ ಕಾಡುಹೊಲ ಗ್ರಾಮದಕೆಂಪರಾಜು,ಇಂಡಿಗನತ್ತಗ್ರಾಮದ ದುಬ್ಬಮ್ಮ,ತೊಳಸೀಕೆರೆಗ್ರಾಮದಲ್ಲಿ ಕುರಿ ಕೊಟ್ಟಿಗೆಯ ಗೋಡೆ ಸಹ ಕುಸಿದಿರುವ ಘಟನೆ ನಡೆದಿದೆ. ಚಿಂಚಳ್ಳಿಗ್ರಾಮದತಾಯಿಮಲ್ಲಮ್ಮಅವರಮನೆಯಗೋಡೆ, ಚಾವಣಿ ಕುಸಿದಿದೆ.

ಅಜ್ಜೀಪುರಗ್ರಾಮಪಂಚಾಯಿತಿವ್ಯಾಪ್ತಿಯಜಿ.ಆರ್.ನಗರದಪಿಕಾಳಿಯಮ್ಮ,ಅಜ್ಜೀಪುರದದೊಡ್ಡಮ್ಮ, ಅಜ್ಜಯ್ಯ ಅವರ ಮನೆಗಳಿಗೂ ಹಾನಿಯಾಗಿದೆ. ಕೊಂಗೇರಿಯಲ್ಲಿ ಮೂರು,ಕುರುಬರದೊಡ್ಡಿಯಲ್ಲಿ ಎರಡು,ವಡ್ಡರದೊಡ್ಡಿ, ದೊಮ್ಮನಗದ್ದೆಗ್ರಾಮದಲ್ಲಿ ತಲಾ ಒಂದು ಮನೆಗಳಿಗೆ ಹಾನಿ ಸಂಭವಿಸಿದೆ.

ಜಿಲ್ಲಾಡಳಿತವು ಮನೆಯನ್ನು ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಿಕೊಡಬೇಕು ಇಲ್ಲವೇ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಯದ ಗ್ರಾಮದ ಜಿಯಾ ಎಂಬುವರ ಮನೆ ಗೋಡೆ ಕುಸಿದಿದೆ. ಗೋಡೆ ಹೊರಭಾಗಕ್ಕೆ ಕುಸಿದು ಬಿದ್ದಿರುವುದರಿಂದ ಪ್ರಾಣಾಪಾಯ ಸಂಭವಿಸಿಲ್ಲ.40ವರ್ಷದ ಹಿಂದೆಭೂಸೇನಾನಿಗಮದಿಂದಕಟ್ಟಲಾಗಿರುವ ಮನೆಗಳುವಿವಿಧ ಕಾರಣಗಳಿಂದಕುಸಿಯುತ್ತಿವೆ. ಶೀಟುಗಳು ತೂತು ಬಿದ್ದುಛಾವಣಿಯಿಂದ ನೀರು ಸೋರಿ, ಮನೆಗಳಿಗೆನೀರುನುಗ್ಗಿವಾಸಕ್ಕೆತೊಂದರೆಯಾಗಿದೆ.

‘ಬುಡಕಟ್ಟುಜನಾಂಗದ ಅಂಗವಿಕಲರಾಗಿರುವ ಜಿಯಾ ಮನೆ ದುರಸ್ತಿ ಮಾಡಲು ಸಾಧ್ಯವಿಲ್ಲದಷ್ಟು ಹಾನಿಗೀಡಾಗಿದೆ. ಮನೆಯಲ್ಲಿದ್ದ ಆಹಾರ ಪದಾರ್ಥಗಳು ನೀರಿನಿಂದಾಗಿ ಹಾಳಾಗಿವೆ. ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆಯು ಅವರಿಗೆ ಪರಿಹಾರನೀಡಬೇಕುಹಾಗೂ ಅಂಗವಿಕಲರ ಕೋಟಾದಡಿ ಮನೆಯೊಂದನ್ನುನಿರ್ಮಿಸಿಕೊಡಬೇಕು’ ಎಂದು ಸೋಲಿಗಅಭಿವೃದ್ಧಿಸಂಘದಅಧ್ಯಕ್ಷರಂಗೇಗೌಡ ಒತ್ತಾಯಿಸಿದರು.

‘ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ’

ತಾಲ್ಲೂಕಿನಲ್ಲಿ ಮಳೆಯಿಂದಾಗಿರುವ ಹಾನಿಯ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ತಾಲ್ಲೂಕಿನ ಗ್ರೇಡ್‌–2 ತಹಶೀಲ್ದಾರ್‌ ರಾಜಾಕಾಂತ್‌, ‘ಬುಧವಾರ ಅಂತ್ಯದವರೆಗೆ ತಾಲ್ಲೂಕಿನಾದ್ಯಂತ 45 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಮಳೆ ಮುಂದುವರೆಯುತ್ತಿರುವುದರಿಂದ ಪ್ರತಿ ನಿತ್ಯವೂ ಗ್ರಾಮಗಳಲ್ಲಿ ಸಂಭವಿಸುವ ಹಾನಿ ಬಗ್ಗೆ ಮಾಹಿತಿ ನೀಡುವಂತೆ ಆಯಾ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT