ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಕುರುಬನಕಟ್ಟೆಯ ಚೆನ್ನಯ್ಯ ಲಿಂಗಯ್ಯ ಕಂಡಾಯ ಉತ್ಸವ ವಿಜೃಂಭಣೆಯಿಂದ ಶನಿವಾರ ಜರುಗಿತು.

ಗ್ರಾಮದ ಕಾವೇರಿ ನದಿಯಲ್ಲಿ ಕಂಡಾಯಗಳಿಗೆ ಹೂ ಹೊಂಬಾಳೆ ಧರಿಸಿ ಮೆರವಣಿಗೆ ಮೂಲಕ ಬಡಾವಣೆಗಳಿಗೆ ಬಂದವು. ಮೆರವಣಿಗೆ ನಡೆಸುವ ವೇಳೆ ಕಂಡಾಯಗಳಿಗೆ ಪ್ರತಿ ಮನೆಗಳಲ್ಲಿ ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು.

ಉತ್ಸವದ ಅಂಗವಾಗಿ ಬೀದಿಯಲ್ಲಿ ರಂಗೋಲಿ ಬಿಡಿಸಿ, ಹಸಿರು ತೋರಣ ವಿದ್ಯುತ್ ದೀಪಾಲಂಕರ ಮಾಡಲಾಯಿತು.
ಉತ್ಸವದಲ್ಲಿ ಯುವಕರು ಹಾಗೂ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು.

ಗ್ರಾಮದ ಮುಖಂಡ ಉಮೇಶ್, ಸಿದ್ದಪ್ಪಸ್ವಾಮಿ, ಮಾದೇಶ್, ಶೇಖರ್, ಚಿಕ್ಕ ಪುಟ್ಟರಾಜು, ಮಂಜು, ಯುವಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.