ಚಾಮರಾಜನಗರ: ರಂಗವಾಹಿನಿ ಸಂಸ್ಥೆ ನೀಡುವ 15ನೇ ವರ್ಷದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಎಸ್.ಮಂಜುನಾಥ ಅವರ ‘ಹೆಬ್ಬಿರುಳಿನ ನಿಬ್ಬೆರಗು’ ಕವನ ಸಂಕಲನ ಆಯ್ಕೆಯಾಗಿದೆ.

ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ಜೂನ್ 28ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ತಿಳಿಸಿದ್ದಾರೆ.

ಎಸ್.ಮಂಜುನಾಥ ಕೋಲಾರ ಜಿಲ್ಲೆಯ ಲಕ್ಕೂರಿನವರು. ಸಾಮಾಜಿಕ ಬದ್ಧತೆಯಿಂದ ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಂವೇದನಾಶೀಲ ಕವಿಯಾಗಿದ್ದು ಮನುಷ್ಯ ಯುದ್ಧದ ಬಣ್ಣಗಳು, ಚಾಟಿಗೆ ಕಟ್ಟಿದ ಗೆಜ್ಜೆ, ಹೆಬ್ಬೆರುಳಿನ ನಿಬ್ಬೆರಗು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಫಲಿತಾಕ್ಷರ, ವಿಷ ಘಮ್ಮಲು, ಕೀಯ ಕೀಯ ರಾಜಕೀಯ, ಪುಟ್ಟಿ, ಗುಲಾಬಿ ಗ್ಯಾಂಗ್, ಟೈಮ್ ಲೈನ್, ಫ್ರಿಡ್ಜ್ನಲ್ಲೇನಿದೆ, ಏಕತಂತಿ ಏಕನಾದ ಎಂಬ ಬೀದಿ ನಾಟಕಗಳನ್ನು ರಚನೆ ಮಾಡಿದ್ದಾರೆ. ಕೌದಿ ಚಲನಚಿತ್ರಕ್ಕೆ ಗೀತ ರಚನೆ ಮಾಡಿದ್ದು, ಡಿಎನ್ಎ ಮತ್ತು ಚೆಲುವಿನ ಪರಂಗಿ ಗಿಡಗಳು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-37-1494507183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.