ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹೊಂಗನೂರು,ಕೊಂಗರಹಳ್ಳಿ, ಅಣ್ಣೂರು, ಕೆಸ್ತೂರು ಹೊಸ ಜಿ.ಪಂ ಕ್ಷೇತ್ರಗಳು

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್‌ ವಿಂಗಡಣೆ, 4 ಹೆಚ್ಚಳ, 14 ತಾ.ಪಂ. ಕ್ಷೇತ್ರ ಇಳಿಕೆ
Last Updated 1 ಏಪ್ರಿಲ್ 2021, 7:54 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪುನರ್‌ವಿಂಗಡಣೆ ಮಾಡಿರುವ ರಾಜ್ಯ ಚುನಾವಣಾ ‌ಆಯೋಗ, ಹೊಸ ಕ್ಷೇತ್ರಗಳನ್ನು ಹೆಸರಿಸಿ ಮಂಗಳವಾರ (ಮಾರ್ಚ್‌ 30) ಅಧಿಸೂಚನೆ ಹೊರಡಿಸಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ ಹೊಂಗನೂರು, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕೊಂಗರಹಳ್ಳಿ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅಣ್ಣೂರು (ಬನ್ನಿತಾಳಪುರ) ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಕೆಸ್ತೂರು ಸೃಷ್ಟಿಯಾಗಿರುವ ಹೊಸ ಕ್ಷೇತ್ರಗಳು.

ಜನಸಂಖ್ಯೆಯ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಗಳನ್ನು (ಕ್ಷೇತ್ರಗಳ ಸಂಖ್ಯೆ) ನಿಗದಿ ಪಡಿಸಿ ಈಗಾಗಲೇ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಜಿಲ್ಲೆಯಲ್ಲಿ 4 ಹೊಸ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಸೃಷ್ಟಿಯಾಗಿವೆ. 14 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಕಡಿಮೆಯಾಗಿವೆ.

ಇದರೊಂದಿಗೆ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 23ರಿಂದ 27ಕ್ಕೆ ಏರಿದೆ. ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು 89ರಿಂದ 14ಕ್ಕೆ ಇಳಿದಿವೆ.

12 ಕ್ಷೇತ್ರಗಳ ಹೆಸರು ಬದಲು: ಪುನರ್‌ವಿಂಗಡಣೆಯ ಜೊತೆಗೆ12 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಹೆಸರುಗಳು ಬದಲಾಗಿವೆ.

ಚಾಮರಾಜನಗರ ತಾಲ್ಲೂಕಿನ ಆಲೂರು, ಚಂದಕವಾಡಿ ಮಾದಾಪುರ ಮತ್ತು ಸಂತೇಮರಹಳ್ಳಿ ಕ್ಷೇತ್ರಗಳನ್ನು ಕ್ರಮವಾಗಿ ಕಾಗಲವಾಡಿ, ನಾಗವಳ್ಳಿ, ಮಂಗಲ ಮತ್ತು ಉಮ್ಮತ್ತೂರು ಎಂದು ಮರು ನಾಮಕರಣ ಮಾಡಲಾಗಿದೆ.

ಕಾಗಲವಾಡಿ ಕ್ಷೇತ್ರ ವ್ಯಾಪ್ತಿಗೆ ಕಾಗಲವಾಡಿ, ಆಲೂರು, ಕೂಡ್ಲೂರು ಮತ್ತು ಜ್ಯೋತಿಗೌಡನಪುರ ಗ್ರಾಮ ಪಂಚಾಯಿತಿಗಳು, ನಾಗವಳ್ಳಿ ಕ್ಷೇತ್ರದಕ್ಕಿ ನಾಗವಳ್ಳಿ, ಚಂದಕವಾಡಿ, ಹೆಬ್ಬದೂರು ಮತ್ತು ಪುಣಜನೂರು ಗ್ರಾಮ ಪಂಚಾಯಿತಿಗಳು ಬರಲಿವೆ.

ಮಂಗಲ ಕ್ಷೇತ್ರ ವ್ಯಾಪ್ತಿಗೆ ಮಂಗಲ, ಮಾದಾಪುರ, ಭೋಗಾಪುರ, ಬದನಗುಪ್ಪೆ ಮತ್ತು ಕುದೇರು ಗ್ರಾಮ ಪಂಚಾಯಿತಿಗಳು ಬರುತ್ತವೆ.

ಉಮ್ಮತ್ತೂರು ಕ್ಷೇತ್ರದಲ್ಲಿ ಉಮ್ಮತ್ತೂರು, ಸಂತೇಮರಹಳ್ಳಿ, ದೇಮಹಳ್ಳಿ, ನವಿಲೂರು, ಮತ್ತು ಬಾಗಳಿ ಗ್ರಾಮ ಪಂಚಾಯಿತಿಗಳು ಸೇರಿವೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕುಂತೂರು ಕ್ಷೇತ್ರದ ಹೆಸರು ಮುಳ್ಳೂರು ಎಂದೂ, ಮಧುವನಹಳ್ಳಿ ಕ್ಷೇತ್ರದ ಹೆಸರು ಪಾಳ್ಯ ಎಂದು ಬದಲಾಗಿದೆ.

ಮುಳ್ಳೂರು ಕ್ಷೇತ್ರದ ವ್ಯಾಪ್ತಿಗೆ ನಾಲ್ಕು ಗ್ರಾಮ ಪಂಚಾಯಿತಿಗಳು (ಮುಳ್ಳೂರು, ಕುಂತೂರು, ಟಗರಪುರ, ಕುಣಗಳ್ಳಿ) ಬರುತ್ತವೆ.

ಮಧುವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿಮಧುವನಹಳ್ಳಿ, ಪಾಳ್ಯ, ಸಿದ್ದಯ್ಯನಪುರ ಮತ್ತು ತಿಮ್ಮರಾಜಿಪುರ ಗ್ರಾಮ ಪಂಚಾಯಿತಿಗಳು ಬರುತ್ತವೆ.

ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಇನ್ನುಮುಂದೆ ಹುತ್ತೂರು ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಲಿದೆ. ಲೊಕ್ಕನಹಳ್ಳಿ, ಚಿಕ್ಕ ಮಾಲಾಪುರ, ಪಿ.ಜಿ.ಪಾಳ್ಯ, ಹುತ್ತೂರು ಮತ್ತು ಬೈಲೂರು ಗ್ರಾಮ ಪಂಚಾಯಿತಿಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ಅದೇ ತಾಲ್ಲೂಕಿನ, ರಾಮಾಪುರ ಕ್ಷೇತ್ರ ಇನ್ನು ಮುಂದೆ ಅಜ್ಜೀಪುರ ಕ್ಷೇತ್ರವಾಗಿ ಗುರುತಿಸಿಕೊಳ್ಳಲಿದೆ. ಅಜ್ಜೀಪುರ, ದಿನ್ನಳ್ಳಿ, ಸೂಳೇರಿಪಾಳ್ಯ, ಮಿಣ್ಯಂ ಮತ್ತು ಹೂಗ್ಯಂ ಗ್ರಾಮ ಪಂಚಾಯಿತಿಗಳು ಇದರ ವ್ಯಾಪ್ತಿಯಲ್ಲಿ ಬರಲಿವೆ.

ಗುಂಡ್ಲುಪೇಟೆ ತಾಲ್ಲೂಕಿನ ಬರ‌ಗಿ ಕ್ಷೇತ್ರ ಕೂತನೂರು ಆಗಿಯೂ, ಬೇಗೂರು ಕ್ಷೇತ್ರ ಕೋಟೆಕೆರೆ ಎಂದೂ ಮರುನಾಮಕರಣಗೊಂಡಿವೆ.

ಕೊತನೂರು ಕ್ಷೇತ್ರದಲ್ಲಿ ಕೊತನೂರು, ಬರಗಿ, ಆಲತ್ತೂರು, ಮೂಖಹಳ್ಳಿ, ಬೇರಂಬಾಡಿ ಮತ್ತು ಭೀಮನಬೀಡು ಗ್ರಾಮ ಪಂಚಾಯಿತಿಗಳಿವೆ. ಕೋಟೆಕೆರೆ ಕ್ಷೇತ್ರದಲ್ಲಿ ಬೇಗೂರು, ಹೊರೆಯಾಲ, ಕೋಟೆಕೆರೆ, ರಾಘವಾಪುರ ಮತ್ತು ಚಿಕ್ಕಾಟಿ ಗ್ರಾಮ ಪಂಚಾಯಿತಿಗಳು ಬರುತ್ತವೆ.

ಯಳಂದೂರು ತಾಲ್ಲೂಕಿನಲ್ಲಿ ಆಗರ ಕ್ಷೇತ್ರ ಮದ್ದೂರು ಹಾಗೂ ಯಳಂದೂರು ಕಸಬಾ ಕ್ಷೇತ್ರ ಯರಗಂಬಳ್ಳಿ ಕ್ಷೇತ್ರವಾಗಿ ಬದಲಾಗಿದೆ. ‌

ಮದ್ದೂರು ಕ್ಷೇತ್ರದಲ್ಲಿ ಮದ್ದೂರು, ಅಗರ, ಮಾಂಬಳ್ಳಿ ಮತ್ತು ಗೌಡ ಹಳ್ಳಿ ಗ್ರಾಮ ಪಂಚಾಯಿತಿಗಳು, ಯರಗಂಬಳ್ಳಿ ಕ್ಷೇತ್ರದಲ್ಲಿ ಯರಗಂಬಳ್ಳಿ, ಬಿಳಿಗಿರಿ ರಂಗನಬೆಟ್ಟ, ಗುಂಬಳ್ಳಿ ಮತ್ತು ಯರಿಯೂರು ಗ್ರಾಮ ಪಂಚಾಯಿತಿಗಳು ಬರುತ್ತವೆ.

ಹೊಸ ಕ್ಷೇತ್ರಗಳ ವ್ಯಾಪ್ತಿ

ಚಾಮರಾಜನಗರ ತಾಲ್ಲೂಕಿನ ಹೊಂಗನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಗೆ ‌ಹೊಂಗನೂರು, ಇರಸವಾಡಿ, ಮಸಣಾಪುರ, ಕೆಂಪನಪುರ ಮತ್ತು ಗೂಳಿಪುರ ಸೇರಿದಂತೆ 5 ಗ್ರಾಮ ಪಂಚಾಯಿತಿಗಳು ಬರುತ್ತವೆ.

ಕೊಳ್ಳೇಗಾಲ ತಾಲ್ಲೂಕಿನ ಕೊಂಗರಹಳ್ಳಿ ಕ್ಷೇತ್ರಕ್ಕೆ ಕೊಂಗರಹಳ್ಳಿ, ದೊಡ್ಡಿಂದುವಾಡಿ, ತೆಳ್ಳನೂರು, ಚಿಕ್ಕಲ್ಲೂರು ಮತ್ತು ಸಿಂಗಾನಲ್ಲೂರು ಗ್ರಾಮ ಪಂಚಾಯಿತಿಗಳು ಬರುತ್ತವೆ.

ಗುಂಡ್ಲುಪೇಟೆ ತಾಲ್ಲೂಕಿನ ಬನ್ನಿತಾಳಪುರ, ಅಣ್ಣೂರು, ಶಿಂಡನಪುರ, ಕೆಲಸೂರು, ನೇನೇಕಟ್ಟೆ ಮತ್ತು ಬೆಳಚವಾಡಿ ಈ ಆರು ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಹೊಸದಾಗಿ ಅಣ್ಣೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ರಚಿಸಲಾಗಿದೆ.

ಯಳಂದೂರು ತಾಲ್ಲೂಕಿನಲ್ಲಿ ಕೆಸ್ತೂರು, ಹೊನ್ನೂರು, ಅಂಬಳೆ ಮತ್ತು ದುಗ್ಗಹಟ್ಟಿ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಕೆಸ್ತೂರು ಕ್ಷೇತ್ರವನ್ನು ಸೃಷ್ಟಿಸಲಾಗಿದೆ.

ತಾಲ್ಲೂಕುವಾರು ಕ್ಷೇತ್ರಗಳ ವಿವರ

ಕ್ಷೇತ್ರ ಪುನರ್‌ವಿಂಗಡನೆಯ ಬಳಿಕ ತಾಲ್ಲೂಕುವಾರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರು ಈ ಕೆಳಕಂಡಂತಿವೆ...

ಚಾಮರಾಜನಗರ: 9 ಕ್ಷೇತ್ರಗಳು– ಕಾಗಲವಾಡಿ, ನಾಗವಳ್ಳಿ, ಹರದನಹಳ್ಳಿ, ಹರವೆ, ಮಂಗಲ, ಉಮ್ಮತ್ತೂರು, ಉಡಿಗಾಲ, ಅಮಚವಾಡಿ ಮತ್ತು ಹೊಂಗನೂರು

ಗುಂಡ್ಲುಪೇಟೆ: 6 ಕ್ಷೇತ್ರಗಳು– ಕೂತನೂರು, ಕೋಟೆಗೆರೆ, ಹಂಗಳ, ಕಬ್ಬಹಳ್ಳಿ, ತೆರಕಣಾಂಬಿ, ಅಣ್ಣೂರು (ಬನ್ನಿತಾಳಪುರ)

ಹನೂರು: 5 ಕ್ಷೇತ್ರಗಳು– ಬಂಡಳ್ಳಿ, ಹುತ್ತೂರು, ಮಾರ್ಟಳ್ಳಿ, ಅಜ್ಜೀಪುರ, ಕೌದಳ್ಳಿ

ಕೊಳ್ಳೇಗಾಲ: 4 ಕ್ಷೇತ್ರಗಳು– ಮುಳ್ಳೂರು, ಮಧುವನಹಳ್ಳಿ, ಸತ್ತೇಗಾಲ, ಕೊಂಗರಹಳ್ಳಿ

ಯಳಂದೂರು: 3 ಕ್ಷೇತ್ರಗಳು–ಮದ್ದೂರು, ಯರಗಂಬಳ್ಳಿ, ಕೆಸ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT