ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗಗಳಲ್ಲಿ ಹೆಚ್ಚಿದ ಪ್ರಕರಣ, ಸಾವಿನ ಸಂಖ್ಯೆಯೂ ಹೆಚ್ಚು

377 ಪ್ರಕರಣ ದೃಢ, ಏಳು ಸಾವು, 215 ಮಂದಿ ಗುಣಮುಖ
Last Updated 29 ಏಪ್ರಿಲ್ 2021, 13:12 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 377 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಏಳು ಮಂದಿ ಮೃತಪಟ್ಟಿದ್ದಾರೆ. 215 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 2,130ಕ್ಕೆ ಏರಿದೆ. ಈ ಪೈಕಿ 1,532 ಮಂದಿ ಹೋಂ ಐಸೊಲೇಷನ್ ನಲ್ಲಿದ್ದಾರೆ. 45 ಮಂದಿ ಐಸಿಯುನಲ್ಲಿದ್ದಾರೆ.

ದಾಖಲೆಯ ಸಾವು: ಬುಧವಾರದಿಂದ ಗುರುವಾರದವರೆಗಿನ 24 ಗಂಟೆಗಳ ಅವಧಿಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾಡಳಿತ ನೀಡಿರುವ ವರದಿಯಲ್ಲಿ ಏಳು ಮಂದಿ ಮೃತಪಟ್ಟಿರುವುದನ್ನು ಉಲ್ಲೇಖಿಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಆರಂಭವಾದ ನಂತರ ಒಂದೇ ದಿನ ಇಷ್ಟು ಮಂದಿ ಮೃತಪಟ್ಟಿರುವುದು ಇದೇ ಮೊದಲು. ಚಾಮರಾಜನಗರ ತಾಲ್ಲೂಕಿನ ಬಸವಾಪುರ ಗ್ರಾಮದ 70 ವರ್ಷದ ವೃದ್ಧ ಇದೇ 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.

ಚಾಮರಾಜನಗರ ತಾಲ್ಲೂಕು ಹರವೆ ಗ್ರಾಮದ 80 ವರ್ಷದ ವೃದ್ಧೆ ಇದೇ 25 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ. ಕೋವಿಡ್ ಆಸ್ಪತ್ರೆಗೆ ಇದೇ 21ರಂದು ದಾಖಲಾಗಿದ್ದ ಕೊಳ್ಳೇಗಾಲ ನಗರದ 75 ವರ್ಷದ ವೃದ್ಧ ಬುಧವಾರ ಕೊನೆಯುಸಿರೆಳೆದಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ವಿ.ಸಿ. ಹೊಸೂರು ಗ್ರಾಮದ 53 ವರ್ಷದ ವ್ಯಕ್ತಿ ಇದೇ 26ರಂದು ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಕೊಳ್ಳೇಗಾಲ ತಾಲ್ಲೂಕು ಹಂಗಲಪುರ ಗ್ರಾಮದ 38 ವರ್ಷದ ವ್ಯಕ್ತಿ ಇದೇ 26ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಕೊನೆಯುಸಿರೆಳೆದಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಕೊಡಸೋಗೆ ಗ್ರಾಮದ 38 ವರ್ಷದ ವ್ಯಕ್ತಿ 26ರಂದು ದಾಖಲಾಗಿದ್ದರು. ಬುಧವಾರ ಮೃತಪಟ್ಟಿದ್ದಾರೆ. ಯಳಂದೂರು‌ ತಾಲ್ಲೂಕಿನ ಯರಗಂಬಳ್ಳಿ ಗ್ರಾಮದ 47 ವರ್ಷದ ವ್ಯಕ್ತಿ ಇದೇ 22ರಂದು ದಾಖಲಾಗಿ, 27ರಂದು ನಿಧನರಾಗಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 138ಕ್ಕೆ ಏರಿದೆ. ಸೋಂಕು ದೃಢಪಟ್ಟಿದ್ದರೂ ಬೇರೆ ಅನಾರೋಗ್ಯಗಳಿಂದಾಗಿ‌ 20 ಮಂದಿ ನಿಧನರಾಗಿದ್ದಾರೆ. ಎರಡನ್ನೂ ಸೇರಿಸಿ ಹೇಳುವುದಾದರೆ ಜಿಲ್ಲೆಯಲ್ಲಿ ಈ ವರೆಗೆ 158 ಸೋಂಕಿತರು ಅಸುನೀಗಿದ್ದಾರೆ.

ಬುಧವಾರಕ್ಕೆ ಹೋಲಿಸಿದರೆ (415) ಗುರುವಾರ ವರದಿಯಾದ ಪ್ರಕರಣಗಳ ಸಂಖ್ಯೆಯಲ್ಲಿ (377) ಕೊಂಚ ಇಳಿಕೆಯಾಗಿದೆ. ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆ (215) ಕಂಡು ಬಂದಿದೆ. ಜಿಲ್ಲೆಯಲ್ಲಿ ಇದುವರೆಗೆ 10,584 ಪ್ರಕರಣಗಳು ದೃಢಪಟ್ಟಿವೆ. 8,296 ಮಂದಿ ಗುಣಮುಖರಾಗಿದ್ದಾರೆ.

ಗುರುವಾರ 1,578 ಮಂದಿಯ ಕೋವಿಡ್ ವರದಿ ಬಂದಿದ್ದು, ಈ ಪೈಕಿ 1,191 ಮಂದಿಯ ವರದಿ‌‌ ನೆಗೆಟಿವ್ ಬಂದಿವೆ. 387 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಈ ಪೈಕಿ 10 ಪ್ರಕರಣಗಳು ಹೊರ ಜಿಲ್ಲೆಗಳಿಗೆ ಸೇರಿವೆ.

ತಾಲ್ಲೂಕುವಾರು ಪ್ರಕರಣಗಳು: 377 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 136, ಗುಂಡ್ಲುಪೇಟೆಯಲ್ಲಿ 76, ಕೊಳ್ಳೇಗಾಲದಲ್ಲಿ 82, ಹನೂರಿನಲ್ಲಿ 41, ಯಳಂದೂರು ತಾಲ್ಲೂಕಿನಲ್ಲಿ 39 ಪ್ರಕರಣಗಳು ವರದಿಯಾಗಿವೆ. ಮೂರು ಪ್ರಕರಣಗಳು ಹೊರ ಜಿಲ್ಲೆಗೆ ಸೇರಿವೆ.

ಕೋವಿಡ್ ಅಂಕಿ ಅಂಶ

10,584 ಸೋಂಕಿತರು

2,130 ಸಕ್ರಿಯ ಪ್ರಕರಣ

8,296 ಗುಣಮುಖರಾದವರು

138 ಒಟ್ಟು ಸಾವು

ದಿನದ ಏರಿಕೆ

377 ಹೊಸ ಪ್ರಕರಣ

215 ಗುಣಮುಖ

7 ಸಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT