ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 176 ಹೊಸ ಕೋವಿಡ್ ಪ್ರಕರಣ

Last Updated 8 ಜೂನ್ 2021, 1:19 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 176 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 196 ಜನರು ಗುಣಮುಖರಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಪೈಕಿ ಇಬ್ಬರು ಕೋವಿಡ್‌ಯೇತರ ಕಾರಣದಿಂದ ನಿಧನರಾಗಿದ್ದಾರೆ ಎಂದು ಕೋವಿಡ್‌ ಆಸ್ಪತ್ರೆ ತನ್ನ ವರದಿಯಲ್ಲಿ ತಿಳಿಸಿದೆ.

ಸೋಮವಾರ 1,052 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 822 ವರದಿಗಳು ನೆಗೆಟಿವ್‌ ಬಂದು, 230 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಪೈಕಿ 54 ಪ್ರಕರಣಗಳು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿರುವ ಜಿಲ್ಲಾಡಳಿತ, ದಾಖಲಾದ ಪ್ರಕರಣಗಳ ಸಂಖ್ಯೆ 176 ಎಂದು ಉಲ್ಲೇಖಿಸಿದೆ.

ಈ ಅಂಕಿ ಅಂಶಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 28,429ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 25 ಸಾವಿರ ದಾಟಿದೆ. ಈ ವರಗೆ25,173 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟ 20 ಜನರು ಸೇರಿದಂತೆ ಒಟ್ಟು 493 ಸೋಂಕಿತರು ಕೊನೆಯುಸಿರೆಳೆದಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 2,787ಕ್ಕೆ ಇಳಿದಿದೆ. ಸೋಂಕಿತರ ಪೈಕಿ 57 ಮಂದಿ ಐಸಿಯುನಲ್ಲಿ 59 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಕೇರ್‌ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿದ್ದಾರೆ.

ಸೋಮವಾರ ದೃಢಪಟ್ಟ 176 ಪ್ರಕರಣಗಳಲ್ಲಿ, 60 ಪ್ರಕರಣ ಚಾಮರಾಜನಗರ ತಾಲ್ಲೂಕು, 42 ಗುಂಡ್ಲುಪೇಟೆ, 18 ಕೊಳ್ಳೇಗಾಲ, 38 ಹನೂರು ಹಾಗೂ 16 ಪ್ರಕರಣಗಳು ಯಳಂದೂರು ತಾಲ್ಲೂಕಿಗೆ ಸೇರಿವೆ. ಇಬ್ಬರು ಸೋಂಕಿತರು ಹೊರ ಜಿಲ್ಲೆಯವರು.

ಗುಣಮುಖರಾದ 196 ಮಂದಿಯಲ್ಲಿ ಮೂವರು ಆಸ್ಪತ್ರೆಯಲ್ಲಿದ್ದರು. 188 ಮಂದಿ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಆರೈಕೆ ಪಡೆಯುತ್ತಿದ್ದರು. ಐವರು ಹೋಂ ಐಸೊಲೇಷನ್‌ಲ್ಲಿದ್ದರು.

ಚಾಮರಾಜನಗರ ತಾಲ್ಲೂಕಿನ 65 ಮಂದಿ, ಗುಂಡ್ಲುಪೇಟೆಯ 54, ಕೊಳ್ಳೇಗಾಲದ 37, ಹನೂರಿನ 18 ಮತ್ತು ಯಳಂದೂರು ತಾಲ್ಲೂಕಿನ 22 ಮಂದಿ ಸೋಂಕು ಮುಕ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT