ಮಂಗಳವಾರ, ಜೂನ್ 22, 2021
28 °C

‘ನಮ್ಮ ಸಂಘ’ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸುರೇಶ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಬಂಡೀಪುರದಲ್ಲಿರುವ ‘ನಮ್ಮ ಸಂಘ’ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸುರೇಶ್‌ (45) ಅವರು ಮೈಸೂರಿನ ವಿದ್ಯಾರಣ್ಯ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಗುರುವಾರ ನಿಧನರಾದರು. ಇವರಿಗೆ ಪತ್ನಿ, ಪುತ್ರ ಇದ್ದಾರೆ.

‘ಗ್ರೀನ್‌ ಆಸ್ಕರ್‌’ ಪ್ರಶಸ್ತಿ ಪುರಸ್ಕೃತ ಕೃಪಾಕರ ಸೇನಾನಿ ಅವರು ಕಾಡಿನ ಸಂರಕ್ಷಣೆಗಾಗಿ ಬಂಡೀಪುರದಲ್ಲಿ ಸ್ಥಾಪಿಸಿರುವ ‘ನಮ್ಮ ಸಂಘ’ದಲ್ಲಿ 17 ವರ್ಷ ಕೆಲಸ ಮಾಡಿದ್ದರು. ಕಾಡಂಚಿನ 200 ಹಳ್ಳಿಗಳ 40 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲು ಶ್ರಮಿಸಿದ್ದರು. ಈ ಸಾಧನೆಗಾಗಿ ‘ಏಷ್ಯಾ ಸ್ಯಾಂಚುರಿ’ ನೀಡುವ ಪರಿಸರ ಸಂರಕ್ಷಣಾ ಪ್ರಶಸ್ತಿಗೆ ಭಾಜನರಾಗಿದ್ದರು. ಹಿಂದೆ, ಕೇಂದ್ರದಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿದ್ದ ಜೈರಾಮ್‌ ರಮೇಶ್‌ ಅವರ ಮೆಚ್ಚುಗೆಗೂ ಪಾತ್ರರಾಗಿದ್ದ ಸುರೇಶ್‌, ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಸ್ಥೆಯ ಮೂಲಕ ನೆರವಾಗಿದ್ದರು.

ಅಂತ್ಯಕ್ರಿಯೆಯು, ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿ ಗುರುವಾರ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು