ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ವೃಕ್ಷಕ್ರಾಂತಿ ಅಭಿಯಾನಕ್ಕೆ ಮಕ್ಕಳ 'ಬಾಲ್'

ಮಾಜಿ ಯೋಧ ನವೀನ್ ನೆನಪಿನಲ್ಲಿ ಹಾದಿಗೆ ಹಸಿರು ತುಂಬುವ ಪ್ರಯತ್ನ
Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಯಳಂದೂರು:ಮುಂಗಾರು ಕಾಲಿಡುತ್ತಿದ್ದಂತೆಯೇ ಕಾನನದ ಸುತ್ತಮುತ್ತಲ ಬಯಲು, ಬೆಟ್ಟ, ಗುಡ್ಡ, ಕೆರೆ, ಕಟ್ಟೆ ಹಾಗೂಗ್ರಾಮಗಳ ಸುತ್ತಮುತ್ತ ಬೀಜದುಂಡೆ ಬಿತ್ತಿ, ಹಸಿರು ಸೃಷ್ಟಿಸುವ ಕಾಯಕಕ್ಕೆ ತಾಲ್ಲೂಕಿನ ಪರಿಸರಪ್ರಿಯರು ಮುಂದಾಗಿದ್ದಾರೆ.

ತಾಲ್ಲೂಕಿನ ಗುಂಬಳ್ಳಿ, ಯರಗಂಬಳ್ಳಿ ಮತ್ತು ಗೌಡಹಳ್ಳಿ ಗ್ರಾಮ ಪಂಚಾತಿಯಿಗಳಸುತ್ತಮುತ್ತ ಅರಣ್ಯದ ಸರಹದ್ದು ಪ್ರಾರಂಭವಾಗುತ್ತದೆ. ಈ ಭಾಗದ ವಿದ್ಯಾರ್ಥಿಗಳು,ಸಂಘ-ಸಂಸ್ಥೆಗಳು ಮತ್ತು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ.

ಮಕ್ಕಳ ಹಸಿರು ಕಾಯಕ:ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಸರ್ಕಾರಿ ಪ್ರಾಥಮಿಕ ಶಾಲಾವಿದ್ಯಾರ್ಥಿಗಳು ಒಟ್ಟಾಗಿ ಸೇರಿ 'ಸೀಡ್ಥಾ‌ನ್ ವೃಕ್ಷ ಕ್ರಾಂತಿ ಅಭಿಯಾನ'ಆರಂಭಿಸಿದ್ದಾರೆ. ಶಾಲೆ ಮತ್ತು ಮನೆಗಳಲ್ಲಿ ಇದ್ದುಕೊಂಡು ಮಣ್ಣು ಮತ್ತು ಸಗಣಿಯನ್ನು ಬೆರೆಸಿ ಅದರಲ್ಲಿ ಹುಣಸೆ, ಬೇವು, ಹೊಂಗೆ, ಅರಳಿ, ಹಲಸು ಸೇರಿದಂತೆ ಹಲವಾರು ಮರಗಳ ಬೀಜಗಳನ್ನು ಇರಿಸಿ ಉಂಡೆ ತಯಾರಿಸುತ್ತಾರೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವೈದ್ಯರು, ಉಪನ್ಯಾಸಕರು,ವಕೀಲರು ಮತ್ತು ಸರ್ಕಾರಿ ನೌಕರರು ಮತ್ತು ಪರಿಸರ ಪ್ರೇಮಿಗಳನ್ನು ಒಳಗೊಂಡಸಂಘಟನೆಗಳಿಗೆ ಬೀಜದ ಉಂಡೆಗಳನ್ನು ನೀಡಲಾಗುತ್ತದೆ.

‘ಗೌಡಹಳ್ಳಿ ಡ್ಯಾಂ, ಗುಂಬಳ್ಳಿ ಚೈನ್‌ ಗೇಟ್‌, ಯರಗಂಬಳ್ಳಿ ಕೆರೆ, ಮದ್ದೂರು ಗುಡ್ಡ, ಟಿ.ಹೊಸೂರು, ಶಿವಕಳ್ಳಿ, ಶಿವ ಪಾರ್ವತಿ ದೇವಾಲಯದ ಸುತ್ತಮುತ್ತ 500ಕ್ಕೂ ಹೆಚ್ಚು ಸಸಿಗಳುಈಗ ಹಸಿರು ತುಂಬಿಕೊಂಡಿವೆ. ಆದರೆ, ವನ್ಯಜೀವಿಗಳ ಹಾದಿಯಲ್ಲಿಯೂ ಸಸಿಗಳನ್ನು ಹಾಕಿ,ಪೋಷಿಸಿದರೆ, ಗ್ರಾಮಗಳ ಸನಿಹ ಪ್ರಾಣಿಗಳು ಬರುವುದನ್ನು ನಿಯಂತ್ರಿಸಬಹುದು. ಇವುಗಳಿಗೆಇಷ್ಟವಾಗುವ ನೇರಳೆ, ಕಾಡು ಹಲಸು, ಕಲ್ಲು ಬಾಳೆ ಬೀಜಗಳನ್ನು ಹರಡಿದರೆ ಸಾಕು.ಮಳೆಗಾಲದಲ್ಲಿ ಬೀಜದುಂಡೆ ತಯಾರಿಸಿ, ಪೊದೆ, ಕೆರೆ, ನೀರಿನ ಮೂಲಗಳ ಬಳಿ ತೂರಿಬಿಟ್ಟರೂ, ಬೀಜ ಮೊಳೆತು ಗಿಡವಾಗಿ ತಲೆ ಎತ್ತುತ್ತದೆ’ ಎನ್ನುತ್ತಾರೆ ಮದ್ದೂರು ರಾಮಪ್ಪ.

₹ 1 ಖರ್ಚು:'ರಾಜ್ಯದಲ್ಲಿ 6 ವರ್ಷಗಳಿಂದ ಶಾಲಾ ಮಕ್ಕಳು ಹಲವುಸಂಸ್ಥೆಗಳ ಸಹಯೋಗದಲ್ಲಿ ಬೀಜದ ಉಂಡೆ ತಯಾರಿಸುವ ತರಬೇತಿ ಪಡೆದಿದ್ದಾರೆ. ಖರ್ಚು ₹ 1 ತಗುಲುತ್ತದೆ. ಸಸಿ ಹಾಕುವ, ಪೋಷಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಬೇಕು.ಹಸಿರು ಸೇವೆಯೊಂದಿಗೆ ಖುಷಿ ಕಾಣುತ್ತ ಪರಿಸರ ಪ್ರೇಮ ಮೆರೆಸುವ ಚಟುವಟಿಕೆಗಳನ್ನು ಕಾಲೇಜು-ಪದವಿ ವಿದ್ಯಾರ್ಥಿಗಳು ತೊಡಗಬೇಕು. ಗಿಡನೆಡುವ ಕಾಯಕಪರಿಸರ ದಿನ, ಭೂದಿನಕ್ಕೆ ಮಾತ್ರ ಮಿತಿಗೊಳ್ಳದೆ ವರ್ಷ ಪೂರ್ತಿ ನಡೆಸುವಂತೆ ಸ್ಕೌಟ್ಸ್ ಮತ್ತುಗೈಡ್ಸ್ ಜಿಲ್ಲಾ ಘಟಕ ಸೂಚಿಸಿದೆ' ಎಂದು ಜಿಲ್ಲಾ ಯುವ ಸಮಿತಿ ಅಧ್ಯಕ್ಷ ಪ್ರದೀಪ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಮರಣೆಗೆ ಸಾವಿರ ಗಿಡಗಳಹಾರ
ನಿವೃತ್ತ ಯೋಧರಾಗಿದ್ದ ಫಿರಂಗಿ ಹವಾಲ್ದಾರ್‌ ನವೀನ್ ಅವರು ಬೋಳು ಗುಡ್ಡಗಳಿಗೆ ಹಸಿರೀಕರಣ ಮಾಡುವಉಮೇದಿನಲ್ಲಿ ಇದ್ದರು. ಸ್ಥಳವನ್ನು ಗುರುತು ಮಾಡಿದ್ದರು. ಆದರೆ, ಮೈಸೂರಿನಲ್ಲಿ ನಡೆದಅಪಘಾತದಲ್ಲಿ ಅವರು ಮೃತಪಟ್ಟರು. ಹಾಗಾಗಿ, ಅವರ ಪತ್ನಿ ಮತ್ತು ಮಾವ ಅವರ ಕನಸುಗಳಿಗೆಹಸಿರು ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ.

‘ಮದ್ದೂರು ಗುಡ್ಡದ ಹಾದಿಯಲ್ಲಿ 200ಕ್ಕೂಹೆಚ್ಚು ವೈವಿಧ್ಯಮಯ ಗಿಡವನ್ನು ಹಾಕಿದ್ದಾರೆ. ಬೀಜದ ಉಂಡೆಗಳನ್ನು ವನ್ಯಜೀವಿಗಳು ಅಡ್ಡಾಡುವ ಪ್ರದೇಶಗಳಿಗೆ ಸೇರಿಸುತ್ತಾರೆ. ಆ ಮೂಲಕ ಸಾವಿರ ಸಸ್ಯಗಳನ್ನು ಬೆಳೆಸುವಮೂಲಕ ಅಳಿಯನ ಕನಸನ್ನು ನನಸು ಮಾಡಲು ಮುಂದಡಿ ಇಟ್ಟಿದ್ದಾರೆ’ ಎಂದು ಆಲ್ಕೆರೆ ಅಗ್ರಹಾರರಾಮಣ್ಣ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT