ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಂಚಾರ: ಎಚ್ಚರಿಕೆಯ ಸೂಚನೆ

Last Updated 21 ಜುಲೈ 2020, 17:02 IST
ಅಕ್ಷರ ಗಾತ್ರ

ಮೈಸೂರು: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ 200 ಎಂ.ವಿ.ಎ, 220/66/11 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ, ನೂತನವಾಗಿ ನಿರ್ಮಾಣಗೊಂಡಿರುವ 220 ಕೆ.ವಿ. ಮತ್ತು 66 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಜುಲೈ 23ರ ಗುರುವಾರ ಅಥವಾ ನಂತರದ ಯಾವುದೇ ದಿನಗಳಲ್ಲಿ ವಿದ್ಯುತ್ ಹರಿಸಲಾಗುವುದು.

220 ಕೆ.ವಿ. ಬಹುಮುಖ ವಿದ್ಯುತ್ ಮಾರ್ಗವು ಕಡಕೊಳ-ಚಾಮರಾಜನಗರ ದ್ವಿಮುಖ ವಿದ್ಯುತ್ ಮಾರ್ಗವನ್ನು ಲೀಲೋ ಮಾಡಿ, ಬೇಗೂರು ವಿದ್ಯುತ್ ಸ್ವೀಕರಣಾ ಕೇಂದ್ರದವರೆಗೆ 24.930 ಕಿ.ಮೀ.ಗಳಷ್ಟು ನಿರ್ಮಾಣಗೊಂಡಿರುತ್ತದೆ. ಈ ವಿದ್ಯುತ್ ಮಾರ್ಗವು ಚುಂಚನಹಳ್ಳಿ, ದೊಡ್ಡಕವಲಂದೆ, ಗಟ್ಟವಾಡಿ, ಗಟ್ಟವಾಡಿಪುರ, ಅರಳಿಕಟ್ಟೆ, ನಿಟ್ರೆ, ತೊರವಳ್ಳಿ, ಕಮರಹಳ್ಳಿ, ಅಮೀರಹೊಸಹಳ್ಳಿ ಪ್ರದೇಶಗಳ ಮೂಲಕ ಹಾದು ಹೋಗಿದೆ.

66 ಕೆ.ವಿ. ಏಕಮುಖ ವಿದ್ಯುತ್ ಮಾರ್ಗವು ಉದ್ದೇಶಿತ 220 ಕೆ.ವಿ. ಬೇಗೂರು ವಿದ್ಯುತ್ ಸ್ವೀಕರಣಾ ಕೇಂದ್ರದಿಂದ 66 ಕೆ.ವಿ ಸಂತೆ ಸರಗೂರು ಉಪಕೇಂದ್ರದವರೆಗೆ 38.326 ಕಿ.ಮೀ.ಗಳಷ್ಟು ನಿರ್ಮಾಣಗೊಂಡಿದೆ. ಇದು ಪರ್ವತನಪುರ, ರಾಘವಪುರ, ತಗಲೂರು, ಕೋಟೆಕೆರೆ, ಯದವನಹಳ್ಳಿ, ಕಸವನಹಳ್ಳಿ, ಮಕನಪುರ, ಹಳ್ಳರೆ, ಕಳದೇವನಹಳ್ಳಿ, ಹುರ, ಹಾಡ್ಯ, ಆರಿಯೂರು, ಕಂದಗಲ, ಚಾಮಲಪುರ, ಪುರದಕಟ್ಟೆ, ಲಕ್ಕೂರು, ಕೊತ್ತಗಾಲ, ಸರಗೂರು ಮೂಲಕ ಹಾದು ಹೋಗಿದೆ.

ಈ ಮಾರ್ಗದ ವಿದ್ಯುತ್ ಗೋಪುರಗಳ ಮೇಲೆ ವಿದ್ಯುತ್ ವಾಹಕ ಚಾಲನೆಗೊಳ್ಳುವುದರಿಂದ, ಗೋಪುರಗಳ ಬಳಿ ಯಾವೊಂದು ಚಟುವಟಿಕೆ ನಡೆಸಬಾರದು. ಇದು ತುಂಬಾ ಅಪಾಯಕಾರಿ ಹಾಗೂ ಪ್ರಾಣ ಹಾನಿಗೆ ಕಾರಣವಾಗಲಿದೆ. ಈ ಸೂಚನೆ ಉಲ್ಲಂಘನೆಯಿಂದಾಗುವ ಅನಾಹುತಗಳಿಗೆ ಕೆಪಿಟಿಸಿಎಲ್‌ ಜವಾಬ್ದಾರರಲ್ಲ ಎಂದು ಚಾಮರಾಜನಗರದ ಕೆಪಿಟಿಸಿಎಲ್‌ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT