ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ವಿರುದ್ಧ ಸಮರಕ್ಕೆ ಪಟ್ಟಣದಲ್ಲೂ ಸಿದ್ಧತೆ

ಯಳಂದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ಜ್ವರದ ವಾರ್ಡ್‌ ಸ್ಥಾಪನೆ
Last Updated 5 ಏಪ್ರಿಲ್ 2020, 15:17 IST
ಅಕ್ಷರ ಗಾತ್ರ

ಯಳಂದೂರು: ಕೊರೊನಾ ವೈರಸ್‌ ಸೋಂಕು ಪೀಡಿತರ ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕಆಸ್ಪತ್ರೆಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.ತಾಲ್ಲೂಕಿನ ಸರ್ಕಾರಿಆಸ್ಪತ್ರೆಯಲ್ಲಿ 20 ಹಾಸಿಗೆಗಳ ಸುಸಜ್ಜಿತ ವಾರ್ಡ್‌ ಅನ್ನು ಅಣಿಗೊಳಿಸಲಾಗಿದೆ. ಸುಸಜ್ಜಿತಕೊಠಡಿಯಲ್ಲಿ ಚಿಕಿತ್ಸಕರ ಸುರಕ್ಷತಾ ಉಡುಪು ಮತ್ತು ರೋಗಿಗಳಿಗೆ ಅಗತ್ಯ ಶುಶ್ರೂಷೆಒದಗಿಸುವ ಪರಿಕರಗಳನ್ನು ಸಜ್ಜುಗೊಳಿಸಲಾಗಿದೆ.

ಆಸ್ಪತ್ರೆಯ ಸಿಬ್ಬಂದಿಗೆ ಮಾಸ್ಕ್‌ ವಿತರಿಸಲಾಗಿದ್ದು, ಕೈ ತೊಳೆಯಲು ಡೆಟಾಲ್‌ (ಹ್ಯಾಂಡ್‌ವಾಶ್‌), ನೀರು ಮತ್ತುಸ್ಯಾನಿಟೈಸರ್‌ ಇಡಲಾಗಿದೆ. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳು ಸಾಮಾಜಿಕಅಂತರ ಕಾಪಾಡಲು ಬಾಕ್ಸ್‌ ರಚಿಸಲಾಗಿದೆ.

ಆಸ್ಪತ್ರೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ಜ್ವರಪತ್ತೆ ಹಚ್ಚಲಾಗುತ್ತಿದೆ. ಅವರ ಪ್ರಯಾಣದ ಇತಿಹಾಸ ಕುರಿತು ಮಾಹಿತಿ ಕಲೆ
ಹಾಕಲಾಗುತ್ತದೆ.ಸೋಂಕಿತರೊಂದಿಗೆ ಸಂಪರ್ಕ ಪಡೆದವರಾಗಿದ್ದರೆ ಇಲ್ಲವೇ ಕೊರೊನಾ ಸೋಂಕಿನ ಲಕ್ಷಣ ಗೋಚರಿಸಿದರೆ ಅಂತಹವರನ್ನು ವಿಶೇಷ ವಾರ್ಡ್‌ಗೆ ದಾಖಲಿಸಿಕೊಂಡು ಗಂಟಲುದ್ರವ ಪರೀಕ್ಷೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಸದ್ಯ ತಾಲ್ಲೂಕಿನಲ್ಲಿ ಇಂತಹ ಪ್ರಕರಣಗಳು ವರದಿಯಾಗಿಲ್ಲ.

ಸೋಂಕು ಶಂಕಿತರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಸಿದ್ಧಪಡಿಸಲಾಗಿದೆ. ಸದ್ಯ ಇಲ್ಲಿ 20 ಹಾಸಿಗೆಗಳಿದ್ದು, ಅವಶ್ಯವಿದ್ದರೆ ಇನ್ನೂ ಹೆಚ್ಚಿನ ಹಾಸಿಗೆಗಳನ್ನು ಹಾಕಲು ಅವಕಾಶ ಇದೆ. ಸದ್ಯಕ್ಕೆ ಶಂಕಿತ ಪ್ರಕರಣಗಳನ್ನು ನೇರವಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಜ್ವರ ತಪಾಸಣೆ ಕೇಂದ್ರ: ‘ಸಾರ್ವಜನಿಕ ಆಸ್ಪತ್ರೆಯಲ್ಲಿ ಜ್ವರ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ಎನ್‌ 95ಮಾಸ್ಕ್‌–100, ಪಿಪಿಐ ಕಿಟ್‌–20, 3 ಪದರ ಮಾಸ್ಕ್‌–1,000, ಸ್ಯಾನಿಟೈಸರ್‌–50,ಥರ್ಮಲ್‌ ಸ್ಕ್ಯಾನರ್‌–1, ಗ್ಲೌಸ್‌ಗಳು ಲಭ್ಯವಿವೆ. 50 ತಜ್ಞ ವೈದ್ಯರು, 20ನರ್ಸ್‌ಗಳು ಮತ್ತು 30 ಸಿಬ್ಬಂದಿ ರೋಗಿಗಳ ಸೇವೆಗೆ ಸದಾ ಸಿದ್ಧವಿದೆ. ನಾಲ್ಕು ಪ್ರಾಥಮಿಕಆರೋಗ್ಯ ಕೇಂದ್ರಗಳು ಹೊರ ಭಾಗದಿಂದ ಬರುವವರ ಮೇಲೆ ನಿಗಾ ಇಟ್ಟು ವರದಿ ನೀಡುತ್ತಿದೆ’ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಚ್. ಶ್ರೀಧರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದಕ್ಕೂ ಕೊರತೆ ಇಲ್ಲ’

ಸಿಬ್ಬಂದಿಗೆ ಅವಶ್ಯ ಪಿಪಿಐ ಕಿಟ್‌ ನೀಡಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಗಳ ಪೂರ್ವಚಿಕಿತ್ಸಾ ಕ್ರಮ ಪರಿಶೀಲಿಸಲು ವೈದ್ಯರು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಸದ್ಯ ಯಾವುದಕ್ಕೂ ಕೊರತೆ ಇಲ್ಲ ಎನ್ನುತ್ತಾರೆ ವೈದ್ಯರು.

‘ಜ್ವರ ಪೀಡಿತರು ಕಂಡುಬಂದರೆ ಮಾಹಿತಿ ಸಂಗ್ರಹಿಸಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುವುದು. ಕೊರೊನಾ ಶೋಂಕಿತರ ಸಂಪರ್ಕಕ್ಕೆ ಬಂದವರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗುವುದು. ವೈಯಕ್ತಿಕ ಸ್ವಚ್ಛತೆ ಮತ್ತು ಸಾಮಾಜಿಕ ಅಂತರಕಾಪಾಡಲು ಕಾಳಜಿ ವಹಿಸಲಾಗುತ್ತಿದೆ. ಸದ್ಯ ತಾಲ್ಲೂಕಿನಲ್ಲಿ ಜ್ವರ ಪೀಡಿತರುಕಂಡುಬಂದಿಲ್ಲ’ ಎಂದು ಡಾ.ಎಚ್. ಶ್ರೀಧರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT