ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಸಂಚರಿಸದ ಖಾಸಗಿ ಬಸ್‌ಗಳು: ಸಂಕಷ್ಟದಲ್ಲಿ ಸಿಬ್ಬಂದಿ

ಬೆರಳೆಣಿಕೆ ಬಸ್‌ಗಳ ಸಂಚಾರ, ಪ್ರಯಾಣಕ್ಕೆ ಜನರ ಹಿಂದೇಟು, ಆಟೊ, ಟ್ಯಾಕ್ಸಿಗೆ ಮೊರೆ
Last Updated 22 ಜುಲೈ 2020, 19:30 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಿಂದ ಚಾಮರಾಜನಗರ, ಮೈಸೂರು, ಬೆಂಗಳೂರು ಮತ್ತಿತರ ಕಡೆ ಸಂಚರಿಸುತ್ತಿದ್ದಖಾಸಗಿ ಬಸ್‌ಗಳು ಕೋವಿಡ್‌–19 ಕಾರಣದಿಂದಸಂಚಾರವನ್ನು ಮೊಟಕುಗೊಳಿಸಿವೆ.

ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವುದು ಹಾಗೂನಿರ್ವಹಣೆ ಮಾಡಲಾಗದೆ ಬಹುತೇಕ ಮಾಲೀಕರು ಬಸ್‌ಗಳ ಓಡಾಟ ನಿಲ್ಲಿಸಿದ್ದಾರೆ. ಇದನ್ನೇ ನಂಬಿಕೊಂಡಿದ್ದ ನೂರಾರು ಬಸ್‌ ಕಾರ್ಮಿಕರು ಅತಂತ್ರರಾಗಿದ್ದಾರೆ.

ಪಟ್ಟಣದ ಬಸ್‌ ನಿಲ್ದಾಣದಿಂದ ವಿವಿಧ ಗ್ರಾಮ ಮತ್ತು ಧಾರ್ಮಿಕ ಕ್ಷೇತ್ರಗಳಿಗೆಮುಂಜಾನೆಯಿಂದ ರಾತ್ರಿ ತನಕ ಸಾವಿರಾರು ಜನರು ಖಾಸಗಿ ಬಸ್‌ಗಳಲ್ಲಿ ಭೇಟಿ ನೀಡುತ್ತಿದ್ದರು. ಕೋವಿಡ್‌–19 ಹಳ್ಳಿ, ನಗರ, ಪಟ್ಟಣಗಳನ್ನು ವ್ಯಾಪಿಸುತ್ತಿದ್ದಂತೆವಿವಿಧೆಡೆಗೆ ತೆರಳುತ್ತಿದ್ದ ಪ್ರಯಾಣಿಕರ ಓಡಾಟಕ್ಕೆ ಬ್ರೇಕ್‌ ಬಿದ್ದಿದೆ. ಬಸ್‌ಗಳಲ್ಲಿ ಪ್ರಯಾಣಿಸಲು ಜನರುಬರುತ್ತಿಲ್ಲ.

ಸಂಕಷ್ಟ:ದಿನವೊಂದಕ್ಕೆ ಹತ್ತಾರು ಖಾಸಗಿ ಬಸ್‌ಗಳು ಮೈಸೂರಿಗೆ 50ಕ್ಕೂ ಹೆಚ್ಚು ಹಾಗೂಜಿಲ್ಲಾ ಕೇಂದ್ರಕ್ಕೆ 100 ಟ್ರಿಪ್‌ ಸಂಚಾರ ಮಾಡುತ್ತಿದ್ದವು. ನೂರಾರು ಜನರುಬಸ್‌ ನಂಬಿ ಬದುಕು ಕಟ್ಟಿಕೊಂಡಿದ್ದರು. ಚಾಲಕ, ಕ್ಲೀನರ್‌, ಏಜೆಂಟ್‌, ಪಂಕ್ಚರ್‌ಹಾಕುವವರ ಕುಟುಂಬಗಳ ಬದುಕು ಖಾಸಗಿ ಬಸ್‌ ಸಂಚಾರವನ್ನೇ ಅವಲಂಬಿಸಿತ್ತು. ಮಾರ್ಚ್‌ನಿಂದಇಲ್ಲಿಯ ತನಕ ಈ ಕುಟುಂಬಗಳು ಆದಾಯ ಇಲ್ಲದೆ ಸಂಕಷ್ಟಕ್ಕೆ ಸಿಲುಕಿವೆ’ ಎಂದು ಬಸ್ಸೊಂದರ ನಿರ್ವಾಹಕ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಳಂದೂರು ಪಟ್ಟಣದಿಂದ ಮೈಸೂರಿಗೆ 3 ಸರ್ಕಾರಿ ಬಸ್‌ಗಳು ಹಲವು ಟ್ರಿಪ್‌ಗಳಲ್ಲಿಸಂಚರಿಸುತ್ತವೆ. ಪ್ರತಿ ಬಸ್‌ನಲ್ಲಿ 30 ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಇದೆ.ಒಂದೆರಡು ಖಾಸಗಿ ಬಸ್‌ಗಳು ಜನ ದಟ್ಟಣೆ ಇದ್ದರೆ ಹೊರಡುತ್ತವೆ. ಇಲ್ಲದಿದ್ದರೆ,ಸಂಚಾರವನ್ನು ಸ್ಥಗಿತಗೊಳಿಸುತ್ತಾರೆ. ಬಹಳಷ್ಟು ಜನರು ಬಸ್‌ಗಳ ಕೊರತೆಯಿಂದ ದ್ವಿಚಕ್ರವಾಹನ ಮತ್ತು ಕಾರುಗಳಲ್ಲಿ ಸಂಚರಿಸುತ್ತಾರೆ. ಕೊರೊನಾ ಸೋಂಕು ನಿವಾರಣೆ ಆಗುವ ತನಕಇದು ಅನಿವಾರ್ಯ’ ಎಂದು ಬಸ್‌ಗಳ ಪಾಲೀಕರು ಹೇಳುತ್ತಾರೆ.

ಪಾಲನೆಯಾಗದ ನಿಯಮ

ಖಾಸಗಿ ಬಸ್‌ಗಳಲ್ಲಿ ಕೋವಿಡ್‌–19 ತಡೆಯುವ ಮುಂಜಾಗ್ರತಾ ನಿಯಮಗಳು ಸರಿಯಾಗಿ ಪಾಲನೆಯಾಗುವುದಿಲ್ಲ ಎನ್ನುವುದು ಪ್ರಯಾಣಿಕರ ಆರೋಪ.

‘ಪಟ್ಟಣದಿಂದ ಮೈಸೂರಿಗೆ ದಿನಕ್ಕೆ ಮೂರು ಖಾಸಗಿ ಬಸ್‌ಗಳು ಮಾತ್ರ ಸಂಚರಿಸುತ್ತಿವೆ.ನಿರ್ವಾಹಕರು ಹೆಚ್ಚಿನ ಜನರನ್ನು ಸೇರಿಸುತ್ತಾರೆ. ಪ್ರಯಾಣಿಕರಿಗೆ ಮುಖಗವಸು,ಸ್ಯಾನಿಟೈಸರ್‌ ನೀಡುವುದಿಲ್ಲ. ಜನ ಸಂಚಾರದ ವಿವರಗಳನ್ನು ದಾಖಲಿಸುವುದಿಲ್ಲ.ಬಸ್‌ಗಳಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ಇದರಿಂದ ಖಾಸಗಿ ಬಸ್‌ಗಳಲ್ಲಿ ಸಂಚರಿಸಲುಜನರು ಹಿಂದೇಟು ಹಾಕುತ್ತಾರೆ’ ಎಂದು ಪಟ್ಟಣದ ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಹುತೇಕ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸದೆ ಆಟೊ, ಕ್ಯಾಬ್‌ಗಳಲ್ಲಿಸಂಚರಿಸುತ್ತಾರೆ. ಗ್ರಾಮೀಣ ಭಾಗಗಳಲ್ಲೂ ಜನರು ಲಭ್ಯ ಇರುವ ಸಣ್ಣ ವಾಹನಗಳನ್ನೇಇತ್ತೀಚಿಗೆ ಅವಲಂಬಿಸಿದ್ದಾರೆ. ಇದರಿಂದ ಬಸ್‌ಗಳನ್ನು ಅವಲಂಬಿಸುವವರ ಸಂಖ್ಯೆಕುಸಿದಿದೆ.

ಸರ್ಕಾರಿ ಬಸ್‌ ಏರುವ ಮೊದಲು ಥರ್ಮಲ್‌ ಸ್ಕ್ರೀನಿಂಗ್‌ ಮಾಡುತ್ತಾರೆ. ಕೈಗಳಿಗೆ ಸ್ಯಾನಿಟೈಸರ್‌ ಸಿಂಪಡಿಸುತ್ತಾರೆ. ಮೂರು ಅಡಿ ಅಂತರದಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.ಆದರೆ, ಖಾಸಗಿ ಬಸ್‌ಗಳಲ್ಲಿ ಯಾರನ್ನೂ ತಪಾಸಣೆ ಮಾಡುವುದಿಲ್ಲ. ಜನರು ಒಟ್ಟಾಗಿಯೇಪ್ರಯಾಣಿಸುತ್ತಾರೆ. ಇದನ್ನು ತಪ್ಪಿಸಬೇಕು. ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟಲು ಖಾಸಗಿಬಸ್‌ಗಳ ನಿರ್ವಾಹಕರು ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂಬುದು ಪ್ರಯಾಣಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT