ಕೊಳ್ಳೇಗಾಲ: ಬಲಗೈ ಸಮುದಾಯದ ಸಚಿವರನ್ನು ಸೋಲಿಸುತ್ತೇವೆ ಹಾಗೂ ಒಳ ಮೀಸಲಾತಿ ಜಾರಿ ಮಾಡದೆ ಹೋದರೆ ರಕ್ತ ಕ್ರಾಂತಿ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಮಾದಿಗ ಸಮುದಾಯದ ಭಾಸ್ಕರ್ ಪ್ರಸಾದ್ ಹಾಗೂ ವಕೀಲ ಅರುಣ್ ಕುಮಾರ್ ಅವರ ನಡೆಯನ್ನು ಖಂಡಿಸಿ, ಬಲಗೈ ಸಮುದಾಯದ ಮುಖಂಡರು ನಗರದಲ್ಲಿ ಶುಕ್ರವಾರ ದಿಢೀರ್ ಪ್ರತಿಭಟನೆ ಮಾಡಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಇಬ್ಬರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮುಖಂಡ ರಮೇಶ್ ಮಾತನಾಡಿ, ಬಲಗೈ ಸಮುದಾಯದ ಸಚಿವರನ್ನು ಸೋಲಿಸುವ ಧಮ್ಕಿ ಹಾಕಿದ ಭಾಸ್ಕರ್ ಪ್ರಸಾದ್ ಹಾಗೂ ವಕೀಲ ಅರುಣ್ ಕುಮಾರ್ ಅವರನ್ನು ಕೂಡಲೇ ಗಡೀಪಾರು ಮಾಡಬೇಕು. ಸುಮಾರು ವರ್ಷಗಳಿಂದಲೂ ಬಲಗೈ ಮತ್ತು ಮಾದಿಗ ಸಮುದಾಯದವರು ಅಣ್ಣ ತಮ್ಮಂದಿರಂತೆ ಜೀವನ ಮಾಡಿಕೊಂಡು ಬಂದಿದ್ದಾರೆ. ಆದರೆ ಇವರಿಬ್ಬರೂ ಮಧ್ಯ ಪ್ರವೇಶಿಸಿ ಎರಡು ಜಾತಿಗಳ ನಡುವೆ ಮನಸ್ತಾಪ ಉಂಟು ಮಾಡಿ ಹೊಡೆದಾಡುವ ಮಟ್ಟಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ, ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಒಳ ಮೀಸಲಾತಿಯಲ್ಲಿ ಪ್ರವರ್ಗ ಎ,ಬಿ,ಸಿ ಮಸೂದೆ ಜಾರಿ ಮಾಡದೆ ಹೋದರೆ ರಕ್ತ ಕ್ರಾಂತಿಯಾಗುತ್ತದೆ. ಬಲಗೈ ಸಮುದಾಯದ ಸಚಿವ ಪರಮೇಶ್ವರ್ , ಮಹದೇವಪ್ಪ ಪ್ರಿಯಾಂಕ್ ಖರ್ಗೆ ಇವರುಗಳು ಮಸೂದೆಗೆ ವಿರೋಧ ಮಾಡಿದರೆ ಇವರ ಕ್ಷೇತ್ರಗಳಲ್ಲಿ ಮೂವರನ್ನು ಸೋಲಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಹೆದರೋ ಜನ ನಾವಲ್ಲ, ಮಾದಿಗ ಸಮುದಾಯದ ಸಚಿವರಾದ ಮುನಿಯಪ್ಪ ತಿಮ್ಮಾಪುರ ಅವರನ್ನು ಅವರ ಕ್ಷೇತ್ರದ ಚುನಾವಣೆಯಲ್ಲಿ ಸೋಲಿಸುವ ಶಕ್ತಿ ನಮಗೂ ಇದೆ. ದಿವಂಗತ ಶ್ರೀನಿವಾಸ್ ಪ್ರಸಾದ್, ಧ್ರುವನಾರಾಯಣ್ ಅಂತಹ ಸಿಂಹಗಳು ಜೀವಂತವಾಗಿ ಇದ್ದರೆ ಇಂತಹ ಹೇಳಿಕೆಗಳನ್ನು ಯಾರು ಸಹ ನೀಡುತ್ತಿರಲಿಲ್ಲ. ಒಳ ಮೀಸಲಾತಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ 13 ಜನರ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ, ಆದರೆ ರಕ್ತ ಕ್ರಾಂತಿ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವ ಇವರಿಬ್ಬರ ಮೇಲೆ ಏಕೆ ಇನ್ನೂ ಪ್ರಕರಣ ದಾಖಲು ಮಾಡಿಲ್ಲ. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಕಮಲ್ ಮಾತನಾಡಿ, ಭಾಸ್ಕರ್ಪ್ರಸಾದ್ ಆರ್ಎಸ್ಎಸ್ ಸಂಘಟನೆಯಿಂದ ಬಂದವನು. ಈ ವ್ಯಕ್ತಿ ಪೇಮೆಂಟ್ ಪಡೆದು ಏನೆಲ್ಲ ಕೆಲಸಗಳನ್ನು ಮಾಡುತ್ತಿದ್ದಾನೆ ಎಂಬುದು ನಮಗೆ ತಿಳಿದಿದೆ. ಇದರ ಜೊತೆಗೆ ಅರುಣ್ ಕುಮಾರ್ ಎಂಬ ವಕೀಲ ಕಾನೂನು ಮೀರಿ ಮಾತನಾಡುತ್ತಿದ್ದಾನೆ. ಬಲಗೈ ಸಮುದಾಯದವರು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ– ಜಗ್ಗುವುದಿಲ್ಲ. ತಾಕತ್ತಿದ್ದರೆ ಬಹಿರಂಗವಾಗಿ ಬಾ ಎಂದು ಸವಾಲು ಹಾಕಿದರು.

ಮುಖಂಡ ಮಂಜುನಾಥ್ ಮಾತನಾಡಿದರು. ಪ್ರತಿಭಟನೆಯಲ್ಲಿ ರಾಘವೇಂದ್ರ, ಪ್ರಕಾಶ್, ಪ್ರಭುಸ್ವಾಮಿ, ಉತ್ತಂಬಳ್ಳಿ ನಿಂಗಣ್ಣ, ಚಾಮರಾಜು, ರವಿ, ದಿಲೀಪ್, ಸಿದ್ದಯ್ಯನಪುರ ರಾಜೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.