ಭಾನುವಾರ, ಮೇ 9, 2021
26 °C

ಕೊಳ್ಳೇಗಾಲದಲ್ಲಿ ದಿಢೀರ್‌ ಮಳೆ, ತಂ‌ಪಾದ ಇಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ.

ಮಧ್ಯಾಹ್ನ ಇದ್ದಕ್ಕಿದಂತೆ ಮೋಡಕವಿದ ವಾತಾವರಣ ಸೃಷ್ಟಿಯಾಯಿತು. 2.20ರ ಸಮಯದಲ್ಲಿ ಜೋರು ಗಾಳಿ ಬೀಸಿ ಮಳೆ ಸುರಿಯಲು ಆರಂಭಿಸಿತು. 20 ನಿಮಿಷಕ್ಕೂ ಹೆಚ್ಚು ಕಾಲ ವರ್ಷಧಾರೆಯಾಗಿದ್ದು, ವಾತಾವರಣ ತಂಪಾಯಿತು. 

ಮಳೆಯಿಂದ ನಗರದ ಬ್ರದರನ್ ಚರ್ಚ್ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಜನರು ಕಿರಿಕಿರಿ ಅನುಭವಿಸಿದರು. 

ತಾಲ್ಲೂಕಿನ ಜಾಗೇರಿ, ಹ್ಯಾಂಡ್‍ಪೋಸ್ಟ್, ಸತ್ತೇಗಾಲ, ಧನಗೆರೆ, ನರೀಪುರ, ಸರಗೂರು, ಜಿನಕನಹಳ್ಳಿ, ಮತ್ತಿಪುರ, ಗುಂಡೇಗಾಲ, ಪಾಳ್ಯ, ಕರಿಯನಪುರ, ಉತ್ತಂಬಳ್ಳಿ, ಕೆಂಪನಪಾಳ್ಯ, ತಿಮ್ಮರಾಜೀಪುರ, ಜಕ್ಕಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲೂ ಮಳೆಯಾಗಿದೆ. 

ಚಾಮರಾಜನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು