ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಕುರ್ಚಿಗಾಗಿ ಪಿಡಿಒಗಳ ಕಚ್ಚಾಟ!

Last Updated 28 ನವೆಂಬರ್ 2022, 15:51 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿಅಧಿಕಾರಿ (ಪಿಡಿಒ) ಹುದ್ದೆಗಾಗಿ ಇಬ್ಬರು ಪಿಡಿಒಗಳು ಗುದ್ದಾಡುತ್ತಿದ್ದು, ಸದಸ್ಯರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ.

10 ದಿನಗಳ ಹಿಂದೆ, ಕೆಂಪನಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿದ್ದ ರಾಮೇಗೌಡ ಅವರನ್ನು ಸಂತೇಮರಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಹಾಗೂ ಇಲ್ಲಿದ್ದ ಮಮತಾ ಅವರನ್ನು ಕೆಂಪನಪುರಕ್ಕೆ ವರ್ಗಾವಣೆ ಮಾಡಲಾಗಿದೆ.

ಮಮತಾ ಇನ್ನೂ ಸಂತೇಮರಹಳ್ಳಿ ಪಿಡಿಒ ಹುದ್ದೆಯಿಂದ ಬಿಡುಗಡೆಗೊಂಡಿಲ್ಲ. ಅತ್ತ ಕೆಂಪನಪುರದಲ್ಲಿದ್ದ ರಾಮೇಗೌಡ ಅವರು ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ದಿನಚರಿ ಪುಸ್ತಕದಲ್ಲಿ ಸಹಿ ಹಾಕುತ್ತಿದ್ದಾರೆ.

ಎರಡು ವರ್ಷ ಎಂಟು ತಿಂಗಳಿಂದ ಸಂತೇಮರಹಳ್ಳಿಯ ಪಿಡಿಒ ಆಗಿರುವ ಮಮತಾ ಅವರಿಗೆ ಕೆಂಪನಪುರಕ್ಕೆ ಹೋಗಲು ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ರಾಮೇಗೌಡ ಅವರು ಕೂಡ ಸಂತೇಮರಹಳ್ಳಿಯನ್ನು ಬಿಡಲು ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ. ಕುರ್ಚಿಗಾಗಿಇಬ್ಬರ ನಡುವೆ ನಡೆಯುತ್ತಿರುವ ಕಚ್ಚಾಟ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡಿದೆ.

ವರ್ಗಾವಣೆ ಆದೇಶವಾದ ಮರುದಿನ ರಾಮೇಗೌಡ ಅವರು ಕಚೇರಿಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿದ್ದರು. ಆ ಬಳಿಕ ಹಾಜರಾತಿ ಪುಸ್ತಕ ಕಾಣುತ್ತಿಲ್ಲ. ಈಗ ಅವರು ಪ್ರತಿ ದಿನ ಬೇರೆ ದಿನಚರಿ ಪುಸ್ತಕದಲ್ಲಿ ಸಹಿಹಾಕುತ್ತಿದ್ದಾರೆ. ಮಮತಾ ಅವರು ಪ್ರತಿದಿನ ಕಚೇರಿಗೆ ಬಂದು ಕರ್ತವ್ಯನಿರ್ವಹಿಸುತ್ತಿದ್ದಾರೆ.

ಪಂಚಾಯಿತಿಯ ಸದಸ್ಯರಲ್ಲಿ ಕೆಲವರು, ಮಮತಾ ಅವರನ್ನು ಬೆಂಬಲಿಸದರೆ ಇನ್ನೂ ಕೆಲವರು ರಾಮೇಗೌಡ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಗೊತ್ತಾಗಿದೆ. ಇಬ್ಬರ ನಡುವಿನ ಗುದ್ದಾಟ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಗಮನಕ್ಕೂ ಬಂದಿದೆ ಎಂದು ತಿಳಿದು ಬಂದಿದೆ.

‘15 ದಿನ ಸಮಯ ಕೇಳಿದ್ದೇನೆ’

ಈ ಬೆಳವಣಿಗೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಮಮತಾ, ‘ವರ್ಗಾವಣೆ ಆದೇಶದ ಬಂದಿರುವುದು ನಿಜ. ಅಧಿಕಾರ ಹಸ್ತಾಂತರಿಸಲು 15 ದಿನಗಳ ಕಾಲಾವಕಾಶ ಕೊಡಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದರು.

ರಾಮೇಗೌಡ ಪ್ರತಿಕ್ರಿಯಿಸಿ, ‘ನನನ್ನು ಸಂತೇಮರಹಳ್ಳಿ ಗ್ರಾಮಪಂಚಾಯಿತಿಗೆ ವರ್ಗಾವಣೆ ಮಾಡಿರುವ ಆದೇಶ ಬಂದಿದೆ. ಹೀಗಾಗಿ, ಪ್ರತಿದಿನ ಕಚೇರಿಗೆ ಹಾಜರಾಗುತ್ತಿದ್ದೇನೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಪ್ರತಿಕ್ರಿಯಿಸಿ, ‘ನಮ್ಮ ಕಚೇರಿಯಿಂದ ವರ್ಗಾವಣೆಗೆ ಆದೇಶ ಆಗಿದೆ. ಮಮತಾ ಅವರು 15 ದಿನಗಳ ಸಮಯ ಕೇಳಿದ್ದಾರೆ. ಮೊದಲು ಹೋಗಿ ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳಿದ್ದೇನೆ. ಅವರು ಹೋಗದೇ ಇದ್ದರೆ ನಾವೇ ಹೋಗಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT