ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ

ಐದು ವರ್ಷ ಕಷ್ಟಪಡಿ, 50 ವರ್ಷ ಸುಖವಾಗಿರಿ–ಎಚ್‌.ಚನ್ನಪ್ಪ
Last Updated 24 ಜನವರಿ 2020, 16:04 IST
ಅಕ್ಷರ ಗಾತ್ರ

ಹನೂರು: 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಳೆದ ವರ್ಷ ಎಸ್ಸೆಸ್ಸೆಲ್ಸಿ ವಿಷಯದಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಕಸಾಪ ಸಾಹಿತ್ಯ ಪರೀಕ್ಷೆಯಲ್ಲಿ ಉಚಿತವಾಗಿ ಪಾಠ ಬೋಧನೆ ಮಾಡಿದ ಶಿಕ್ಷಕರಿಗೆ ಸನ್ಮಾನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಅವರು, ‘ವಿದ್ಯಾರ್ಥಿ ಜೀವನದಲ್ಲಿಗಳಿಸಿದ ವಿದ್ಯೆ, ಜ್ಞಾನಸಂಪತ್ತು ಸಮಾಜದ ಉಪಯೋಗಕ್ಕೆ ಬಾರದೆ ಇದ್ದರೆ ಅಂಥ ವಿದ್ಯೆಗೆ ಯಾವುದೇ ಮಹತ್ವವಿಲ್ಲ. ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು’ ಎಂದರು.

‘ಆಧುನಿಕ ಯುಗದ ಪೈಪೋಟಿ ಜೀವನದಲ್ಲಿ ಶಿಕ್ಷಣ ಅತಿ ಮುಖ್ಯವಾಗಿದ್ದು ವಿದ್ಯಾರ್ಥಿಗಳು 5 ವರ್ಷ ನಿದ್ದೆಗೆಟ್ಟು ಕಷ್ಟಪಟ್ಟು ಓದಿದರೆ ನಂತರ 50 ವರ್ಷ ಸುಖವಾಗಿರಬಹುದು. ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ದಾರ್ಶನಿಕರ ಪುಸ್ತಕಗಳನ್ನು ಓದಿ. ತಂದೆ ತಾಯಿಗಳಿಗೆ ಗೌರವವನ್ನು ಹೆಚ್ಚಿಸಬೇಕು. ಉತ್ತಮ ಅಂಕಗಳನ್ನು ಗಳಿಸಿದರಷ್ಟೇ ಸಾಲದು ಸಮಾಜಮುಖಿಯಾಗಿ ರೂಪುಗೊಳ್ಳಬೇಕು. ಭಾಷೆಯ ಪ್ರೇಮ ಅಂತರಾಳದ ಅಧ್ಯಯನದ ಮೂಲಕ ಇರಬೇಕು. ಇಂತಹ ಕನ್ನಡ ಕಟ್ಟುವ ಕೆಲಸ ಈ ಭಾಗದಲ್ಲಿ ಆಗಲಿ’ ಎಂದು ಕಸಾಪ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈಸಂದರ್ಭದಲ್ಲಿಸಮ್ಮೇಳನದಅಧ್ಯಕ್ಷಸಿ.ಚಾಮಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್‌.ವಿನಯ್,ಬಿಇಒ ಟಿ.ಆರ್. ಸ್ವಾಮಿ,ಬಿಆರ್‌ಸಿ ಕ್ಯಾತ,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷಸಿದ್ಧಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾನ್ ಬ್ರಿಟ್ಟೋ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT