ಸಂತೇಮರಹಳ್ಳಿ: ಹುಯ್ಯೋ, ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ. ಬಾರೋ ಬಾರೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ. ಹೀಗೆ ಹುಡುಗರು ಹಾಡಿಕೊಂಡು ಒಬ್ಬ ಹುಡುಗನಿಗೆ ಬೇವಿನ ಸೊಪ್ಪು ಕಟ್ಟಿ ಮನೆಗಳಲ್ಲಿ ತಲೆಯ ಮೇಲೆ ನೀರು ಹಾಕಿಸಿಕೊಂಡು ಮುಂದೆ ಸಾಗುತ್ತಿದ್ದರು. ಹೀಗೆ ಸಾಗುತ್ತಿದ್ದ ಹುಡುಗರಿಗೆ ಗ್ರಾಮದ ಯುವಕರು, ಹಿರಿಯ ನಾಗರಿಕರು ಜೊತೆಗೂಡಿದರು.

ಇದು ಹಳ್ಳಿಕೆರೆ ಹುಂಡಿಯಲ್ಲಿ ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಹುಡುಗರು ಭಿಕ್ಷಾಟನೆ ಮಾಡಿ ಗ್ರಾಮದ ಹೊರ ಭಾಗದಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪರಿಷೆ ಮಾಡಿದರು.

ಹುಡುಗನ ತಲೆಯ ಮೇಲೆ ಬಸವನ ಮೂರ್ತಿ ಕೂರಿಸಿ ಮೈಮೇಲೆ ಬೇವಿನ ಸೊಪ್ಪು ಹಾಕಿ ದೇವಸ್ಥಾನದಲ್ಲಿ ಅರಿಸಿನ ಕುಂಕುಮ ಬಳಿದು ಪೂಜೆ ಸಲ್ಲಿಸಿದರು. ನಂತರ ಹುಯ್ಯೋ ಹುಯ್ಯೋ ಮಳೆರಾಯ ಹಾಡನ್ನು ಹಾಡಿಕೊಂಡು ಸಂಭ್ರಮದಿಂದ ಕುಣಿದು ಪ್ರತಿ ಮನೆಗಳ ಮುಂಭಾಗಕ್ಕೆ ಹೋದರು.

ಬಸವನನ್ನು ಹೊತ್ತಿರುವ ಹುಡುಗನಿಗೆ ಪ್ರತಿ ಮನೆಗಳಲ್ಲಿ ತಲೆಯ ಮೇಲೆ ನೀರು ಸುರಿದರು. ಮನೆಯಲ್ಲಿದ್ದ ದವಸಧಾನ್ಯ ನೀಡಿದರು. ಹುಡುಗರ ಭಕ್ತಿ ನೋಡಿದ ಯುವಕರು ಹಾಗೂ ರೈತರು ಹಿಂದೆ ಹೆಜ್ಜೆ ಹಾಕಿದರು.

ಗ್ರಾಮದ ಹೊರ ಭಾಗದಲ್ಲಿರುವ ಬೊಮ್ಮಪ್ಪ ದೇವರ ಗುಡಿಗೆ ಆಗಮಿಸಿ ಮನೆಗಳಿಂದ ಪಡೆದ ದವಸ ಧಾನ್ಯವನ್ನು ಶೇಖರಿಸಿ ಒಲೆ ಮಾಡಿ ಪೂಜೆ ಸಲ್ಲಿಸಿ ಬೆಂಕಿ ಹಚ್ಚಿದರು. ಮುದ್ದೆ, ಅನ್ನ ಸಾಂಬರ್, ಹಲಸಿನ ಹುಳಿ ತಯಾರು ಮಾಡಿದರು. ನಂತರ ದೇವಸ್ಥಾನದಲ್ಲಿದ್ದ ಶಿವಲಿಂಗಕ್ಕೆ ತಯಾರು ಮಾಡಿದ್ದ ಅಡುಗೆ ನೈವೇದ್ಯ ಅರ್ಪಿಸಿದರು. ಹೂ, ಕಾಯಿ ಹಣ್ಣುಗಳನ್ನು ಕಳಸದೊಂದಿಗೆ ಶಿವಲಿಂಗಕ್ಕೆ ಮಹಾದೇವ ಮಳೆ ಬರುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರೆಲ್ಲ ದೇವಸ್ಥಾನದ ಮುಂಭಾಗ ನೆಲದಲ್ಲಿ ಕುಳಿತು ಸಾಮೂಹಿಕವಾಗಿ ಪ್ರಸಾದ ಸೇವಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-37-1200587477

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.