ಸಂತೇಮರಹಳ್ಳಿ (ಚಾಮರಾಜನಗರ ಜಿಲ್ಲೆ): ಮಂಗವೊಂದಕ್ಕೆ ಇಲ್ಲಿನ ದೇವು ಮೆನ್ಸ್ ವೇರ್– ಹೇರ್ ಕಟಿಂಗ್ ಸಲೂನ್ನಲ್ಲಿ ಬುಧವಾರ ಮಾಲೀಕ ದೇವರಾಜು ಕೇಶ ವಿನ್ಯಾಸ ಮಾಡುವ ವಿಶೇಷ ಸನ್ನಿವೇಶ ನಿರ್ಮಾಣವಾಗಿತ್ತು.

ಈ ಮಂಗ ಪ್ರತಿ ದಿನ ತನ್ನ ಗುಂಪಿನೊಂದಿಗೆ ಸಲೂನ್ ಮುಂಭಾಗ ಸಂಚರಿಸುತ್ತಿತ್ತು. ಬುಧವಾರ ಸಲೂನ್ ಒಳಗೆ ಬಂದು ಕನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡಿ ಚೇಷ್ಟೆ ಮಾಡುತಿತ್ತು. ಗದರಿಸಿದರೂ ಹೋಗಲಿಲ್ಲ.

ನಂತರ, ದೇವರಾಜು ಅವರು ಬಾಚಣಿಗೆಯಿಂದ ಅದರ ತಲೆಯನ್ನು ಬಾಚಲಾರಂಭಿಸಿದರು. ಆಗಲೂ ಸುಮ್ಮನೆ ಕುಳಿತಿತ್ತು. ಬಾಚಣಿಗೆ ಮತ್ತು ಕತ್ತರಿ ಬಳಸಿ ಅವರು ತಲೆ ಹಾಗೂ ದೇಹದ ಕೂದಲನ್ನು ಕತ್ತರಿಸಲಾರಂಭಿಸಿದರು. ಅದಕ್ಕೂ ತಗಾದೆ ತೆಗೆಯದೇ ಸುಮ್ಮನಿತ್ತು. ಹೀಗಾಗಿ ಅವರು ತಮ್ಮ ಕಾಯಕ ನಿಲ್ಲಿಸದೆ ಮಂಗಕ್ಕೆ ಕೇಶ ವಿನ್ಯಾಸ ಮಾಡಿದರು. ನಂತರ ಮಂಗವು ಅಲ್ಲಿದ್ದವರ ಕೈ ಕುಲುಕಿ ನಿರ್ಗಮಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-134554279

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.