ಸರಗೂರು: ಪಟ್ಟಣದಲ್ಲಿ ದೇವರ ದಾಸಿಮಯ್ಯನ ಭವನ ನಿರ್ಮಾಣಕ್ಕೆ ನಿವೇಶನ ನೀಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.

ಪಟ್ಟಣದಲ್ಲಿ ಚೌಡೇಶ್ವರಿ ಅಮ್ಮನವರ ಟ್ರಸ್ಟ್, ತೊಗಟವೀರ ಸಮಾಜ ಶನಿವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ‘ ದೇವರ ದಾಸಿಮಯ್ಯ ಭವನ ನಿವೇಶನಕ್ಕಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜತೆ ಚರ್ಚಿಸಿ, ನಿವೇಶನ ಹಂಚಿಕೆ ಮಾಡಲಾಗುವುದು. ಅನುದಾನ ನೀಡಲಾಗುವುದು ಎಂದರು.

ತೊಗಟವೀರ ಸಣ್ಣ ಸಮಾಜವಾದರೂ ಗುರುತಿಸುವ ಭಾಗವಾಗಿ ಸರ್ಕಾರ ಕೀರ್ತಿ ಗಣೇಶ್ ಅವರಿಗೆ ದೇವರಾಜ ಅರಸು ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ ಎಂದರು. ದೇವರ ದಾಸಿಮಯ್ಯ ಅವರ ಸಾಮಾಜಿಕ ಸಮಾನತೆ, ಕಾಯಕದ ಮಹತ್ವ ಮತ್ತು ವೈಚಾರಿಕ ನಿಲುವುಗಳನ್ನು ಸಮಾಜಕ್ಕೆ ಪರಿಚಯಿಸಬೇಕು ಎಂದು ಸಲಹೆ ನೀಡಿದರು. ಡಿ.ದೇವರಾಜ ಅರಸು ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ದಾಸಿಮಯ್ಯ ಭಾವಚಿತ್ರ ಅನಾವವರಣಗೊಳಿಸಿ ಮಾತನಾಡಿ, ನಿಗಮದಿಂದ ಸಮಾಜಕ್ಕೆ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಸರಗೂರು ತೊಗಟವೀರ ಸಮಾಜದ ಯಜಮಾನ ವಿ.ರವೀಂದ್ರ ಪ್ರಸಾದ್ ಮಾತನಾಡಿ, ಇಲ್ಲಿ ದೇವರ ದಾಸಿಮಯ್ಯ ಭವನ ನಿರ್ಮಾಣಕ್ಕೆ ನಿವೇಶನ ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಮನವಿ ಮಾಡಿದರು. ಸಮುದಾಯದ ಚೌಡೇಶ್ವರಿ ಸಮುದಾಯ ಭವನಕ್ಕೆ ₹25 ಲಕ್ಷ ಅನುದಾನ,ಅಧ್ಯಕ್ಷ ಕೀರ್ತಿ ಗಣೇಶ್ ಅವರಿಗೆ ನಿಗಮದಿಂದ ₹50 ಲಕ್ಷ ಅನುದಾನ ನೀಡಬೇಕು ಎಂದು ಮನವಿ ಪತ್ರ ನೀಡಿದರು.

ರಾಜ್ಯ ತೊಗಟವೀರ ಸಂಘ ಮತ್ತು ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಸೋಮಶೇಖರ್, ಚೌಡೇಶ್ವರಿ ಅಮ್ಮನವರ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ್ , ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳದ ಅಧ್ಯಕ್ಷ ಬಿ.ಜೆ.ಗಣೇಶ್ ಮಾತನಾಡಿದರು. ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್ ಶಾಸಕ ಅನಿಲ್ ಚಿಕ್ಕಮಾದು ಸನ್ಮಾನಿಸಿದರು.

ಸಮುದಾಯದ ಯಜಮಾನರಾದ ವಿ.ರವೀಂದ್ರ ಪ್ರಸಾದ್, ಎಸ್.ವಿ.ರವಿಕುಮಾರ್, ಜಿ.ರಘುರಾಮ, ಪ್ರಧಾನ ಕಾರ್ಯದರ್ಶಿ ಸಿ.ರಂಗಧಾಮ, ಯುವಕ ಸಂಘದ ಅಧ್ಯಕ್ಷ ಎಸ್.ಆರ್.ಪುರುಷೋತ್ತಮ್, ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಚಲುವಕೃಷ್ಣ, ಒಕ್ಕೂಟದ ಅಧ್ಯಕ್ಷ ದಿನೇಶ್, ಚ.ಬಾಲಸುಬ್ರಹ್ಮಣ್ಯ, ಶ್ರೀನಿವಾಸ್, ನಾಗರಾಜು, ನಾಗರಾಜು, ಎಸ್.ವಿ.ವೇಣುಗೋಪಾಲ್, ತಿಮ್ಮಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-38-763924281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.