ಶುಕ್ರವಾರ, ಡಿಸೆಂಬರ್ 4, 2020
24 °C

ಹೊಲದಲ್ಲಿದ್ದ ಗಾಂಜಾ ಗಿಡ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇಶ್ವರ ಬೆಟ್ಟ: ಸಮೀಪದ ಪಡಸಲನತ್ತ ಗ್ರಾಮದಲ್ಲಿ ಮೆಣಸಿನಗಿಡದ ಮಧ್ಯದಲ್ಲಿ ಬೆಳೆಸಿದ್ದ 15 ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಬೇಡಗಂಪಣ ಸಮುದಾ ಯದ ಮಾದೇಶ ಅಲಿಯಾಸ್ ಬೇಳೆ ಮಾದೇಶ ಬಂಧಿತ ಆರೋಪಿ. ಒಟ್ಟು 7.5 ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಮೀನಿನಲ್ಲಿ ಮೆಣಸಿಗಿಡದ ಮಧ್ಯೆ ಸುಮಾರು 15 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದು, ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ನೇತೃತ್ವದ ತಂಡ ದಾಳಿ ನಡೆಸಿ ಸುಮಾರು 7.5 ಕೆಗಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ನಾಗರಾಜು, ಇನ್‌ಸ್ಪೆಕ್ಟರ್ ರಮೇಶ್, ಪಿಎಸ್‌ಐ ವೀರಣ್ಣಾರಾಧ್ಯ, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ರಾಚಪ್ಪ, ಬಾಬು, ಪರಶಿವ, ಪ್ರಭು ಕಂದಾಯ ಇಲಾಖೆ ಮಹದೇವಸ್ವಾಮಿ, ಗೋಪಿನಾಥಂ ಅರಣ್ಯ ರಕ್ಷಕ ಮಲ್ಲಿಕಾರ್ಜುನ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.