ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನ ಪೂಜಿಸಿ ವಿಸರ್ಜಿಸಿದರೆ ಸಸ್ಯಲೋಕ ಸೃಷ್ಟಿ

ಯಳಂದೂರು: ಡಾ.ಭೀಮ್‌ ರಾವ್‌ ರಾಮ್‌ಜೀ ಪ್ರೌಢಶಾಲೆಯಲ್ಲಿ ಪರಿಸರಸ್ನೇಹಿ ಪ್ರಯತ್ನ
Last Updated 30 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಯಳಂದೂರು: ಗಣೇಶ ಚತುರ್ಥಿಗೆ ಎರಡು ದಿನವಷ್ಟೇ ಬಾಕಿ ಇದೆ. ಪ್ರಥಮ ಪೂಜಿತ ಗಜಮುಖನ ಗೌಜಿ–ಗದ್ದಲ ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿದೆ.

ಪರಿಸರಸ್ನೇಹಿ ಗಣಪನ ಬೇಡಿಕೆ ಹೆಚ್ಚುತ್ತಿರುವಹೊತ್ತಿನಲ್ಲೇ ಶಾಲಾ ಮಕ್ಕಳು ಮತ್ತು ಶಿಕ್ಷಕರು ವಿನಾಯಕನನ್ನು ತಯಾರಿಸಿ ಗ್ರಾಮೀಣಭಾಗದ ಜನರಿಗೆ ಉಚಿತವಾಗಿ ನೀಡುತ್ತಾರೆ. ಆ ಮೂಲಕ ಮಣ್ಣಿನ ಗಜಮುಖನ ಮಹತ್ವಸಾರುತ್ತಿದ್ದಾರೆ.

ತಾಲ್ಲೂಕಿನ ಹೊನ್ನೂರು ಗ್ರಾಮದ ಡಾ.ಭೀಮ್‌ ರಾವ್‌ ರಾಮ್‌ಜೀ ಪ್ರೌಢಶಾಲೆಯಲ್ಲಿ ಪ್ರತಿವರ್ಷ ಚೌತಿ ಮೂರ್ತಿ ನಿರ್ಮಿಸುವ ಕಾರ್ಯಾಗಾರ ನಡೆಯುತ್ತದೆ. ಈ ಬಾರಿ ಪೋಷಕರು ಮತ್ತುಗ್ರಾಮೀಣ ಜನರಿಗೆ ಪರಿಸರ ಕಾಳಜಿ ಬಿತ್ತುವ ನಿಟ್ಟಿನಲ್ಲಿ ಬೀಜದ ಗಣಪನನ್ನು ನೀಡುವ
ಕಾರ್ಯಕ್ರಮ ಹಮ್ಮಿಕೊಂಡಿದೆ.

ಬೀಜಗಳಿಂದ ಗಣಪನನ್ನು ತಯಾರಿಸಿ ಮೂರ್ತಿಯನ್ನು ವಿಸರ್ಜಿಸಿದ ನಂತರ ಬೀಜಗಳಿಂದ ಚಿಗುರು ಮೊಳಕೆಯೊಡೆದು ಸಸ್ಯಲೋಕವನ್ನು ನಿರ್ಮಿಸುವ ಕಲ್ಪನೆ ಈ ಕಾರ್ಯಕ್ರಮದ ಹಿಂದಿದೆ.

‘ಹಸಿಮಣ್ಣು, ಹೊಂಗೆ, ಬೇವು, ಹುಣಸೆ ಬೀಜಗಳನ್ನು ಮಕ್ಕಳೇ ಸಂಗ್ರಹಿಸುತ್ತಾರೆ. ಶಾಲಾವತಿಯಿಂದ ಗೋಧಿ, ರಾಗಿ ಹಿಟ್ಟು ಪೂರೈಸಲಾಗುತ್ತದೆ. ಬೋಧಕರ ಮಾರ್ಗದರ್ಶನದಲ್ಲಿ ಸಾವಯವವಸ್ತುಗಳನ್ನು ಬಳಸಿ ಗಜಮುಖನ ಆಕಾರ ಸೃಷ್ಟಿಸುತ್ತಾರೆ. ಲಂಬೋದರನ ಉದರಕ್ಕೆಬೀಜಗಳನ್ನು ತುಂಬಿಸಲಾಗುತ್ತದೆ. ಗಣೇಶನನ್ನು ಪೂಜಿಸಿದ ನಂತರ ವಿಸರ್ಜಿಸುವ ಸ್ಥಳದಲ್ಲಿಬೀಜ ಮೊಳಕೆ ಒಡೆದು ಸಸ್ಯಲೋಕ ವಿಕಸಿಸುತ್ತದೆ’ ಎಂದು ಮುಖ್ಯಶಿಕ್ಷಕಕೆ.ಎನ್‌.ಪ್ರಮೋದ್ ಚಂದ್ರನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯವಾಗಿ ಗಣೇಶನ ಮೂರ್ತಿಯನ್ನು ಮೂರು ದಿನ ಇಲ್ಲವೆ ವಾರ ಕಾಲ ಪೂಜಿಸಲಾಗುತ್ತದೆ. ನಂತರ ಕೆರೆಗಳಲ್ಲಿವಿಸರ್ಜಿಸಲಾಗುತ್ತದೆ. ಕೆಲವರು ಮನೆಯ ಮುಂಭಾಗ ಇಲ್ಲವೆ ಕೆರೆಕಟ್ಟೆಗಳ ಬಳಿ ಗಣೇಶನಮೂರ್ತಿ ಇಟ್ಟು ಬಂದರೆ ಮಳೆಗಾಲದಲ್ಲಿ ಮೂರ್ತಿ ಕರಗಿ, ಬೀಜ ಭೂಮಿ ಸೇರಿ ಸಸಿಯಾಗಿಅರಳಿಕೊಳ್ಳುತ್ತದೆ. ಇದರಿಂದ ಸಸ್ಯ ಸಂರಕ್ಷಣೆ ಮತ್ತು ಸುಂದರ ಪರಿಸರ ಕಟ್ಟುವ ದಿಸೆಯಲ್ಲಿ ಪೋಷಕರನ್ನು ತೊಡಗಿಸಿದಂತೆ ಆಗುತ್ತದೆ’ ಎಂದು ವಿದ್ಯಾರ್ಥಿಗಳಾದಕುಮಾರ್‌, ನಂದನ, ಯೋಗಶ್ರೀ ಮತ್ತು ಕಾವ್ಯ ಹೇಳಿದರು.

‘ಮಣ್ಣಿನ ಗಜಮುಖ ನೆಲಮೂಲ ಸಂಸ್ಕೃತಿಯಪ್ರತೀಕ. ಗ್ರಾಮೀಣ ಜನರು ಸೆಗಣಿ ಉಂಡೆ ಮಾಡಿ, ಗರಿಕೆ ಸಿಕ್ಕಿಸಿ ಪೂಜಿಸುವ ಪರಂಪರೆಯೇ ಇದೆ.ಹಾಗಾಗಿ, ರಾಸಾಯನಿಕ ಸಿಂಪಡಿಸಿದ ಗಣೇಶನ ಬಳಕೆ ಕೊನೆಗಾಣಿಸಿ ನಮ್ಮತನ ಮೆರೆಯಬೇಕು’ ಎಂಬುದು ಬೋಧಕರಾದ ಎ.ಎಂ.ಯೋಗೀಶ, ರಾಜಶೇಖರ್, ಪರಶಿವಮೂರ್ತಿ, ಉಮೇಶ್,ರಾಜಶೇಖರ್ ಮತ್ತು ಸರ್ವಮಂಗಳಾ ಅವರ ಮಾತು.

‘ಮಣ್ಣಿನಮೂರ್ತಿ ಬಣ್ಣದ್ದೇ ಇರಬೇಕು ಎಂದಾದಲ್ಲಿ ಹೂ, ಎಲೆ, ಅರಿಸಿನ,ಹಣ್ಣುಗಳ ರಸವನ್ನು ಲೇಪಿಸಬಹುದು. ಇವು ಮಣ್ಣಿನ ಆರೋಗ್ಯ ಹಾಳು ಮಾಡುವುದಿಲ್ಲ ಎನ್ನುತ್ತಾರೆ ರಾಜುನಾಯಕ ಮತ್ತು ಆರಾಧ್ಯಮಠ.

‘ಪಿಒಪಿ ಗಣೇಶನಿಗೆ ಲೋಹ ಮಿಶ್ರಿತ ಬಣ್ಣ ಸಿಂಪಡಣೆ ಮಾಡುತ್ತಾರೆ. ನೋಡಲುಆಕರ್ಷಕವಾಗಿದ್ದರೂ ವಿಸರ್ಜಿಸಿದಾಗ ಜಲಮಾಲಿನ್ಯ ಉಂಟಾಗುತ್ತದೆ. ಕ್ರೋಮಿಯಂ, ನಿಕ್ಕಲ್, ಸತು ನೀರಿನಲ್ಲಿ ಸೇರಿ ಕ್ಯಾನ್ಸರ್ ರೋಗ ಹರಡುತ್ತದೆ’ ಎಂದು ಶಿಕ್ಷಕರಾದ ಪುತ್ರಸ್ವಾಮಿ, ಕುಮಾರ್ ಎಚ್ಚರಿಸಿದರು.

ಏಕೆ ಬೇಕು ಮಣ್ಣಿನ ವಿಘ್ನ ನಿವಾರಕ?

‘ರಾಷ್ಟ್ರೀಯ ಸೀಸ ಪಾಷಾಣ ವಿರೋಧ ಸಂಸ್ಥೆಯ ಡಾ.ತುಪ್ಪೀಲ್‌ ವೆಂಕಟೇಶ್ ಪ್ರಕಾರ,ರಾಜ್ಯದಲ್ಲಿ 6.50 ಕೋಟಿ ಜನರಿದ್ದಾರೆ. ಇದರಲ್ಲಿ 4 ಕೋಟಿ ಜನ ಹಬ್ಬ ಆಚರಿಸುತ್ತಾರೆ.4 ಮಂದಿಗೆ 1 ಗಣೇಶ ವಿಗ್ರಹ ಎಂದರೂ ಸುಮಾರು 1.2 ಕೋಟಿ ವಿಗ್ರಹಗಳನ್ನುಪೂಜಿಸಲಾಗುತ್ತದೆ. ಇವುಗಳಲ್ಲಿ ಶೇ 50 ಗಾಢ ರಾಸಾಯನಿಕ ಬಣ್ಣ ಹೊಂದಿರುತ್ತವೆ. 2 ಕೆ.ಜಿತೂಕದ ಗಣಪನಲ್ಲಿ 200 ಗ್ರಾಂ ಬಣ್ಣ ಸೇರಿರುತ್ತದೆ. ಅಂದರೆ ಪ್ರತಿ ವಿಘ್ನೇಶನಲ್ಲಿ ಶೇ4ರಷ್ಟು ಸೀಸ ಬೆರೆತಿರುತ್ತದೆ. ಎಲ್ಲರೂ ಬಳಸುವ ಗಣಪ 2 ಕೆ.ಜಿಯಾಗಿದ್ದರೆ 1,000 ಟನ್‌ವಿಷ ನೀರು ಸೇರುತ್ತದೆ’ ಎಂದು ಕೆ.ಎನ್‌.ಪ್ರಮೋದ್ ಚಂದ್ರನ್ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT