ಮಹದೇಶ್ವರ ಬೆಟ್ಟ: ಧರ್ಮ ಮನುಷ್ಯನ ಜೀವನವನ್ನು ಉತ್ತಮಗೊಳಿಸುತ್ತದೆ, ಸ್ವಾಂತಂತ್ರ್ಯವನ್ನು ನೀಡುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಪ್ರಮುಖ ಉದ್ದೇಶ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹಾಗೂ ಕುಂದೂರು ಮಠದ ಮಠಾಧಿಪತಿ ಶರತ್ ಚಂದ್ರ ಸ್ವಾಮೀಜಿ ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರಗಳ ಸಹಯೋಗದಲ್ಲಿ ಮಲೆ ಮಹದೇಶ್ವರ ಸ್ವಾಮಿ ಕೃಪಾ ಎಜುಕೇಷನ್ ಸೋಸೈಟಿ, ಮಹದೇಶ್ವರ ಸಂಸ್ಕೃತ ಕಾಲೇಜು ವತಿಯಿಂದ ಸಾಲೂರು ಬೃಹನ್ಮಠದ ಎಸ್.ಜಿ.ಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಬದುಕು, ಬರಹ ಹಾಗೂ ವಿಚಾರಧಾರೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಎಂ.ಮಹದೇವ ಮಾತನಾಡಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಅಂಬೇಡ್ಕರ್ ಮತ್ತು ಸಂಸ್ಕೃತ ಭಾಷೆಯ ನಡುವಿನ ಬಾಂಧವ್ಯವನ್ನು ಬೆಸೆಯುವಂತಹ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ಅಂಬೇಡ್ಕರ್ ಮಾನವತವಾದದ ಅತ್ಯುನ್ನತ ಪ್ರತೀಕವಾಗಿ ನಿಂತಿದ್ದು ಅವರ ಚಿಂತನೆಗಳು ಗೌರವ, ಸಮಾನತೆ ಮತ್ತು ನ್ಯಾಯದ ಮೇಲೆ ಆಧಾರಿತವಾಗಿದೆ. ಸಮಾಜದ ಹಿಂದುಳಿದ ವರ್ಗಗಳಿಗೆ ಸಮಾನ ಹಕ್ಕು ನೀಡಲು ಜೀವನವನ್ನೇ ಸಮರ್ಪಿಸಿದ ಅಂಬೇಡ್ಕರ್ ಮನುಷ್ಯನಿಗಿಂತ ಧರ್ಮ-ಸಂಪ್ರದಾಯಗಳು ಮುಖ್ಯವಲ್ಲ ಎಂಬ ತತ್ವವನ್ನು ಸಾರಿದರು.

ಸಮಾಜದ ದುರ್ಬಲ ವರ್ಗಗಳಿಗೆ ಜ್ಞಾನವೇ ಆತ್ಮವಿಶ್ವಾಸ ನೀಡುವ ಪ್ರಮುಖ ಮಾರ್ಗ ಎಂದು ಸಾರಿದ ಅಂಬೇಡ್ಕರ್ ಸಮಸಮಾಜ ನಿರ್ಮಾಣ ನಿಟ್ಟಿನಲ್ಲಿ ಶ್ರಮಿಸಿದರು ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಗಿರೀಶ್ ಚಂದ್ರ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ತಲುಪಬೇಕು, ಶಿಕ್ಷಣವೇ ಸಾಧನೆಯ ಮೂಲವಾಗಿದ್ದು ಒತ್ತು ನೀಡಬೇಕು, ಸಮಾಜದಲ್ಲಿ ಮಠ ಮಾನ್ಯಗಳು ಜಾತೀಯತೆ ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಂಬೇಡ್ಕರ್ ರಚಿತ ಸಂವಿಧಾನ ಸಮ ಸಮಾಜ ನಿರ್ಮಾಣ, ಅಸ್ಪೃಶ್ಯತೆ ನಿವಾರಣೆ, ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ನೀಡಿವೆ ಎಂದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಸಾರಾಂಗ ಉಪನಿರ್ದೇಶಕ ಬಿ.ಗೋವಿಂದ ಮಾತನಾಡಿ ‘ಜಾತಿ ಮತ್ತು ಧರ್ಮ ಮುಕ್ತವಾಗಿ ಸಾಲೂರು ಬೃಹನ್ಮಠ ಸರ್ವ ಸಮಾಜ, ಧರ್ಮಗಳ ಪರವಾಗಿ ಕೆಲಸ ಮಾಡುತ್ತಿದೆ. ಶಿಕ್ಷಣವೇ ಮುಕ್ತಿಯ ಮಾರ್ಗವಾಗಿದ್ದು ದುರ್ಬಲ ವರ್ಗಗಳಿಗೆ ಶಿಕ್ಷಣ ಕೈಗೆಟುಕಬೇಕು, ಅಜ್ಞಾನ ಮತ್ತು ಅಂಧ ಶ್ರದ್ದೆ ನಿವಾರಣೆಗೆ ಶಿಕ್ಷಣವೇ ಮದ್ದು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಹಾಗೂ ಸಮಾನತೆ ಅಗತ್ಯವಾಗಿದೆ. ಪ್ರಜಾಪ್ರಭುತ್ವ ಮತದಾನಕ್ಕೆ ಸೀಮಿತವಲ್ಲ, ಅದೊಂದು ಜೀವನ ವಿಧಾನವಾಗಿದೆ.

ಸಮಾಜ ಸುಧಾರಣೆಯಲ್ಲಿ ಮಠಮಾನ್ಯಗಳು ಪ್ರಮುಖ ಪಾತ್ರವಹಿಸಿದ್ದು ಸತ್ಯ, ಅಹಿಂಸೆ, ದಯೆ, ಸಹಾನುಭೂತಿ ಸಹಿತ ಜನರಲ್ಲಿ ಸದ್ಗುಣಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿವೆ. ಶ್ರೀ ಮಠವು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು ಉತ್ತಮ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುತ್ತಿದೆ ಎಂದರು.

ಗುಂಡೇಗಾಲದ ಸಾಲೂರು ಮಠದ ಮಲ್ಲಿಕಾರ್ಜುನ ಸ್ವಾಮಿ, ವಿಷಯ ಪರೀವಿಕ್ಷರಾದ ಮಲ್ಲಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.