ಮಂಗಳವಾರ, ಮೇ 24, 2022
30 °C

ಗುಂಡ್ಲುಪೇಟೆ: ಸೀಬೆಹಣ್ಣು ಕೀಳುವಾಗ ಕೃಷಿ ಹೊಂಡಕ್ಕೆ ಬಿದ್ದು ಸಹೋದರಿಯರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಸೀಬೆಹಣ್ಣು ಕೀಳಲು ಹೋಗಿದ್ದ ಅಕ್ಕ ತಂಗಿಯರು ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ  ಘಟನೆ ತಾಲ್ಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ರೇಚಪ್ಪ ಮತ್ತು ವೇದಾ ದಂಪತಿಯ ಪುತ್ರಿಯರಾದ ಪೂಜಿತಾ (14) ಹಾಗೂ  ಪುಣ್ಯ(12) ಮೃತಪಟ್ಟ ಸಹೋದರಿಯರು. ಪೂಜಿತಾ 8ನೇ ತರಗತಿಯಲ್ಲಿ ಓದುತ್ತಿದ್ದರೆ, ಪುಣ್ಯ 6ನೇ ತರಗತಿ ವಿದ್ಯಾರ್ಥಿನಿ.

ರೇಚಪ್ಪ ಅವರ ಕುಟುಂಬ ಜಮೀನಿನ ಮನೆಯಲ್ಲಿ ವಾಸವಿದೆ. ಪೂಜಿತಾ ಹಾಗೂ ಪುಣ್ಯ ಇಬ್ಬರೂ  ಬೆಳಿಗ್ಗೆ ಮನೆಯಲ್ಲಿ ತಿಂಡಿ ತಿಂದು, ಜಮೀನಿಗೆ ಹೋಗಿದ್ದಾರೆ.  ಸೀಬೆ ಮರದಲ್ಲಿದ್ದ ಹಣ್ಣು ಕೀಳಲು ಮರದ ಮೇಲೆ ಹತ್ತಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಇದ್ದ ಕೃಷಿ ಹೊಂಡದಲ್ಲಿ ಬಿದ್ದರು. ನೀರಿನಿಂದ ಮೇಲಕ್ಕೆ‌ಬರಲಾಗದೆ ಮೃತಪಟ್ಟರು ಎಂದು ಗೊತ್ತಾಗಿದೆ.

ಇಬ್ಬರು ಬಾಲಕಿಯರ ಮೃತ ದೇಹಗಳನ್ನು ಕೃಷಿ ಹೊಂಡದಿಂದ ಮೇಲಕ್ಕೆ ಎತ್ತಲಾಗಿದ್ದು, ಈ ವೇಳೆ ಪೋಷಕರು ಹಾಗು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 

ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು