ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ವನ್ಯಧಾಮದಲ್ಲಿ ಅಕ್ರಮ ಮಾಕಳಿ ಬೇರು ಸಂಗ್ರಹ: 6 ಜನರ ಬಂಧನ

ಕಾವೇರಿ ವನ್ಯಧಾಮದ ಕೌದಳ್ಳಿ ವಲಯದಲ್ಲಿ ಎರಡು ವರ್ಷಗಳಲ್ಲಿ ನಾಲ್ಕು ಪ್ರಕರಣ ದಾಖಲು
Last Updated 25 ಆಗಸ್ಟ್ 2020, 14:49 IST
ಅಕ್ಷರ ಗಾತ್ರ

ಹನೂರು: ಕಾವೇರಿ ವನ್ಯಧಾಮದಲ್ಲಿ ಅಕ್ರಮವಾಗಿ ಮಾಕಳಿ ಬೇರು ಸಂಗ್ರಹಿಸುತ್ತಿದ್ದ ತಮಿಳುನಾಡಿನ ಐವರು ಹಾಗೂ ರಾಜ್ಯದ ಒಬ್ಬರು ಸೇರಿದಂತೆ ಆರು ಜನ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ತಮಿಳುನಾಡಿನ ಬಿಳಿಗುಂಡ್ಲು ಗ್ರಾಮದ ಅರುಲ್,ಚಾರ್ಲಿಸ್, ಬಾಲ,ಆರೋಗ್ಯ ಮೇರಿ, ‌ತೆರೆಸಾಹಾಗೂ ತಾಲ್ಲೂಕಿನ ಆಲಂಬಾಡಿ ಗ್ರಾಮದ ಕುಟ್ಟಿ ಬಂಧಿತ ಆರೋಪಿಗಳು.

ಕೌದಳ್ಳಿವಲಯದಬಿಜ್ಜಲಾನೆಗಸ್ತಿನ ಎರಮೋಡ್ಎಂಬಲ್ಲಿಅಕ್ರಮವಾಗಿಅರಣ್ಯವನ್ನುಪ್ರವೇಶಿಸಿದ್ದ ಆರೋಪಿಗಳು ಮಾಕಳಿಬೇರನ್ನು ಸಂಗ್ರಹಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆರು ಜನರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ 35 ಕೆ.ಜಿ ಮಾಕಳಿ ಬೇರು, 2ಉರುಳುವಶಪಡಿಸಿಕೊಂಡುವನ್ಯಜೀವಿಸಂರಕ್ಷಣೆಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಬಿ.ಎನ್.ಕನಕರಾಜು, ಅನಂತರಾಮು, ಅರಣ್ಯ ರಕ್ಷಕರಾದ ಮಲ್ಲಿಕಾರ್ಜುನ್, ಮಂಜುನಾಥ್, ಅಭಿಷೇಕ್ ಇದ್ದರು.

ಎರಡು ವರ್ಷಗಳಲ್ಲಿ ನಾಲ್ಕು ಪ್ರಕರಣ

ಕೌದಳ್ಳಿ ವನ್ಯಜೀವಿ ವಲಯದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಡೆಯುತ್ತಿರುವ ಮಾಕಳಿ ಬೇರು ಅಕ್ರಮ ಸಂಗ್ರಹಣೆಯ ನಾಲ್ಕನೇ ಪ್ರಕರಣ ಇದು. ಇಷ್ಟು ಪ್ರಕರಣಗಳಲ್ಲಿ 24 ಆರೋಪಿಗಳನ್ನುಬಂಧಿಸಲಾಗಿದೆ.

ಮೊದಲನೇ ಪ್ರಕರಣದಲ್ಲಿ 8 ಜನರನ್ನು ಬಂಧಿಸಲಾಗಿತ್ತು ಇವರೆಲ್ಲರೂ ಬಿಳಿಗುಂಡ್ಲು ನಿವಾಸಿಗಳು, ಎರಡನೇ ಪ್ರಕರಣದಲ್ಲಿ ಮತ್ತೆ 8 ಜನರನ್ನು ಬಂಧಿಸಲಾಗಿತ್ತು. ಅವರೆಲ್ಲರೂ ತಾಲ್ಲೂಕಿನ ಗಡಿ ಗ್ರಾಮ ಆಲಂಬಾಡಿ ಗ್ರಾಮದ ನಿವಾಸಿಗಳು. ಮೂರನೇ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಇವರು ಕೂಡ ಬಿಳಿಗುಂಡ್ಲು ನಿವಾಸಿಗಳೇ ಆಗಿದ್ದರು. ಈಗಿನ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಮಂದಿಯಲ್ಲಿ ಐವರು ಬಿಳಿಗುಂಡ್ಲಿನವರ. ಒಬ್ಬರು ಆಲಂಬಾಡಿಯವರು.

ಈವರೆಗೂ ದಾಖಲಾಗಿರುವ ಪ್ರಕರಣಗಳಲ್ಲಿ ಬಂಧಿತರಾಗಿರುವವರೆಲ್ಲರೂ ಬಿಳಿಗುಂಡ್ಲು ಹಾಗೂ ಆಲಂಬಾಡಿ ಗ್ರಾಮದ ನಿವಾಸಿಗಳೆ ಎಂಬುದು ಗಮನಾರ್ಹ.

‘ತಮಿಳುನಾಡಿನ ಬಿಳಿಗುಂಡ್ಲು ಹಾಗೂ ಆಲಂಬಾಡಿಗಳು ಗ್ರಾಮಗಳು ನದಿತೀರದಲ್ಲಿರುವುದರಿಂದ ಎರಡು ಗ್ರಾಮಗಳಲ್ಲೂ ಪರಸ್ಪರ ಸಂಬಂಧಿಕರು ವಾಸವಾಗಿದ್ದಾರೆ. ಮದುವೆ, ಹಬ್ಬ ಸೇರಿದಂತೆ ಇತರೆ ವಿಶೇಷ ಕಾರ್ಯಕ್ರಮಗಳಲ್ಲಿ ಎರಡು ಗ್ರಾಮಗಳ ಜನರೂ ಭಾಗವಹಿಸುತ್ತಾರೆ. ಎರಡು ಗ್ರಾಮಗಳಲ್ಲಿರುವ ಕೆಲವು ಜನರು ಗುಂಪುಸೇರಿ ಮಹಿಳೆಯರೊಂದಿಗೆ ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಾನೂನು ಬಾಹಿರವಾಗಿ ಮಾಕಳಿ ಬೇರು ಸಂಗ್ರಹಿಸುತ್ತಿದ್ದಾರೆ. ಇದರ ಹಿಂದೆ ಇನ್ನು ಕೆಲವು ಜನರಿದ್ದು, ಸಮಗ್ರವಾಗಿ ತನಿಖೆ ನಡೆಸಿ ಅಕ್ರಮವಾಗಿ ಮಾಕಳಿ ಬೇರು ಸಂಗ್ರಹಿಸುತ್ತಿರುವ ಉಳಿದ ಜನರನ್ನೂ ಬಂಧಿಸಲಾಗುವುದು’ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT