ಮಂಗಳವಾರ, ಮಾರ್ಚ್ 21, 2023
23 °C

63 ಹೊಸ ಪ್ರಕರಣ, 60 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 63 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. 60 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. 

ಸದ್ಯ 558 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 33ಕ್ಕೆ ಇಳಿದಿದೆ. 24 ಮಂದಿ ಹೋಂ ಐಸೊಲೇಷನ್‌ಲ್ಲಿದ್ದಾರೆ. 

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 30,825ಕ್ಕೆ ಏರಿದೆ. 29,766 ಮಂದಿ ಗುಣಮುಖರಾಗಿದ್ದಾರೆ. 

ಬುಧವಾರ 1,114 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, 1,576 ವರದಿಗಳು ನೆಗೆಟಿವ್‌ ಬಂದು, 73 ಮಂದಿಗೆ ಸೋಂಕು ಖಚಿತವಾಗಿದೆ. ಜಿಲ್ಲಾಡಳಿತವು ತನ್ನ ವರದಿಯಲ್ಲಿ 63 ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಿದೆ. 

63 ಮಂದಿ ಸೋಂಕಿತರಲ್ಲಿ 21 ಮಂದಿ ಚಾಮರಾಜನಗರ ತಾಲ್ಲೂಕಿನವರು. ಗುಂಡ್ಲುಪೇಟೆಯ 13, ಕೊಳ್ಳೇಗಾಲದ ಆರು, ಹನೂರಿನ 18 ಹಾಗೂ ಯಳಂದೂರಿನ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. 

ಗುಣಮುಖರಾದ 60 ಜನರಲ್ಲಿ ಚಾಮರಾಜನಗರ ತಾಲ್ಲೂಕಿನ 23, ಗುಂಡ್ಲುಪೇಟೆಯ 13, ಕೊಳ್ಳೇಗಾಲದ ಆರು, ಹನೂರಿನ 15 ಹಾಗೂ ಯ‌ಳಂದೂರು ತಾಲ್ಲೂಕಿನ ಮೂವರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.