ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಾರಾಟವಾಗಿದ್ದ ಮಗುವಿನ ರಕ್ಷಣೆ, ಒಬ್ಬನ ಬಂಧನ

Last Updated 21 ಸೆಪ್ಟೆಂಬರ್ 2022, 16:24 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ನಿವಾಸಿ ಬಸವ ಎಂಬುವವರು ₹50 ಸಾವಿರಕ್ಕೆ ಮಾರಾಟ ಮಾರಾಟ ಮಾಡಿದ್ದ ಅವರ ಮಗುವನ್ನು ರಕ್ಷಿಸಲು ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಹೋಟೆಲ್‌ ಕಾರ್ಮಿಕರಾಗಿರುವ ಬಸವ ಅವರು ತಮ್ಮ ಸಹೋದ್ಯೋಗಿ ಖಾಸಿಫ್‌ ಎಂಬುವವರ ನೆರವಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದಂಪತಿಗೆ 25 ದಿನಗಳ ಮಗುವನ್ನು ಮಾರಾಟ ಮಾಡಿದ್ದರು.ವಿಷಯ ತಿಳಿಯುತ್ತಲೇ ಮಂಗಳವಾರ ಮಗುವಿನ ಪೋಷಕರನ್ನು ವಿಚಾರಣೆ ನಡೆಸಿದ್ದ ಪೊಲೀಸರು, ಬಸವ ಕೆಲಸ ಮಾಡುತ್ತಿದ್ದ ಹೋಟೆಲ್‌ ಮಾಲೀಕರ ನೆರವು ಪಡೆದು, ಖಾಸಿಫ್‌ ವಿಚಾರಣೆ ನಡೆಸಿ ಮಗು ಖರೀದಿಸಿದ್ದ ದಂಪತಿಯನ್ನು ಪತ್ತೆ ಮಾಡಿ ಮಗುವನ್ನು
ಕರೆತಂದಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

‘ಮಗು ಹುಟ್ಟಿ ಇನ್ನೂ ಒಂದು ತಿಂಗಳು ಆಗದಿರುವುದರಿಂದ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಿಫ್‌ ಬಂಧನ: ಈ ಮಧ್ಯೆ, ಪ್ರಕರಣ ಸಂಬಂಧ ಮಗುವನ್ನು ಮಂಡ್ಯದ ದಂಪತಿಗೆ ನೀಡಿದ್ದ ಖಾಸಿಫ್ ಅವರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಸವ ಅವರಿಗೆ ಮಗುವನ್ನು ಪಡೆದ ದಂಪತಿಯ ಪರಿಚಯ ಇರಲಿಲ್ಲ. ಬಸವ ಅವರಿಂದ ಮಗುವನ್ನು ಪಡೆದ ಖಾಸಿಫ್‌, ದಂಪತಿಗೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಮಂಡ್ಯ ಜಿಲ್ಲೆಯ ದಂಪತಿ ಬಡವರಾಗಿದ್ದು, ಅವರಿಗೆ 12 ವರ್ಷಗಳಿಂದ ಮಕ್ಕಳಿರಲಿಲ್ಲ. ಅಂಗವೈಕಲ್ಯವನ್ನೂ ಹೊಂದಿದ್ದಾರೆ. ಎಲ್ಲಿಯಾದರೂ ಮಗು ಇದ್ದರೆ ತಿಳಿಸಬೇಕು ಎಂದು ಖಾಸಿಫ್‌ ಅವರಿಗೆ ಹೇಳಿದ್ದರು. ಇತ್ತ ಬಸವ ಅವರು ಬಡತನ ಹಾಗೂ ಪತ್ನಿಗೆ ಚಿಕಿತ್ಸೆ ನೀಡಬೇಕು ಎಂಬ ಉದ್ದೇಶದಿಂದ ಮಗುವನ್ನು ನೀಡಿದ್ದಾರೆ. ಮಾನವೀಯ ದೃಷ್ಟಿಯಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ’ ಎಂದು ಪೊಲೀಸ್‌ ಮೂಲಗಳುತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT