ಶನಿವಾರ, ಆಗಸ್ಟ್ 20, 2022
22 °C

ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ: ಶ್ರೀಕೃತಾ ಜಿಲ್ಲೆಗೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಬಂದಾಗ 625 ಅಂಕಗಳಿಗೆ 618 ಅಂಕಗಳನ್ನು ಗಳಿಸಿ, ಜಿಲ್ಲೆಗೆ ಮೂರನೇ ಸ್ಥಾನಗಳಿಸಿದ್ದ ಇಲ್ಲಿನ ನಿಸರ್ಗ ವಿದ್ಯಾನಿಕೇತನ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಕೃತಾ ಕೆ.ಎಸ್‌. ಈಗ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ. 

ಇಂಗ್ಲಿಷ್‌ ಭಾಷೆ ವಿಷಯದಲ್ಲಿ 95 ಮತ್ತು ಹಿಂದಿಯಲ್ಲಿ 99 ಅಂಕಗಳು ಬಂದಿದ್ದವು. ಇದರಿಂದ ಸಮಾಧಾನಗೊಳ್ಳದ ಶ್ರೀಕೃತಾ ಎರಡೂ ವಿಷಯಗಳ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಅದರ ಫಲಿತಾಂಶ ಬಂದಿದ್ದು, ಇಂಗ್ಲಿಷ್‌ನಲ್ಲಿ ಮೂರು ಅಂಕಗಳು ಹಾಗೂ ಹಿಂದಿಯಲ್ಲಿ ಒಂದು ಹೆಚ್ಚು ಅಂಕ ಬಂದಿದೆ. ಹಾಗಾಗಿ, ಆಕೆಯ ಒಟ್ಟು ಅಂಕಗಳು 622ಕ್ಕೆ ಏರಿಕೆಯಾಗಿದೆ.

‌ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಮೇಘನಾ ಎಂ. 625ಕ್ಕೆ 621‌ ಅಂಕಗಳಿಸಿ ಜಿಲ್ಲೆಗೆ ಮೊದಲ ಮೊದಲ ಸ್ಥಾನಗಳಿದ್ದರು. ಶ್ರೀಕೃತಾಗೆ ಈಗ ಇದಕ್ಕಿಂತಲೂ ಒಂದು ಅಂಕ ಹೆಚ್ಚು ಸಿಕ್ಕಿದೆ. 

ಅಭಿನಂದನೆ: ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್‍ಕುಮಾರ್, ಸಂಯೋಜಕ ರಾಮಕೃಷ್ಣ, ಮುಖ್ಯೋಪಾಧ್ಯಾಯ ಶಂಕರ್ ಅವರು ಶ್ರೀಕೃತಾಳನ್ನು ಅಭಿನಂದಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು