ಸೋಮವಾರ, ಜೂನ್ 21, 2021
27 °C

ಕಾರಾಪುರ ಮಠಕ್ಕೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಉತ್ತರಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಕಾರಾಪುರ ಮಠಕ್ಕೆ ಹದಿನಾರು ವರ್ಷದ ಸಾಗರ್ ಅವರನ್ನು ಗುರುವಾರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ.

ಮಠದ 16ನೇ ಪೀಠಾರೋಹಣ ಮಾಡುವ ಸಾಗರ್ ಅವರ ಸನ್ಯಾಸ ಸ್ವೀಕಾರ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮಗಳು ಕೋವಿಡ್-19 ಹಾವಳಿ ಮುಕ್ತಾಯವಾದ ನಂತರ ಗಣ್ಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಕಾರಾಪುರ ಮಠದ ಬಸವಲಿಂಗ ಸ್ವಾಮೀಜಿ ಘೋಷಿಸಿದ್ದಾರೆ.

ಉತ್ತರಾಧಿಕಾರಿ ಆಗುವ ವಟುಗಳ ಜಾತಕದಲ್ಲಿ ಸನ್ಯಾಸ ಮತ್ತು ಪೀಠಾಧಿಪತಿಯೋಗ ಇರಬೇಕು. ನಂತರ 4 ವರ್ಷ ಕಾಲ ಸನಾತನ ಮನೋಧರ್ಮ, ವೇದಾಧ್ಯಯನದ ಆಸಕ್ತಿ, ವೈರಾಗ್ಯಗಳ ಬಗ್ಗೆ ಪರೀಕ್ಷೆಗಳು ಇರುತ್ತವೆ. ಇವುಗಳಲ್ಲಿ ತೇರ್ಗಡೆ ಆಗಬೇಕು ಎಂದರು.

ಗೌಡರಾದ ಅಂಬಳೆ ಶಿವಕುಮಾರಸ್ವಾಮಿ, ಶಿವರುದ್ರಸ್ವಾಮಿ, ಪ್ರಭುಸ್ವಾಮಿ, ಉಮೇಶ್, ಬಸವಣ್ಣ, ಮಲ್ಲಣ್ಣ, ಗೌರಿಶಂಕರಪ್ಪ, ಶಿವನಂಜಪ್ಪ ಮತ್ತು ನಾಗೇಶ್ ಮತ್ತು ನಾಗಣ್ಣ ಇದ್ದರು.

ಮರೆಯಾಲ ಮಠದ ಸಾಗರ್: ಅಂಬಳೆ ಗ್ರಾಮದ ದೊರೆಸ್ವಾಮಿ ಮತ್ತು ಶೀಲಾ ದಂಪತಿಯ ದ್ವಿತೀಯ ಪುತ್ರ ಸಾಗರ್. ಚಾಮರಾಜನಗರ ತಾಲ್ಲೂಕಿನ ಮರೆಯಾಲ ಮಠದಲ್ಲಿ 10ನೇ ಕಲಿಯುತ್ತಿದ್ದಾರೆ. ಯಳಂದೂರು ಪಟ್ಟಣದಲ್ಲಿ ಪಿಯುಸಿ ಮತ್ತು ಮಠದಲ್ಲಿ ವೇದಾಧ್ಯಯನ, ಜೋತಿಷ್ಯ ಮತ್ತು ಆಗಮ ಶಾಸ್ತ್ರಗಳನ್ನು ಮನನ ಮಾಡಬೇಕಿದೆ.

ಕಾರಾಪುರ ಮಠದ ಪ್ರಾಂಗಣದಲ್ಲಿ ಕ್ರಿ.ಶ. 1010ರಲ್ಲಿ ಚೋಳರಿಂದ ಕಲ್ಮಠ ನಿರ್ಮಾಣ ಮಾಡಲಾಗಿದೆ. ನಂತರ ಮಹದೇಶ್ವರರು ಕೋರಾಣ್ಯಕ್ಕೆ ಹೊರಡುವ ಮೊದಲು ಇಲ್ಲಿ ಸೇವೆ ಸಲ್ಲಿಸಿದ್ದರು. ಗುರುಪರಂಪರೆಯಲ್ಲಿ ಬೆಳೆದ ಮಠದಲ್ಲಿ ವಟುಗಳನ್ನು ಆಧರಿಸುವ ಪದ್ಧತಿ ಹಿಂದಿನಿಂದಲೂ ಇದೆ. ಈ ಪರಂಪರೆಯ ಭಾಗವಾಗಿ ಉತ್ತರಾಧಿಕಾರಿ ಆಯ್ಕೆ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು