ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ‌ ಮಲತಂದೆ ಬಂಧನ

Last Updated 5 ಜನವರಿ 2022, 14:38 IST
ಅಕ್ಷರ ಗಾತ್ರ

ಚಾಮರಾಜನಗರ: ಐದು ವರ್ಷದ ಹೆಣ್ಣುಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಮಲತಂದೆಯನ್ನು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಹೆಣ್ಣು ಮಗುವಿನ ತಾಯಿ ನೀಡಿರುವ ದೂರಿನ ಅನ್ವಯ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು 45 ವರ್ಷದ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿಯು ಹೆಣ್ಣುಮಗುವಿನ ತಾಯಿಯ ಎರಡನೇ ಪತಿಯಾಗಿದ್ದಾರೆ. ಮೊದಲ ಗಂಡನ ಕಿರುಕುಳ ತಾಳಲಾರದೆ ಅವರು ಎರಡು ವರ್ಷಗಳ ಹಿಂದೆ ಆತನಿಂದ ವಿಚ್ಛೇದನ ಪಡೆದಿದ್ದರು. ಈ ದಂಪತಿಗೆ ಎರಡು ಗಂಡು ಮಕ್ಕಳು ಹಾಗೂ ಒಂದು ಹೆಣ್ಣುಮಗು ಆಗಿತ್ತು.

ಮೊದಲ ಪತಿಯಿಂದ ದೂರವಾದ ಬಳಿಕ ಹೆಣ್ಣುಮಗುವಿನ ತಾಯಿಯು ಮೈಸೂರಿನವರಾದ ಆರೋಪಿಯನ್ನು ಮದುವೆಯಾಗಿದ್ದರು. ದಿನಾ ಕುಡಿದು ಬಂದು ಜಗಳವಾಡುತ್ತಿದ್ದ ಕಾರಣಕ್ಕೆ 20 ದಿನಗಳ ಹಿಂದೆ ಅವರು ಮಕ್ಕಳೊಂದಿಗೆ ನಗರದಲ್ಲಿರುವ ತಂದೆಯ ಮನೆಗೆ ಬಂದಿದ್ದರು. ಎರಡನೇ ಗಂಡ ಕಿರುಕುಳ ನೀಡುತ್ತಿದ್ದ ಬಗ್ಗೆ ವಾರದ ಹಿಂದೆ ನಗರದ ಮಹಿಳಾ ಠಾಣೆಯಲ್ಲಿ ದೂರನ್ನೂ ನೀಡಿದ್ದರು.

ಠಾಣೆಗೆ ಆರೋಪಿಯನ್ನು ಕರೆದಿದ್ದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಆರೋಪಿ, ನಗರದಲ್ಲಿ ಬೇರೆ ಮನೆ ಮಾಡಿದ್ದರು.

ಮಂಗಳವಾರ ರಾತ್ರಿ ತಾಯಿಯು ತನ್ನ ತಮ್ಮನ ಹೆಂಡತಿಯ ತಂದೆ ನಿಧನರಾದ ಕಾರಣಕ್ಕೆ ಅವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಆರೋಪಿಯು ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾರೆ.

ರಾತ್ರಿ 9 ಗಂಟೆಗೆ ತಾಯಿ ಮನೆಗೆ ವಾಪಸ್‌ ಬಂದಾಗ ಮಗು ಕುಳಿತುಕೊಳ್ಳಲು ಸಾಧ್ಯವಾಗದೇ ಅಳುತ್ತಿತ್ತು. ವಿಚಾರಿಸಿದಾಗ ಮಗು ನಡೆದ ಘಟನೆಯನ್ನು ವಿವರಿಸಿದೆ.ನಂತರ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT