ಘಟನೆ ವಿವರ: ಗೋಪಾಲಪುರ ಗ್ರಾಮದಲ್ಲಿ ಶನಿವಾರ ಬೆಳಗಿನ ತರಗತಿಗೆ ತೆರಳಲು ತನ್ನ ಶಾಲಾ ವಾಹನಕ್ಕಾಗಿ ಕಾಯುತ್ತಾ ಸೇತುವೆ ಮೇಲೆ ವಿದ್ಯಾರ್ಥಿ ಕುಳಿತಿದ್ದ ವೇಳೆ ಸೇಂಟ್ ಜಾನ್ಸ್ ಖಾಸಗಿ ಶಾಲೆಯ ವಾಹನವನ್ನು ಚಾಲಕ ಹಿಂದಕ್ಕೆ ತೆಗೆಯುತ್ತಿದ್ದಾಗ ಹಿಂಬದಿ ಚಕ್ರವು ವಿದ್ಯಾರ್ಥಿಯ ಬಲಗಾಲಿನ ಮೇಲೆ ಹರಿದಿದೆ. ಕಾಲು ನಜ್ಜುಗುಜ್ಜಾಗಿದೆ. ಸ್ಥಳೀಯರು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ.