ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರೇ ಬೋಧಕರು, ಶಿಕ್ಷಕರೇ ಮಕ್ಕಳು

ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಸಿದ್ಧತೆ, ಶಾಲೆಗಳಲ್ಲಿ ವಿನೂತನ ಕಾರ್ಯಕ್ರಮಗಳ ಆಯೋಜನೆ
Last Updated 24 ಜನವರಿ 2020, 19:35 IST
ಅಕ್ಷರ ಗಾತ್ರ

ಯಳಂದೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಸರ್ಕಾರಿ ಶಾಲೆಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ‘ತೀವ್ರ ನಿಗಾ ಕಲಿಕಾ ತರಗತಿ’ ಮತ್ತು ‘ಮಕ್ಕಳೇಶಿಕ್ಷಕಿ’ಯರಾಗಿ ಸಹಪಾಠಿಗಳ ಮುಂದೆ ವಿಷಯ ಮಂಡಿಸಿ ಚರ್ಚೆ ಮಾಡುವ ಅಭ್ಯಾಸವನ್ನು ಕೆಲವು ಶಾಲೆಗಳಲ್ಲಿ ಮಾಡಲಾಗುತ್ತಿದೆ.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರೇ, ಇಂತಹ ಸೃಜನಶೀಲಚಟುವಟಿಕೆಗಳಲ್ಲಿ ತೊಡಗುವ ಮೂಲಕ ಗಮನ ಸೆಳೆದರು. ಆರಂಭದಲ್ಲಿ ಆತ್ಮವಿಶ್ವಾಸ ತುಂಬಲುಧ್ಯಾನ, ಪ್ರಾಣಾಯಾಮ ಮಾಡಿಸಿ ಏಕಾಗ್ರತೆ ತುಂಬಿದರು.

ಮಕ್ಕಳಲ್ಲಿ ಬೋಧನಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಕಲಿಕೆ ಕುರಿತು ಆಸಕ್ತಿ ಮೂಡಿಸಲುಶಾಲಾ ಶಿಕ್ಷಕರು ಯೋಚಿಸಿದ್ದರ ಫಲವಾಗಿ ಬಾಲಕಿಯರು ಬೋಧಕರಾಗಿ ಕಾರ್ಯನಿರ್ವಹಿಸಿನಿಭಾಯಿಸಿದರು. ಒಂದು ವಾರ ಮೊದಲೇ ಇಡೀ ಕಾರ್ಯಕ್ರಮದ ಅನುಷ್ಠಾನಕ್ಕೆ ತಯಾರಿ ನಡೆಸಿದಮಕ್ಕಳು ತಮ್ಮೊಳಗೆ ಜವಾಬ್ದಾರಿ ಹಂಚಿಕೊಂಡರು.

ಅಂದು ಬ್ಯಾಗ್‌ ರಹಿತವಾಗಿ ಶಾಲೆಗೆ ಬಂದ ವಿದ್ಯಾರ್ಥಿನಿಯರು, ಇಡೀ ದಿನ ತಮ್ಮ ಸಹಪಾಠಿಗಳಬೋಧನೆ ಆಲಿಸಿದರು. ಸಮಾಜ, ವಿಜ್ಞಾನ, ಗಣಿತ ವಿಷಯಗಳನ್ನು ಹೇಳಿಕೊಡುವ ಮೂಲಕಸಹವರ್ತಿಗಳ ಗಮನ ಸೆಳೆದರು.ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಹುರುಪು, ಆಲೋಚನೆ ಬೆಳೆಸುವಶಿಕ್ಷಕರ ಪ್ರಯೋಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

‘ನಮ್ಮ ಶಿಕ್ಷಕರಮಾರ್ಗದರ್ಶನದಂತೆ ನಾವು ಶಿಕ್ಷಕರಾಗಿ ಪಾಠ ಬೋಧಿಸಿದ್ದು ಅತ್ಯಂತ ಖುಷಿಕೊಟ್ಟಿದೆ. ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ತೃಪ್ತಿ ನಮಗಿದೆ.ಶಿಕ್ಷಕರಾಗಿ ಕೆಲಸ ಮಾಡಿದ ನಾವು ಜೀವನಪರ್ಯಂತ ಕಲಿಸುವವರಾದರೆ ಎಷ್ಟು ಚೆನ್ನ ಎಂಬಭಾವನೆ ಮೂಡಿದೆ’ ಎಂದು ವಿದ್ಯಾರ್ಥಿನಿಯರಾದ ವಿದ್ಯಾ, ಶಿಲ್ಪ, ರಮ್ಯ, ಸತ್ಯಪ್ರಿಯ ಅವರು ‘ಪ್ರಜಾವಾಣಿ’ಯೊಂದಿಗೆ ಹರ್ಷ ಹಂಚಿಕೊಂಡರು.

ಮಕ್ಕಳನ್ನು ಏಳಿಸಲು ಮಿಸ್ಕಾಲ್‌: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ, ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು ಶಿಕ್ಷಕರು ಸಿದ್ಧತೆ ನಡೆಸಿದ್ದು, ಪ್ರತಿದಿನ ನಸುಕಿನ 5 ಗಂಟೆಗೆ ವಿದ್ಯಾರ್ಥಿಗಳನ್ನು ನಿದ್ದೆಯಿಂದ ಎಚ್ಚರಿಸಲು ಪೋಷಕರ ಮೊಬೈಲ್‌ಗೆ ಮಿಸ್‌ಕಾಲ್‌ ಕೊಡಲಾಗುತ್ತಿದೆ.

‘ವಿದ್ಯಾರ್ಥಿನಿಯರ ಪೋಷಕರ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಿ, ನಿತ್ಯ ನಸುಕಿನ 5ಗಂಟೆಗೆ ಮಿಸ್‌ಕಾಲ್‌ ಕೊಡುವ ಮೂಲಕ ಅವರ ಮಕ್ಕಳನ್ನು ಓದಿಕೊಳ್ಳಲು ಎಚ್ಚರಿಸುವಂತೆತಿಳಿಸುವ ಕೆಲಸ ಮಾಡಲಾಗುತ್ತಿದೆ. ಶಾಲೆ ಆರಂಭಕ್ಕೂ ಮೊದಲು ಮತ್ತು ಶಾಲೆ ಅವಧಿಪೂರ್ಣಗೊಂಡ ನಂತರ 1 ಗಂಟೆ ಮಕ್ಕಳಿಗೆ ಹೆಚ್ಚುವರಿ ಬೋಧನೆ ಮಾಡಲಾಗುತ್ತಿದೆ’ ಎಂದುಶಿಕ್ಷಕರಾದ ರವಿಕುಮಾರ್, ನಾಗಕನ್ನಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ಇಡೀ ಪಠ್ಯದ ಅಧ್ಯಯನಕ್ಕೆ ಒತ್ತು

‘ಆರಂಭದಲ್ಲಿ, ಇಂತಹ ಅಧ್ಯಾಯದಿಂದ ಇಂತಹದ್ದೇ ಪ್ರಶ್ನೆ, ಅಂಕಗಳ ವಿಂಗಡಣೆ ಮಾಡಿದ
ಪರಿಕಲ್ಪನೆ (ಬ್ಲೂಪ್ರಿಂಟ್‌ ಮಾದರಿ) ಇರುತಿತ್ತು. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳುಅಷ್ಟೇ ಪಾಠಗಳನ್ನು ಮಾತ್ರ ಓದುತ್ತಿದ್ದರು. ಇಡೀ ಪಠ್ಯವಸ್ತು ಅಧ್ಯಯನಕ್ಕೆ ಒತ್ತು ನೀಡುತ್ತಿರಲಿಲ್ಲ.ಹೀಗಾಗಿ, ಅವರ ವ್ಯಕ್ತಿತ್ವ, ಬುದ್ಧಿಮತ್ತೆ ಅರಳಲು ಅವಕಾಶ ಇರಲಿಲ್ಲ.ಈ ವರ್ಷದಿಂದ ಇಂತಹ ಪದ್ಧತಿ ಕೈಬಿಡಲಾಗಿದೆ. ಯಾವ ಅಧ್ಯಯನದಿಂದ ಎಷ್ಟೇ ಅಂಕಗಳಪ್ರಶ್ನೆಯನ್ನಾದರೂ ಕೇಳಬಹುದು. ಜತೆಗೆ, ಕಲಿಕಾ ಖಾತ್ರಿ, ಪ್ರಶ್ನೆ ಕೋಟಿ, ಅನ್ವಯಿಕಪ್ರಶ್ನೆಗಳೊಂದಿಗೆ ದೈನಂದಿನ ಸಮಸ್ಯೆಗಳನ್ನು ಅನ್ವಯಿಸುವ ಪ್ರಶ್ನೋತ್ತರ ಮಾಲಿಕೆಯನ್ನೂಆರಂಭಿಸಲಾಗಿದೆ’ ಎಂದು ಹಿಂದಿ ಶಿಕ್ಷಕ ಮಹದೇವ ಹೇಳಿದರು.

ಬರವಣಿಗೆ ಮಾದರಿ: ಐಎಎಸ್‌/ಕೆಎಎಸ್‌ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿಯಂತೆ ದೀರ್ಘ ಉತ್ತರಬರೆಯಲು ಪ್ರೌಢಹಂತದಿಂದಲೇ ಶಿಕ್ಷಣ ಇಲಾಖೆ ಪ್ರೇರೇಪಿಸುತ್ತಿದೆ.

‘ಕಲಿಕಾರ್ಥಿಗಳಲ್ಲಿ ಬರವಣಿಗೆ ಹವ್ಯಾಸ ಹೆಚ್ಚಿಸಲು ಬಹು ಆಯ್ಕೆ ಪ್ರಶ್ನೆಕಡಿತಗೊಳಿಸಿ, ವಿವರಣಾತ್ಮಕ ಪ್ರಶ್ನಾವಳಿ ನೀಡಲಾಗುತ್ತದೆ. ಕಳೆದ ಸಾಲಿನಲ್ಲಿ ಶೇ 25 ಆಯ್ಕೆ ಮಾಡುವ ಮಾದರಿ ಪ್ರಶ್ನೆಗಳಿದ್ದವು. ಈಗ ಶೇ 20ಕ್ಕಿಂತಲೂ ಕಡಿಮೆ ಇವೆ. ಈ ಮೊದಲು3 ಅಂಕಗಳ 6 ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 9 ಪ್ರಶ್ನೆಗಳನ್ನುಕೇಳಲಾಗಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಎನ್.ಎಂ.ಚಂದ್ರಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT